ನವದೆಹಲಿ :
ಕೇಂದ್ರ ಸಚಿವ ಸಂಪುಟದ ಪುನರ್ರಚನೆಯಲ್ಲಿ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಅವರನ್ನು ಗುರುವಾರ ಬದಲಾಯಿಸಲಾಗಿದೆ. ರಿಜಿಜು ಅವರ ಬದಲಿಗೆ ಕಾನೂನು ಸಚಿವ ಸ್ಥಾನವನ್ನು ಅರ್ಜುನ್ ರಾಮ್ ಮೇಘವಾಲ್ ಅವರಿಗೆ ನೀಡಲಾಗಿದೆ. ಮೇಘವಾಲ್ ಅವರು ತಮ್ಮ ಅಸ್ತಿತ್ವದಲ್ಲಿರುವ ತಮ್ಮ ಖಾತೆಗಳಿಗೆ ಹೆಚ್ಚುವರಿಯಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವರಾಗಿ ಸ್ವತಂತ್ರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕಿರಣ್ ರಿಜಿಜು ಅವರು ಈಗ ಭೂ ವಿಜ್ಞಾನ ಸಚಿವ ಸ್ಥಾನ ನೀಡಲಾಗಿದೆ. ಈ ಮೊದಲು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಭೂ ವಿಜ್ಞಾನ ಸಚಿವಾಲಯದ ಹೊಣೆ ಹೊತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಿಗೆ ಖಾತೆಗಳನ್ನು ಮರುಹಂಚಿಕೆ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಭೂ ವಿಜ್ಞಾನ ಸಚಿವಾಲಯದ ಖಾತೆಯನ್ನು ಕಿರಣ್ ರಿಜಿಜು ಅವರಿಗೆ ನಿಯೋಜಿಸಲಾಗಿದೆ” ಎಂದು ಅದು ಹೇಳಿದೆ.
ಇದೇ ವೇಳೆ, ಕಾನೂನು ಸಚಿವ ಸ್ಥಾನದಿಂದ ರಿಜಿಜು ಅವರನ್ನು ಬದಲಾಯಿಸಿರುವುದಕ್ಕೆ ಶಿವಸೇನೆ ಪ್ರತಿಕ್ರಿಯಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವಿಟರ್‌ನಲ್ಲಿ ಇದಕ್ಕೆ “ಮಹಾರಾಷ್ಟ್ರದ ತೀರ್ಪಿನ ಮುಜುಗರ ಕಾರಣವೇ? ಅಥವಾ ಮೊದಾನಿ-ಸೆಬಿ ತನಿಖೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಅಲ್ಕಾ ಲಂಬಾ ಕೂಡ ಟ್ವಿಟರ್‌ನಲ್ಲಿ “ಕೇಂದ್ರ ಸರ್ಕಾರವು ತನ್ನ ಇಮೇಜ್ ಉಳಿಸಿಕೊಳ್ಳಲು ರಿಜಿಜು ಅವರನ್ನು ಬದಲಾಯಿಸಿದೆ” ಎಂದು ಹೇಳಿದ್ದಾರೆ.
Check Also
ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ
Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …