Breaking News

ಭಗ್ನಗೊಂಡ ದೇವರ ಫೋಟೋಗಳಿಗೆ ಸಂಸ್ಕಾರ ನೀಡಿದ ವೀರೇಶ

Spread the love

ಭಗ್ನಗೊಂಡ ದೇವರ ಫೋಟೋಗಳಿಗೆ ಸಂಸ್ಕಾರ ನೀಡಿದ ವೀರೇಶ

ಸರ್ವಲೋಕ ಸೇವಾ ಫೌಂಡೇಶನ್ ಮುಖ್ಯಸ್ಥ ವೀರೇಶ ಹಿರೇಮಠ ನೇತೃತ್ವದಲ್ಲಿ 4 ಸಾವಿರ ಭಗ್ನಗೊಂಡ ದೇವರ ಫೋಟೋಗಳಿಗೆ ಹಿಂದೂ ವಿಧಿ-ವಿಧಾನ ಮೂಲಕ ಅಗ್ನಿಸ್ಪರ್ಶ

ಯುವ ಭಾರತ ಸುದ್ದಿ ಬೆಳಗಾವಿ :                          ಕಷ್ಟ ಬಂದಾಗ ಸ್ಮರಿಸಿ ಪೂಜಿಸಿ ಆರಾಧಿಸುವ ದೇವರ ಮೂರ್ತಿಗಳು ಭಗ್ನಗೊಂಡರೇ ಮರದ ಬುಡದಲ್ಲಿಟ್ಟು ಬಿಡುವುದು ಸಾಮಾನ್ಯ. ಆದರೆ, ಎಲ್ಲೆಂದರಲ್ಲಿ ಮರದ ಬುಡದಲ್ಲಿ ಎಸೆದು ಹೋಗುವ ಇಂತಹ ದೇವರ ಭಾವಚಿತ್ರಗಳು ಅನಾಥವಾಗಿ ಬಿದ್ದಿರುವುದರಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವುದೇ ಹೆಚ್ಚು. ಭಗ್ನಗೊಂಡ ಮೂರ್ತಿ, ಫೋಟೋಗಳನ್ನು ಸಂಗ್ರಹಿಸುವ ಅಭಿಯಾನವೊಂದನ್ನು ಹಲವು ವರ್ಷಗಳಿಂದ ಆರಂಭಿಸಿರುವ ಬೆಳಗಾವಿಯ ಸಮಾಜ ಸೇವಕ ವೀರೇಶ ಬಸಯ್ಯ ಹಿರೇಮಠ ಅವರು ಭಗ್ನಗೊಂಡ ದೇವ, ದೇವತೆಗಳ ಫೋಟೋಗಳನ್ನು ಸಂಗ್ರಹಿಸಿ ಧಾರ್ಮಿಕ ವಿಧಿ-ವಿಧಾನ ಮೂಲಕ ಸಂಸ್ಕಾರ ಮಾಡುತ್ತಿರುವುದು ಭಾರಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದು, ಶ್ರೀಗಳಿಂದ ಶ್ಲಾಘನೆ ವ್ಯಕ್ತವಾಗಿದೆ.

ನಗರದ ಬಾಕ್ಸೈಟ್ ರಸ್ತೆಯ ಬಸವ ಕಾಲೋನಿಯಲ್ಲಿ ಶನಿವಾರದಂದು ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಸರ್ವಲೋಕ ಸೇವಾ ಫೌಂಡೇಶನ್ ವತಿಯಿಂದ ಸುಮಾರು ೪ ಸಾವಿರ ಹಿಂದು ದೇವ, ದೇವತೆಗಳ ಭಗ್ನಗೊಂಡಿದ್ದ ಭಾವಚಿತ್ರಗಳನ್ನು ಹಿಂದು ಧರ್ಮದ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ಅಗ್ನಿಸ್ಪರ್ಶ ಮಾಡಿ, ವಿಸರ್ಜಿಸಲಾಯಿತು. ವಿಸರ್ಜನೆ ಮಾಡಿದ ಬೂದಿಯನ್ನು ಬಿಲ್ಪಪತ್ರಿ, ಬನ್ನಿ, ಅರಳೆ, ಆಲದ ಮರದ ಸಸಿಗಳನ್ನು ಹಚ್ಚಿ ಅವುಗಳನ್ನು ಬೆಳೆಸಲು ಬಳಸುತ್ತಿರುವುದು ವಿಶೇಷ.

ನಗರದ ಪ್ರಮುಖ ಸ್ಥಳಗಳಲ್ಲಿರುವ ಬೃಹತ್ ಗಾತ್ರದ ಮರದ ಬುಡಗಳಲ್ಲಿ ರಾಶಿ ಹಾಕಿದ್ದ ಈ ರೀತಿಯ ಭಗ್ನಗೊಂಡ ಫೋಟೋ ಫ್ರೇಮ್‌ಗಳನ್ನು ತಮ್ಮ ಸ್ನೇಹಿತರೊಂದಿಗೆ ಸೇರಿ ತೆರವುಗೊಳಿಸಿದ್ದಾರೆ. ಶ್ರಮದಾನದ ರೀತಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು, ಸಂಗ್ರಹಿಸಲಾದ ಫ್ರೇಮ್‌ಗಳನ್ನು ಫೋಟೋಗಳಿಂದ ಪ್ರತ್ಯೇಕಗೊಳಿಸಿ ಸೂಕ್ತ ವಿಲೇವಾರಿ ಮಾಡಲಾಗುತ್ತಿದೆ. ದೇವರ ಸ್ವರೂಪದಲ್ಲಿ ಪೂಜಿಸಲ್ಪಟ್ಟ ಚಿತ್ರಗಳನ್ನು ವಿಂಗಡಿಸಿ, ಗೌರವಾನ್ವಿತ ರೀತಿಯಲ್ಲಿ ವಿಲೇವಾರಿ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಸರ್ಜನೆ ಕಾರ್ಯದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ರೇಷ್ಮಾ ಪಾಟೀಲ, ಯಲ್ಲೋಜಿರಾವ ಪಾಟೀಲ, ರಾಮ ನಿಲಜಕರ, ಗಜಾನನ ಪಾಟೀಲ, ದೇವಪ್ಪ ಕಾಂಬಳೆ, ಗುರುರಾಜ ವಾಲಿ, ಬಾಳು ಕಣಬರಕರ, ಆದಿ ಪಾಟೀಲ, ಸುರೇಶ ಹಂಚಿನಮನಿ, ವಿಜಯಕುಮಾರ ಮೋರೆ, ಉಜ್ವಲಾ ಗಾವಡೆ, ಮಹಾದೇವಿ ಹಿರೇಮಠ, ಮಾರುತಿ ಕಣಬರ, ಲಿಂಗು ಬುರ್ಲಕಟ್ಟಿ, ಆನಂದ ಬಾತಖಾಂಡೆ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

ಕೋಟ್…
ಮನೆ ಮಂದಿರಗಳನ್ನು ನಿರ್ಮಿಸುವಾಗ ಇಷ್ಟಪಟ್ಟು ಹಾಕಿದ ನಮ್ಮ ನಂಬಿಕೆಯ ದೇವರ ಛಾಯಾಚಿತ್ರ ಮುಂತಾದ ೧೦ ಹಲವು ಧಾರ್ಮಿಕ ಭಾವನೆಗಳುಳ್ಳ ಮೂರ್ತಿಗಳನ್ನು ತಮ್ಮ ಗೃಹಗಳನ್ನು ನವೀಕರಿಸುವ ಸಂದರ್ಭದಲ್ಲಿ ಇಲ್ಲವೇ ಪೂಜಿಸುತ್ತಿದ್ದ ಮೂರ್ತಿಗಳ ಕೈ ಕಾಲುಗಳು ಭಗ್ನಗೊಂಡಾಗ ದಾರಿ ಬದಿ ಇಲ್ಲವೇ ಯಾವುದೇ ಮರದ ಬದಿ ಎಸೆಯಲಾಗುತ್ತೆ. ಇವುಗಳನ್ನು ಸೂಕ್ತ ಸ್ಥಳಗಳಲ್ಲಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಖ್ಯ. ಭಗ್ನಗೊಂಡ ಮೂರ್ತಿಗಳ ನಿರ್ವಹಣೆ ಧರ್ಮ ಜಾಗೃತಿ ಮಾತ್ರವಲ್ಲ, ಕರ್ತವ್ಯ ಕೂಡಾ ಮುಖ್ಯ.
ವೀರೇಶ ಹಿರೇಮಠ, ಸರ್ವಲೋಕ ಸೇವಾ ಫೌಂಡೇಶನ್ ಮುಖ್ಯಸ್ಥ, ಸಮಾಜ ಸೇವಕ.

ನಗರದ ರಸ್ತೆಯ ಬದಿ ಗಿಡಮರಗಳ ಬುಡವೂ ಸೇರಿದಂತೆ ವಿವಿಧೆಡೆ ಎಸೆದ ದೇವರ ತ್ಯಾಜ್ಯ ಫೋಟೋಗಳನ್ನು ಆಯ್ದು, ಅದರ ಫ್ರೇಮ್ ಮತ್ತು ಗ್ಲಾಸ್ (ಗಾಜು)ನ್ನು ಪ್ರತ್ಯೇಕಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವ ಸರ್ವಲೋಕಾ ಸೇವಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಮತ್ತು ಮಾದರಿ. ನೈಸರ್ಗಿಕವಾಗಿ ಗರಿಷ್ಠ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಅಶ್ವತ್ಥ ವೃಕ್ಷಗಳ ರಕ್ಷಣೆಯ ಜೊತೆಗೆ ದೇವರ ತ್ಯಾಜ್ಯ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯುವಲ್ಲಿ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಔಚಿತ್ಯಪೂರ್ಣ ಮತ್ತು ಪ್ರಸ್ತುತವಾಗಿದೆ.
ರೇಷ್ಮಾ ಪಾಟೀಲ, ಉಪಮೇಯರ್.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

six + eighteen =