Breaking News

ಗ್ರಾಪಂ ಚುನಾವಣೆ, ಮತಗಟ್ಟೆಯತ್ತ ಅಧಿಕಾರಿ ಹಾಗೂ ಪೋಲಿಸರು.!

Spread the love

ಯುವ ಭಾರತ ಸುದ್ದಿ ,ಗೋಕಾಕ್: ಕೊವಿಡ್ ಸೋಂಕಿತರು ಹಾಗೂ ಕೋವಿಡ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬAಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ತಹಳೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.


ಅವರು, ಸೋಮವಾರದಂದು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಮಾಹಿತಿ ನೀಡಿ, ಕೋವಿಡ್ ಸೋಂಕಿತರಿಗೂ ಮತದಾನ ಮಾಡಲು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋಕಾಕ ತಾಲೂಕಿನಲ್ಲಿ ಒಟ್ಟು ೩೨ ಗ್ರಾಮ ಪಂಚಾಯತಗಳಿಗೆ ದಿ.೨೨ ರಂದು ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಪಂ ೨೮೩ಮತಗಟ್ಟೆ ಸ್ಥಾಪಿಸಲಾಗಿದೆ. ೪೩ ಅತೀ ಸೂಕ್ಷö್ಮ, ೯೭ ಸೂಕ್ಷö್ಮ ಎಂದು ಗುರುತಿಸಲಾಗಿದ್ದು, ಎಲ್ಲ ಮತಗಟ್ಟೆಗಳಲ್ಲಿ ಸೂಕ್ತ ಪೋಲಿಸ್ ವ್ಯವಸ್ಥೆ ಕಲ್ಪಿಸಲಾಗಿದೆ. ೩೫ಚುನಾವಣಾ ಅಧಿಕಾರಿಗಳು, ೩೯ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ೬ ಸೇಕ್ಟೇರ್ ಆಫೀಸರಗಳನ್ನು ನೇಮಕ ಮಾಡಲಾಗಿದೆ. ೪೭ ಮಾರ್ಗಗಳನ್ನು ಗುರುತಿಸಿ ಬಸ್ಸು ಹಾಗೂ ಜೀಪ್ ಸೇರಿ ೪೭ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಗೋಕಾಕ ತಾಲೂಕಿನಲ್ಲಿ ಒಟ್ಟು ೬೨೦ ಸ್ಥಾನಗಳ ಪೈಕಿ ೪ ಸ್ಥಾನಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ೬೧ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ೫೪೪ ಸ್ಥಾನಗಳಿಗೆ ೧.೫೫೪ ಅಭ್ಯರ್ಥಿಗಳು ಸ್ಫರ್ಧಿಸಿದ್ದು, ಒಟ್ಟು ೧.೯೦.೧೫೫ ಮತದಾರರು ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆಂದು ತಹಶೀಲದಾರ ಮಾಹಿತಿ ನೀಡಿದ್ದಾರೆ.

ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆಯಲ್ಲಿ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮತಗಟ್ಟೆಗಳ ಸುತ್ತಮುತ್ತ ಯಾವುದೇ ಅಕ್ರಮ ನಡೆಯದಂತೆ ಮತಗಟ್ಟೆಯ ಚುನಾವಣಾ ಅಧಿಕಾರಿಗಳ ಜೊತೆಗೆ ಪೋಲಿಸ್ ಸಿಬ್ಬಂಧಿಗಳ ರವಾಣೆ ಡಿಎಸ್‌ಪಿ ಜಾವೇದ ಇನಾಮದಾರ ನೇತ್ರತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಿಪಿಐ ಗೋಪಾಲ ರಾಠೋಡ, ಪಿಎಸ್‌ಐಗಳಾದ ನಾಗರಾಜ ಖಿಲಾರೆ, ವಾಲೀಕಾರ, ಅಮ್ಮಿನಭಾವಿ, ಪ್ರಕಾಶ ರಾಠೋಡ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

3 × one =