ಸುಭಾಷ್ ಚಂದ್ರ ಬೋಸ್ ಒಬ್ಬ ರಾಷ್ಟ್ರವಾದಿಗಳಾಗಿದ್ದರು: ಶಂಕರಗೌಡ ಬಿರಾದಾರ್
ಯುವ ಭಾರತ ಸುದ್ದಿ ಬಸವನಬಾಗೇವಾಡಿ : ನೇತಾಜಿ ಸುಭಾಷ್ ಚಂದ್ರ ಬೋಸ್ ಒಬ್ಬ ಭಾರತೀಯ ರಾಷ್ಟ್ರೀಯತಾವಾದಿಯಾಗಿದ್ದು ಭಾರತ ಕಡೆಗೆ ಅವರ ದೇಶಭಕ್ತಿಯು ಅನೇಕ ಭಾರತೀಯರ ಹೃದಯದಲ್ಲಿ ಒಂದು ಗುರುತು ಬಿಟ್ಟಿದೆ ನೇತಾಜಿಯವರು ಸ್ವಾತಂತ್ರ್ಯಗೋಸ್ಕರ ಆಜಾದ ಹಿಂದೆ ಪೌಜ್ ಎಂಬ ಸೈನ್ಯವನ್ನು ಕಟ್ಟಿದ ಧೀಮಂತ ನಾಯಕ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಅವರು ಹೇಳಿದರು
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಏರ್ಪಡಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೆಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಂ ಮುಜೆ ಖೂನ ದೋ, ಮೈ ತುಮ್ಮಿ ಆಜಾದಿ ದುಂಗಾ ಎನ್ನುವ ಮೂಲಕ ಸ್ವಾತಂತ್ರ್ಯದ ಕಹಳೆಯನ್ನೂ ಸಾರಿದವರು ನೇತಾಜಿ ಅವರು ಅವರ ಜನ್ಮ ವಾರ್ಷಿಕೋತ್ಸವವನ್ನು ಪರಾಕ್ರಮ ದಿವಸ ಎಂದು ಆಚರಿಸುತ್ತಿದ್ದೇವೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಸಾಧಾರಣ ನಾಯಕತ್ವ ಕೌಶಲ್ಯ ಮತ್ತು ವರ್ಚಸ್ಸಿ ವಾಗ್ಮಿಮಿಗಳೊಂದಿಗೆ ಅತ್ಯಂತ ಪ್ರಭಾವಶಾಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಪರಿಗಣಿಸಲಾಗಿತ್ತು ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹಲವಾರು ಕೊಡುಗೆಗಳನ್ನು ನೀಡಿದರು ಅವರು ಸ್ವಾತಂತ್ರ್ಯ ಗಳಿಸಲು ಬಳಿಸಿದ ಅವರ ಉಗ್ರಗಾಮಿ ವಿಧಾನ ಅವರ ಸಮಾಜವಾದಿ ನೀತಿಗಳಿಗೆ ಹೆಸರಾಗಿದ್ದವರು ನಮ್ಮ ದೇಶದ ಸ್ವಾತಂತ್ರ್ಯಗೋಸ್ಕರ ಏಕ ದೇಶಗಳ ಸೈನ್ಯದ ಬೆಂಬಲವನ್ನು ಕೂಡ ಪಡೆದುಕೊಂಡಿದ್ದರು ಅವರ ತತ್ವ ಆದರ್ಶ ನಮ್ಮ ಪೀಳಿಗೆಗೆ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಪ್ರಶಾಂತ್ ಮುಂಜಾನೆ ಮಾತನಾಡಿದರು.
ರಾಷ್ಟ್ರೀಯ ಬಸವ ಸೈನ್ಯದ ತಾಲೂಕ ಅಧ್ಯಕ್ಷರಾದ ಸಂಜು ಬಿರಾದಾರ ಮುಖಂಡರಾದ ಶ್ರೀಕಾಂತ್ ಕೊಟ್ರಶೆಟ್ಟಿ ನಿಂಗಪ್ಪಣ್ಣ ಅವಟಿ ಬಸವರಾಜ್ ಕೋಟಿ ಮನ್ನಾನ್ ಶಾಬಾದಿ ಸುನಿಲ್ ಚಿಕ್ಕೋಂಡ ಜಟ್ಟಿಂಗರಾಯ ಮಾಲಗಾರ ಶಂಕರಸಿಂಗ್ ರಜಪೂತ ಸಿದ್ದಲಿಂಗ ಒಡೆಯರ್ ಗುರುರಾಜ್ ವಂದಾಲ ಮಾಂತೇಶ್ ಹೆಬ್ಬಾಳ್ ಬಸಲಿಂಗ ನಂದಿ ವಿನೋದ ಗಬ್ಬುರ್ ಅರುಣ ಗೊಳಸಂಗಿ ಮಹದೇವ್ ನಾಯ್ಕೋಡಿ ವೀರೇಶ್ ಗಬ್ಬೂರು ವಿಜಯ್ ಬ್ಯಾಳಿ ಶಂಕರಗೌಡ ಚಿಕ್ಕೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.