ಕಬ್ಬು : ರೈತರ ಕಾಮಧೇನು- ಪುಸ್ತಕ ಲೋಕಾರ್ಪಣೆ
ಬೆಳಗಾವಿ :
ನಗರದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ದಿ.ವಿ.ಎಸ್.ಹಂಜಿಯವರ ಕಬ್ಬು ರೈತರ ಕಾಮಧೇನು ಪುಸ್ತಕ ಲೋಕಾರ್ಪಣೆ ಮಾಡಲಾಯಿತು.
ಡಾ.ಎ.ಪಿ ಬಿರಾದಾರ ಪಾಟೀಲ ಕೃತಿಯ ಕುರಿತು ಮಾತನಾಡಿ, ಕಬ್ಬು ಬೆಳೆಯುವ ಪ್ರತಿ ಹಂತಗಳು ಹಾಗೂ ಅದರ ಸಂಸ್ಕರಣೆ ಕುರಿತಂತೆ ಈ ಕೃತಿ ಸವಿವರ ಮಾಹಿತಿಯನ್ನು ಒಳಗೊಂಡಿದೆ ,ಇದರ ಸದುಪಯೋಗ ಕಬ್ಬು ಕೃಷಿಯಲ್ಲಿ ತೊಡಗಿಕೊಂಡ ಪ್ರತಿಯೊಬ್ಬರು ಈ ಕೃತಿಯನ್ನು ಸಂಪನ್ಮೂಲವಾಗಿ ಬಳಬಹುದಾದ ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿ, ಪುಸ್ತಕ ಶಾಶ್ವತವಾಗಿ ಉಳಿಯುದರಿಂದ ಅವರ ಕೃಷಿ ಅನುಭವ ಕೃತಿ ರೂಪದಲ್ಲಿ ಆಸಕ್ತ ಕೃಷಿಕರಿಗೆ ದಾರಿದೀಪವಾಗಲಿದೆ ಎಂದರು.
ಡಾ.ಆರ್.ಬಿ.ಖಂಡಗಾವೆ ಮಾತನಾಡಿ, ಹಂಜಿಯವರ ಒಡನಾಟ ಹಾಗೂ ಕಬ್ಬಿನ ಬೆಳೆಯ ಕುರಿತು ಈ ಪುಸ್ತಕದಲ್ಲಿ ಸವಿವರ ನೀಡುವಲ್ಲಿ ಶ್ರಮವಹಿಸಿ ದಾಖಲಿಸಿದ್ದಾರೆ ಎಂದು ಹೇಳಿದರು.
ಡಾ.ಅಶೋಕ ಪಾಟೀಲ ಕೃತಿ ಬಿಡುಗಡೆಗೊಳಿಸಿ ಮಾತನಾಡಿ , ಕಬ್ಬು ಕೃಷಿಯಲ್ಲಿ ಅಧಿಕ ಇಳುವರಿ ಪಡೆಯಲು ಬೇಕಾಗುವ ಮಾರ್ಗಗಳನ್ನು ಲೇಖಕ ವೀರಭದ್ರಪ್ಪ ಹಂಜಿ ಅವರು ಸ್ವತಃ ಅನೇಕ ಪ್ರಯೋಗಗಳನ್ನು ಮಾಡಿ ಅದನ್ನು ಪುಸ್ತಕದಲ್ಲಿ ದಾಖಲಿಸಿದ್ದು ಸಾರ್ಥಕವಾಗಿದೆ ಎಂದು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಸಂಜಯ ಹಂಜಿ, ತಂದೆಯವರ ಆಶೆಯದಂತೆ ಈ ಪುಸ್ತಕದ ಇಂದು ಪ್ರಕಟಗೊಂಡು ಲೋಕಾರ್ಪಣೆ ಆಗುತ್ತಿರುವ ಹಿನ್ನಲೆಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು.
ಲೇಖಕರ ಪರ ಅವರ ನಂದಾ ಹಂಜಿ ಮಾತನಾಡಿ, ಪತಿಯ ಸಾಹಿತ್ಯ ಪ್ರೇಮ ಹಾಗೂ ಸೇವಾಕ್ಷೇತ್ರದ ಅನುಭವಗಳನ್ನು ಹಂಚಿಕೊಂಡರು.
ಹಂಜಿ ಅವರ ಒಡನಾಡಿ, ಆರ್. ಬಿ.ಕಲ್ಯಾಣಿ ಹಾಗೂ ರೈತ ಧುರೀಣ ಪಿ.ಎಸ್.ಬೋಗುರ ಮಾತನಾಡಿ ಅವರ ಜೊತೆ ಕೆಲಸ ಮಾಡಿದ ತೃಪ್ತಿ ಇದೆ ಎಂದು ಹೇಳಿದರು.
ಕೃತಿಗೆ ಅಕ್ಷರ ಜೋಡಣೆ ಕಾರ್ಯವನ್ನು ಮಾಡಿದ ಆರ್. ಆರ್. ಪಾಟೀಲವರನ್ನು ಕಲ್ಯಾಣಿ ಸನ್ಮಾನಿಸಿಲಾಯಿತು. ಸಿದ್ದಾರ್ಥ ಹಂಜಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ವಿನೋದ ಪಾಟೀಲ ವಂದಿಸಿದರು
ಹಂಜಿ ಪರಿವಾರದವರು, ಬಂಧು- ಮಿತ್ರರು ಹಾಗೂ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.