ಇಂದು ಅಥಣಿಗೆ ಬಿ.ಎಸ್. ಯಡಿಯೂರಪ್ಪ

ಯುವ ಭಾರತ ಸುದ್ದಿ ಅಥಣಿ :
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏ.26 ರಂದು ಪಟ್ಟಣಕ್ಕೆ ಆಗಮಿಸಿ ಅಥಣಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರ ಪರ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಪ್ರಭಾರಿ ವಿಜಯಕುಮಾರ ಕೊಡಗನೂರ ತಿಳಿಸಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ, 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಎದುರಿನ ಮೈದಾನದಲ್ಲಿ ಸಾರ್ವ ಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಅಥಣಿ ಮಂಡಲಾಧ್ಯಕ್ಷ ಡಾ.ರವಿ ಸಂಕ ಮಾತನಾಡಿ, ‘ಕ್ಷೇತ್ರದ 260 ಬೂತ್‌ಗಳಲ್ಲಿ ಏ. 27 ರಂದು ಬೆಳಗ್ಗೆ 9ಕ್ಕೆ ಪ್ರಧಾನಿ ಮೋದಿಯವರ ಆನ್‌ಲೈನ್ ವಿಡಿಯೊ ಸಂವಾದದ ನೇರಪ್ರಸಾರ ವ್ಯವಸ್ಥೆ ಏರ್ಪ ಡಿಸಿದ್ದು ಯುವ ಮತದಾರರು, ಕಾರ್ಯಕರ್ತರು ಭಾಗವಹಿಸಬೇಕು ಎಂದರು.
ಪ್ರಭಾಕರ ಚವ್ಹಾಣ, ಸಿದ್ದು ಮಾಳಿ, ಅಶೋಕ ದಾನಗೌಡರ, ಅಭಯ ಸಗರ ಮತ್ತಿತರರಿದ್ದರು.
YuvaBharataha Latest Kannada News