ಯಾರಿಗೆ ಸಚಿವ ಹುದ್ದೆ ?

ಯುವ ಭಾರತ ಸುದ್ದಿ ಬೆಂಗಳೂರು:
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಹಾಗೂ ಮಂತ್ರಿಗಳಾಗಿ 8 ಶಾಸಕರು ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸುವರು.
ಪ್ರಮಾಣವಚನ ಸ್ವೀಕರಿಸುವರ ಹೆಸರನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ.
ಪ್ರಮಾಣವಚನ ಸ್ವೀಕರಿಸುವ ಶಾಸಕರ ಹೆಸರು…
1) ಡಾ. ಜಿ. ಪರಮೇಶ್ವರ್
2) ಕೆ.ಎಚ್.ಮುನಿಯಪ್ಪ
3) ಕೆ.ಜೆ. ಜಾರ್ಜ್
4) ಎಂ.ಬಿ.ಪಾಟೀಲ್
5) ಸತೀಶ್ ಜಾರಕಿಹೊಳಿ
6) ಪ್ರಿಯಾಂಕ್ ಖರ್ಗೆ
7) ರಾಮಲಿಂಗಾ ರೆಡ್ಡಿ
8) ಜಮೀರ್ ಅಹ್ಮದ್ ಖಾನ್
ಸರ್ಕಾರದ ಸಚಿವ ಸಂಪುಟಕ್ಕೆ ಸೇರುವ ಶಾಸಕರ ಹೆಸರನ್ನು ಅಖೈರುಗೊಳಿಸಲು ಕಾಂಗ್ರೆಸ್ ಹೈಕಮಾಂಡ್, ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಡ ರಾತ್ರಿಯವರೆಗೂ ಕಸರತ್ತು ನಡೆಸಿದ್ದಾರೆ.
YuvaBharataha Latest Kannada News