ಹೈಕೋರ್ಟಿಗೆ 24 ರಿಂದ ಮೇ 20 ರವರೆಗೆ ಬೇಸಿಗೆ ರಜೆ
ಯುವ ಭಾರತ ಸುದ್ದಿ ಬೆಂಗಳೂರು :
ಹೈಕೋರ್ಟಿಗೆ ಏಪ್ರಿಲ್ 24 ರಿಂದ ಮೇ 20 ರವರೆಗೆ ಬೇಸಿಗೆ ರಜೆ ಇರಲಿದೆ.
ತುರ್ತು ವಿಚಾರಣೆಗೆ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿಯಲ್ಲಿ ವಿಭಾಗೀಯ ಮತ್ತು ಏಕ ಸದಸ್ಯ ನ್ಯಾಯಮೂರ್ತಿಗಳನ್ನು ಪೀಠಗಳನ್ನು ರಚಿಸಲಾಗಿದೆ.
ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಮಧ್ಯಕಾಲೀನ ಅವಧಿಯಲ್ಲಿ ನಡೆಸಲಾಗುತ್ತದೆ. ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ ರೂಪದ ಅರ್ಜಿ ವಿಚಾರಣೆ ಇರುವುದಿಲ್ಲ. ಈ ಫೈಲಿಂಗ್ ಪೋರ್ಟಲ್ ಮೂಲಕ ಈ ಫೈಲಿಂಗ್ ಮಾಡಬಹುದಾಗಿದೆ ಎಂದು ರಿಜಿಸ್ಟರ್ (ಜುಡಿಸಿಯಲ್) ಎಂ. ಚಂದ್ರಶೇಖರ್ ರೆಡ್ಡಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ರಜಾ ಕಾಲದ ಪೀಠಗಳು ಏಪ್ರಿಲ್ 25, 27, ಮೇ 2, 4, 9, 11,16 ಮತ್ತು 18 ರಂದು ಬೆಂಗಳೂರು, ಧಾರವಾಡ, ಕಲಬುರ್ಗಿಯಲ್ಲಿ ಕಾರ್ಯ ನಿರ್ವಹಿಸಲಿವೆ.