ಗೋಕಾಕ: ಗೋಕಾಕ ತಾಲೂಕಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಪ್ರಥಮ ಬಾರಿಗೆ ಹಾಪ್ ಸೆಂಚುರಿ ಬಾರಿಸಿದ್ದು ಒಂದೇ ಕುಟುಂಬದ 10 ಜನರಿಗೆ ಕೊರೋನಾ ಧೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.
ಗೋಕಾಕ ತಾಲೂಕಿನಲ್ಲಿ ಇಂದು ಒಟ್ಟು 57 ಪ್ರಕರಣಗಳು ವರದಿಯಾಗಿದ್ದು ಗೋಕಾಕ ನಗರದಲ್ಲಿಯೆ 24 ಸೋಂಕಿತರು ಪತ್ತೆಯಾಗಿದ್ದಾರೆ. ನಗರದ ವಿದ್ಯಾನಗರದ ಒಂದೇ ಕುಟುಂಬದ 10 ಜನರಿಗೆ ಕೊರೋನಾ ತಗುಲಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಗೋಕಾಕ ತಾಲೂಕು ಗ್ರಾಮಾಂತರ ಪ್ರದೇಶಗಳಾದ ದುರದುಂಡಿಯಲ್ಲಿ 9, ಕೌಜಲಗಿ 8, ಅಂಕಲಗಿ 3, ಮೂಡಲಗಿ 2, ಕೊಣ್ಣುರ 2, ಘಟಪ್ರಭಾ, ಬಳೋಬಾಳ, ರಜಾಪೂರ, ಬೆಠಗೇರಿ, ಅಕ್ಕತಂಗೇರಹಾಳ, ಸಾವಳಗಿ ಮತ್ತು ಶಿಂಧಿಕುರಬೇಟನಲ್ಲಿ ತಲಾ ಒಂದು ಪಾಸಿಟಿವ್ ಕೆಸ್ ವರದಿಯಾಗಿವೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಮನೆ ಸುತ್ತಮುತ್ತ ಪ್ರದೇಶಗಳನ್ನು ಸಿಲಡೌನ್ ಮಾಡಲಾಗಿದೆ ಎಂದು ಜಗದೀಶ ಜಿಂಗಿ ತಿಳಿಸಿದ್ದಾರೆ.