ಭ್ರಷ್ಟ ಗ್ರಾಮ ಲೇಕ್ಕಾಧಿಕಾರಿ
ಎಸ್ ಬಿ ಪಾಶ್ಚಾಪೂರ
ವಡೇರಹಟ್ಟಿ ಗ್ರಾಮಕ್ಕೆ ವಾರ್ಗವಣೆ.!
ಯುವ ಭಾರತ ವಿಶೇಷ ವರದಿ
ಗೋಕಾಕ: ರಾಜಾಪೂರ ಗ್ರಾಮದಲ್ಲಿ ಕಳೆದ ಆರು ವರ್ಷಗಳಿಂದ ಗ್ರಾಮಲೇಕ್ಕಾಧಿಕಾರಿಯಾಗಿರುವ ಲಂಚಬಾಕ ತಲಾಟಿ ಎಸ್ ಬಿ ಪಾಶ್ಚಾಪೂರ ಬಗ್ಗೆ ಕಳೆದ ಜುಲೈ12ರಂದು “ಯುವ ಭಾರತ” ವಿಶೇಷ ವರದಿ ಪ್ರಕಟಿಸಿತ್ತು ಅದನ್ನು ಗಮನಿಸಿದ ಅಧಿಕಾರಿಗಳು ವಡೇರಹಟ್ಟಿ ಗ್ರಾಮಕ್ಕೆ ವರ್ಗಾವಣೆ ಮಾಡಿದ್ದಾರೆ.
ಪ್ರತಿಯೊಂದು ಕಾಗದು ಪತ್ರಗಳ ವ್ಯವಹಾರಕ್ಕಾಗಿ ರಾಜಾಪೂರ ಗ್ರಾಮಸ್ಥರಿಂದ ಲಂಚ ಪಡೆಯುತ್ತ ಬಂದಿರುವ ಗ್ರಾಮ ಲೇಕ್ಕಾಧಿಕಾರಿ ವಡೇರಹಟ್ಟಿ ಗ್ರಾಮದಲ್ಲಿ ತನ್ನ ಭ್ರಷ್ಟಾಚಾರದ ಖಾತೆ ತೆರೆಯಲು ಮುಂದಾಗಿದ್ದಾನೆ. ಭ್ರಷ್ಟ ಗ್ರಾಮ ಲೇಕ್ಕಾಧಿಕಾರಿ ಸಂತೋಷ ಪಾಶ್ಚಾಪೂರಗೆ ಪ್ರತಿಯೊಂದಕ್ಕೂ ಲಂಚ ನೀಡಲೇಬೇಕಾದ ಪರಿಸ್ಥಿತಿ ವಡೇರಹಟ್ಟಿ ಗ್ರಾಮಸ್ಥರಿಗೆ ಎದುರಾಗುತ್ತದೆ ಎಂದು ವಡೇರಹಟ್ಟಿಯ ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದಕ್ಕೂ ಲಂಚ ಪಡೆಯುವ ಈ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಈಗಾಗಲೇ ರಾಜಾಪುರ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಇನ್ನು ವಡೇರಹಟ್ಟಿ ಗ್ರಾಮಕ್ಕೆ ಕಳೆದ ಕೆಲವು ದಿನಗಳಿಂದ ಪ್ರಭಾರಿಯಾಗಿರುವ ಈತ ಅದೇನು ಮಾಡಿದ್ದಾನೋ ಗೊತ್ತಿಲ್ಲ. ತನಗೆ ಬೇಕಾಗಿದ್ದ ವಡೇರಹಟ್ಟಿ ಗ್ರಾಮಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಇಂತಹ ಲಂಚಬಾಕ ಅಧಿಕಾರಿಯ ವರ್ಗ ವಡೇರಹಟ್ಟಿ ಗ್ರಾಮಸ್ಥರಲ್ಲಿ ಅನುಮಾನ ಮೂಢಿದೆ.
ಜಾತಿ ಆದಾಯ ಪ್ರಮಾಣ ಪತ್ರಕ್ಕೆ 1೦೦, ರಹವಾಸಿ ಪ್ರಮಾಣ ಪತ್ರಕ್ಕೆ 1೦೦, ಮಾಸಿಕ ಪಿಂಚಣಿ ಪ್ರಮಾಣ ಪತ್ರಕ್ಕೆ 1ಸಾವಿರದಿಂದ 2ಸಾವಿರದ ವರೆಗೆ, ವಾರಸಾ ಪ್ರಮಾಣ ಪತ್ರಕ್ಕೆ ಕನಿಷ್ಟ 5೦ಸಾವಿರದಿಂದ 1ಲಕ್ಷದ ವರೆಗೆ, ಜಮೀನು ಡೈರಿಗೆ 1೦ಸಾವಿರ ಹೀಗೆ ಪ್ರತಿಯೊಮದು ಕಾರ್ಯಕ್ಕು ಭ್ರಷ್ಟ ಗ್ರಾಮ ಲೇಕ್ಕಾಧಿಕಾರಿ ಸಂತೋಷ ಪಾಶ್ಚಾಪೂರಗೆ ಹಣ ನೀಡಲೇಬೇಕು. ಹಣ ನೀಡದೆ ಇದ್ದಲ್ಲಿ ಅವರ ಕೆಲಸ ವಿಳಂಭ ಮಾಡುತ್ತ ಆ ಸಮಸ್ಯೆ ಇದೆ. ಈ ಸಮಸ್ಯೆ ಇದೆ ಎಂದು ಕಾಲಹರಣ ಮಾಡುತ್ತ ಬರುತ್ತಾನೆ. ಇಂತಹ ಅಧಿಕಾರಿಗೆ ಶಿಕ್ಷೆ ನೀಡಬೇಕಾದ ಕಂದಾಯ ಅಧಿಕಾರಿಗಳು ಅವನಿಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿ ಅವನ ಭ್ರಷ್ಟಾಚರಕ್ಕೆ ಪೋಷಣೆ ಮಾಡುತ್ತಿದ್ದಾರೇಯೇ ಎಂಬ ಅನುಮಾನಗಳು ಮೂಢತೊಡಗಿವೆ.
ಕಳೆದ ಆರು ವರ್ಷಗಳಿಂದ ಯಾವುದೇ ಗ್ರಾಮಕ್ಕೆ ವರ್ಗಾವಣೆಯಾಗದ ಈ ಅಧಿಕಾರಿಯೂ ರಾಜಾಪೂರದ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಉತ್ತಮ ಸಂಬ0ಧ ಹೊಂದಿದ್ದ ಎನ್ನಲಾಗಿದೆ. ಈಗ ವಡೇರಹಟ್ಟಿ ಗ್ರಾಮಕ್ಕೆ ವರ್ಗಾವಣೆಯಾಗಿರುವ ಈತನ ಹಿಂದೆ ವಡೇರಹಟ್ಟಿ ಸ್ಥಳೀಯ ಜನಪ್ರತಿನಿಧಿಗಳು ಇದ್ದಾರಾ ಎಂಬ ಪ್ರಶ್ನೆಯೂ ಎಲ್ಲರಲ್ಲಿ ಮೂಢಿದೆ.ವರ್ಗಾವಣೆ ಗೊಂಡಿರುವ ಈ ಭ್ರಷ್ಟ ಅಧಿಕಾರಿ ವಡೇರಹಟ್ಟಿ ಗ್ರಾಮದ ಅದೇಷ್ಟು ಬಡಪಾಯಿಗಳ ರಕ್ತ ಹಿರುತ್ತಾನೋ ಎಂಬುದು ಕಾದು ನೋಡಬೇಕಷ್ಟೇ.!