ಹನಿ ಟ್ರ್ಯಾಪ್ : ಬ್ಲ್ಯಾಕಮೇಲ ಮಾಡಲು ಹೋಗಿ ಜೈಲಿಗೆ ಸೇರಿದ ದುರುಳರು
ಬೆಳಗಾವಿ .ಜು.30: ಜಮಖಂಡಿ ಮೂಲದ ವ್ಯಕ್ಯಿಯೋರ್ವನನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿ ,ಆತನಿಂದ 10 ಲಕ್ಷ ರೂ ನೀಡುವಂತೆ ಹೇಳಿ ವ್ಯಕ್ತಿಯನ್ನು ಬ್ಲ್ಯಾಕ್ ಮೇಲ ಮಾಡಲು ಹೊರಟಿದ್ದ ಐದು ಜನರ ದುರುಳರು ಇದೀಗ ಬೆಳಗಾವಿ ಹಿಂಡಲಗಾ ಜೈಲಿನ ಅತಿಥಿಗಳಾಗಿದ್ದಾರೆ.
ಹಲವು ದಿನಗಳಿಂದ ಜಮಖಂಡಿ ಮೂಲದ ವ್ಯಕ್ಯಿಯ ಜೊತೆ ನಯವಾದ ಮತ್ತು ಸುಮಧುರ ಮಾತುಗಳಿಂದ ಸ್ನೇಹ ಬೆಳೆಸಿದ ಮೂವರು ಯುವತಿಯರು ತಮ್ಮ ಚಿಟಛಾಟ ದೃಶ್ಯ ಗಳ ಆಡಿಯೋ ವೀಡಿಯೋ ಮಾಡಿಕೊಂಡಿದ್ದಾರೆ.
ಸ್ವಲ್ಪ ದಿನಗಳ ನಂತರ ಸದರಿ ವ್ಯಕ್ತಿಗೆ ಫೊನ ಮಾಡಿ 10 ಲಕ್ಷ ರೂ ನೀಡುವಂತೆ ಒತ್ತಾಯಿಸಿ ಬ್ಲ್ಯಾಕ್ ಮಾಡಲು ಇಳಿದಿದ್ದಾರೆ.ಹಣ ನೀಡದೇ ಹೋದಲ್ಲಿ ಎಲ್ಲ ಆಡಿಯೋ ಮತ್ತು ವಿಡಿಯೋ ದೃಶ್ಯಗಳನ್ನು ಯುಟ್ಯೂಬನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ದುರುಳರ ಮಾತಿಗೆ ವ್ಯಕ್ತಿ ಹೆದರಿಕೊಂಡಿದ್ದಾನೆ. ಈ ವ್ಯವಹಾರ ಕುದುರಿಸಲು ವ್ಯಕ್ತಿ ಯನ್ನು ಬೆಳಗಾವಿಯ ನೆಹರು ನಗರದ ಹೊಟೆಲಯೊಂದರಲ್ಲಿ ಕರೆಯಿಸಿಕೊಂಡು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಕೊನೆಗೂ ಈ ವ್ಯವಹಾರ 5 ಲಕ್ಷ ರೂಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.
ಈ ಬ್ಲ್ಯಾಕ್ ಮೇಲ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಾರ್ಕೇಟ ವಿಭಾಗದ ಎಸಿಪಿ ನಾರಾಯಣ ಭರಮಣಿ ಅವರ ನೇತೃತ್ವದಲ್ಲಿ ಮಾಳಮಾರುತಿ ಪೋಲಿಸ್ ಠಾಣೆಯ ಸಿಪಿಐ ಬಿ.ಆರ..ಗಡ್ಡೆಕರ ಇವರು ದಾಳಿ ನಡೆಸಿ ಹನಿಟ್ರ್ಯಾಪ ಮಾಡುತ್ತಿದ್ದ ತಂಡವನ್ನು ಬಂಧಿಸಿದ್ದಾರೆ.
ಸವದತ್ತಿ ತಾಲೂಕಿನ ಗೌರಿ ಲಮಾಣಿ,ಮಂಜುಳಾ ಜಟ್ಟಣ್ಣವರ, ಉಗರಗೋಳ ಗ್ರಾಮದ ಸಂಗೀತಾ ಕಣಕಿಕೊಪ್ಪ , ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಸದಾಶಿವ ಚಿಪ್ಪಲಕಟ್ಟಿ, ಹಾಗೂ ಬೆಳಗಾವಿ ನೆಹರು ನಗರದ ರಘುನಾಥ್ ಧುಮಾಳೆ ಇವರನ್ನು ಬಂಧಿಸಿದ್ದು . ಬಂಧಿತರಿಂದ ಯೂಟ್ಯೂಬ್ ಚಾನಲ್‌ನ ID card ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.