ಮುನಿ ಹತ್ಯೆ ಕುರಿತು ಕೋಡಿ ಶ್ರೀ ನುಡಿ ಏನು ?

ಕೋಲಾರ :
ಕೋಲಾರದ ಲಕ್ಷ್ಮೀಸಾಗರ ಗ್ರಾಮದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮತ್ತೊಂದು ಭವಿಷ್ಯ ನುಡಿದಿದ್ದಾರೆ.
ದೇಶದಲ್ಲಿ ಇನ್ನೂ ಹಲವೆಡೆ ಪ್ರಾಕೃತಿಕ ವಿಕೋಪ ಸಂಭವಿಸುವ ಲಕ್ಷಣ ಇದೆ. ಜೊತೆಗೆ ಮನುಷ್ಯರು ಮೃಗದಂತೆ ವರ್ತಿಸಿ ವಿಕೋಪ ಸಂಭವಿಸಬಹುದು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಜೈನ ಮುನಿಗಳ ಹತ್ಯೆ ನಡೆಯಬಾರದಿತ್ತು. ಆದರೆ ನಡೆದು ಹೋಯಿತು. ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ಈ ಘಟನೆಯಿಂದ ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಇದೆಯೆದು ತಿಳಿದಿದೆ. ಅಂಥವರಿಗೇ ಕಂಟಕ ಇದ್ದರೆ ಯಾರನ್ನು ತಾನೇ ಬಿಡಬಹುದು? ಮನುಷ್ಯನ ಕ್ರೌರ್ಯಕ್ಕೆ ಜೈನಮುನಿಗಳ ಕೊಲೆಯೊಂದು ಉದಾಹರಣೆ ಎಂದು ತಿಳಿಸಿದರು.
ಸದ್ಯ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಕಂಟಕ ಇಲ್ಲ. ಈಗಷ್ಟೇ ಮಗು ಹಾಲು ಕುಡಿಯಲು ಆರಂಭಿಸಿದೆ. ಮಗು ಚೆನ್ನಾಗಿ ಬೆಳೆಯಲಿ, ಯಾವ ತೊಂದರೆಯೂ ಇಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದ್ದು, ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರ ಅಕಾಲಿಕ ಮೃತ್ಯು ಆಗುವ ಸೂಚನೆ ಇದೆ ಎಂದು ಅವರು ಈ ಹಿಂದೆ ತಿಳಿಸಿದ್ದರು.
ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರಕ್ಕ ಪ್ರತಿಕ್ರಿಯಿಸಿದ ಶ್ರೀಗಳು, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ ಎಂದು ನಿಗೂಢ ಅರ್ಥದಲ್ಲಿ ಮಾತನಾಡಿದ್ದರು.
YuvaBharataha Latest Kannada News