ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ಕಿರೀಟ

ಕೇಪ್ ಟೌನ್ :
ವಿಶ್ವ ಕಪ್ ಗೆಲ್ಲುವ ಕನಸು ದಕ್ಷಿಣ ಆಫ್ರಿಕಾ ಪಾಲಿಗೆ ಮತ್ತೆ ನುಚ್ಚುನೂರು ಆಗಿದೆ. ಆಸ್ಟ್ರೇಲಿಯಾ ಮತ್ತೊಮ್ಮೆ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿದೆ.
ಇಂದು ನಡೆದ ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕವನ್ನು ಭರ್ಜರಿಯಾಗಿ ಸೋಲಿಸಿ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
6 ನೇ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿದೆ. ಮಹಿಳೆಯರ T20WC ವಿಶ್ವಕಪ್ ಚಾಂಪಿಯನ್ ಆಗಿ ಆಸ್ಟ್ರೇಲಿಯಾ ಹೊರಹೊಮ್ಮಿದ್ದು , ಚೊಚ್ಚಲ ಪ್ರಶಸ್ತಿ ಗೆಲ್ಲುವ ದಕ್ಷಿಣ ಆಫ್ರಿಕಾದ ಈ ಸಲವು ಈಡೇರಿಲ್ಲ. ಆಸ್ಟ್ರೇಲಿಯಾ ಪಾಲಿಗೆ ಇದು 6 ನೇ ವಿಶ್ವಕಪ್ ಕಿರೀಟ . ಈ ಹಿಂದೆ 2010 , 2012 , 2014 , 2018 ಮತ್ತು 2020 ರಲ್ಲಿ ವಿಶ್ವ ಚಾಂಪಿಯನ್ ಆಗಿತ್ತು . 157 ರನ್‌ಗಳ ಗುರಿ ಬೆನ್ನಟ್ಟಿದ ದ . ಆಫ್ರಿಕಾಗೆ 137/6 ರನ್ ಗಳಿಸಲಷ್ಟೇ ಸಾಧ್ಯವಾಯಿತು . ಎಲ್ಲಾ ವಿಭಾಗದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ ಆಸೀಸ್ ವನಿತೆಯರು ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ .
YuvaBharataha Latest Kannada News