Breaking News

ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣ : ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ

Spread the love

ಜಗತ್ತಿನ ಮೊದಲ ಸಮಾಜವಾದಿ ಬಸವಣ್ಣ : ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ

ಬೆಳಗಾವಿ
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಮಹಾಮಾನವತವಾದಿ ಬಸವಣ್ಣನವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅವರು ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪನಮನ ಮಾಡಿ ಮಾತನಾಡಿದರು. ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಮಾಡಿದ ವಚನ ಚಳವಳಿ ಜಗತ್ತಿನ ಮನುಕುಲದ ಉದ್ಧಾರದ ಚಳವಳಿಗಳಲ್ಲಿ ಮಹತ್ವದ ಸ್ಥಾನವಿದೆ. ಬಸವಣ್ಣನವರು ದೀನ-ದಲಿತ-ನಿರ್ಗತಿಕರ, ಶೋಷಿತರ ಧ್ವನಿಯಾಗಿ ಅವರ ಬಾಳಿನಲ್ಲಿ ಬೆಳಕನ್ನು ತರಲು ತಮ್ಮ ಜೀವನವನ್ನು ಮುಡಿಪಿಟ್ಟರು. ಅವರೆಲ್ಲರಿಗೂ ಬದುಕಿನಲ್ಲಿ ಆಶಾಕಿರಣವನ್ನು ತುಂಬಿ ಆತ್ಮಾಭಿಮಾನದಿಂದ ಬದುಕುವಂತೆ ಮಾಡಿದರು. ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆ, ಕಂದಾಚಾರಗಳ, ಅನಾಚಾರಗಳ ವಿರುದ್ಧ ಸಮರ ಸಾರಿದರು. ಜನಸಾಮಾನ್ಯರಲ್ಲಿ ಅವುಗಳ ಕುರಿತು ಅರಿವು ಮೂಡಿಸಿದರು. ಎಲ್ಲರಿಗೂ ಸಮಬಾಳು ಸಮಪಾಲು ಎಂಬ ತತ್ತ್ವವನ್ನು ಸಾರುವುದರ ಮೂಲಕ ಜಗತ್ತಿನ ಮೊದಲ ಸಮಾಜವಾದಿಯಾದರು. ಸ್ತ್ರೀಯರಿಗೆ ಸಮಾನತೆಯನ್ನು ತಂದು ಕೊಡುವುದರ ಮೂಲಕ ಸ್ತ್ರೀ ಸಮುದಾಯಕ್ಕೆ ಗೌರವ ತಂದುಕೊಟ್ಟರು. ಧರ್ಮ, ಸಾಮಾಜಿಕ, ಸಾಹಿತ್ಯ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಬದಲಾವಣೆಗೆ ಶ್ರೀಕಾರವನ್ನು ಬರೆದರು. ಸರ್ವಜೀವಿಗಳಲ್ಲಿಯೂ ದಯೆ ತೋರಬೇಕೆನ್ನುವ ಅವರ ತತ್ತ್ವಾದರ್ಶಗಳು, ಕಾಯಕ-ದಾಸೋಹ ಸಿದ್ಧಾಂತಗಳು ಮನುಕುಲದ ಉನ್ನತಿಗೆ ಬುನಾದಿಯಾಗಿವೆ ಎಂದರು.
ಡಾ. ಅರ್ಜುನ ಜಂಬಗಿ ನಿರೂಪಿಸಿದರು. ಡಾ. ಬಾಲಾಜಿ ಆಳಂದೆ ವಂದಿಸಿದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

thirteen + nineteen =