ಸಿಎಂ ನೀವೇ ಆಗಬೇಕು; ಡಿಕೆಶಿ ಮುಂದೆ ಬೆಂಬಲಿಗ ಶಾಸಕರ ಪಟ್ಟು !
ಯುವ ಭಾರತ ಸುದ್ದಿ ಬೆಂಗಳೂರು:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದಿಂದ ನೂತನ ಸಿಎಂ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಡಿಕೆಶಿ ಸಿಎಂ ಮಾಡುವಂತೆ ಬೆಂಬಲಿಗ ಶಾಸಕರು ಬಿಗಿ ಪಟ್ಟು ಹಿಡಿದಿದ್ದು, ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ.
ಡಿಸಿಎಂ ಸೇರಿದಂತೆ ಯಾವುದೇ ಕ್ಯಾಬಿನೆಟ್ ಸ್ಥಾನಕ್ಕೂ ಒಪ್ಪಬಾರದು. ಮುಖ್ಯಮಂತ್ರಿ ಮಾಡದಿದ್ದರೆ ಸರಕಾರದ ಭಾಗವಾಗಬೇಡಿ ಎಂದು ಬೆಂಬಲಿಗ ಶಾಸಕರು ಡಿಕೆಶಿಗೆ ಒತ್ತಾಯಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಿಎಂ ಗಾದಿ ರೇಸ್ ನಲ್ಲಿದ್ದು, ಮುಖ್ಯಮಂತ್ರಿ ಆಯ್ಕೆ ವಿಚಾರವೇ ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.