ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ರಮೇಶ ಜಾರಕಿಹೊಳಿ.!
Yuva Bharatha
September 5, 2020
Uncategorized
1,501 Views
ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ರಮೇಶ ಜಾರಕಿಹೊಳಿ.!
ಯುವ ಭಾರತ ಸುದ್ದಿ, ಗೋಕಾಕ್: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೆರಿಸುವ ಮೂಲಕ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯಿಂದ 3.30 ಕೋಟಿ ವೆಚ್ಚದಲ್ಲಿ ಉಪ್ಪಾರಟ್ಟಿ – ಮಮದಾಪೂರ ವರೆಗೆ ಐದು ಕಿಮೀ ರಸ್ತೆ ನಿರ್ಮಾಣ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಂಜನಿಯರಿಂಗ್ ಇಲಾಖೆಯಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ 10 ಕೋಟಿ ವೆಚ್ಚದಲ್ಲಿ ಬೆಟಗೇರಿ ಗ್ರಾಮದಿಂದ ಮೆಳವಂಕಿ ರಸ್ತೆ, ಉಪ್ಪಾರಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಮುಖಂಡರಾದ ಹನುಮಂತ ದುರ್ಗನ್ನವರ, ಹನಮಂತ ಕಿಚಡಿ, ಲಕ್ಕಪ್ಪಾ ಕಡಕೋಳ, ಗುರುಲಿಂಗ ಭಾಗೋಜಿ, ನಾರಾಯಣ ಮೂಡಲಗಿ, ತಿಪ್ಪಣ್ಣಾ ಕಡಕೋಳ, ಸಂತೋಷ ಚಿಗದನ್ನವರ, ಶ್ರೀಕಾಂತ್ ಹೊನಕುಪ್ಪಿ, ರಮೇಶ ತಿಗಡಿ, ಅಡಿವೇಪ್ಪ ಕೊಳವಿ, ಬಸು ನೇಸರಗಿ, ಮಹಾದೇವ ಭಂಡಿ, ಮಹಾದೇವ ಚೂನನ್ನವರ, ಮಹಾದೇವ ವ್ಯಾಪಾರಕಿ, ರಾಮಣ್ಣಾ ಶಿರಸಂಗಿ, ಕಲ್ಲಪ್ಪ ಕಿಚಡಿ, ಸಿದ್ದಪ್ಪ ಆಡಿನ, ಲಕ್ಷ್ಮಣ ಆಡಿನ, ಭೀಮಶಿ ಗದಾಡಿ, ರಾಮಣ್ಣ ಕಡಕೋಳ, ರಂಗಪ್ಪ ನಂದಿ, ಸಂತೋಷ ಕಂಕಣವಾಡಿ, ಪಾಂಡು ಮಜ್ಜಗಿ, ಬಾಳಯ್ಯಾ ಅಜ್ಜನ್ನವರ, ಸಿದ್ದಪ್ಪ ಬೂದಿಗೊಪ್ಪ, ಹನುಮಂತ ಕಡಕೋಳ ಸೇರಿದಂತೆ ಉಪ್ಪಾರಟ್ಟಿ, ಮಮದಾಪೂರ ಗ್ರಾಮಸ್ಥರು ಇದ್ದರು.