Breaking News

ಅಲೆಮಾರಿ ಸಮುದಾಯಕ್ಕೆ 10,000 ಮನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಅಲೆಮಾರಿ ಸಮುದಾಯಕ್ಕೆ 10,000 ಮನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಯುವ ಭಾರತ ಸುದ್ದಿ ಇಂಡಿ:
ಜ.೩೧ ಒಳಗಾಗಿ ಎಸ್ಸಿ,ಎಸ್ಟಿ ಅಲೆಮಾರಿ ಸಮುದಾಯಕ್ಕೆ ೧೦ ಸಾವಿರ ಮನೆಗಳನ್ನು ಮಂಜೂರು ಮಾಡಿ,ಆದೇಶಪತ್ರ ನೀಡಲಾಗುತ್ತದೆ.ಅಲೆಮಾರಿಗಳ ಬದುಕು ಅಧ್ಯಯನಕ್ಕಾಗಿ ಆಯೋಗವೊಂದನ್ನು ರಚನೆ ಮಾಡಲಾಗುವುದು,ಮುಖ್ಯಮಂತ್ರಿಗಳ ಜೊತೆ ಚರ್ಚಿ ಶೀಘ್ರದಲ್ಲಿಯೇ ಆಲೆಮಾರಿಗಳ ಬದುಕು ಅಧ್ಯಯನಕ್ಕಾಗಿ ಆಯೋಗ ರಚನೆ ಮಾಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಚೆನ್ನದಾಸರ್,ಹೊಲೆಯ ದಾಸರ್,ಮಾಲದಾಸರ್ ಜನಸೇವಾ ಸಮಿತಿ ಹಾಗೂ ಅಲೆಮಾರಿಗಳ ಸಮುದಾಯಗಳ ಇಂಡಿ ತಾಲೂಕು ಐಕ್ಯತಾ ಸಮಾವೇಶ ಹಾಗೂ ಅಲೆಮಾರಿ ಅಭಿವೃದ್ದಿ ನಿಗಮ ರಚಿಸಿದ ಘನ ಸರ್ಕಾರಕ್ಕೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಲೆಮಾರಿಗಳಿಗೆ ತುಂಡು ಭೂಮಿ ಇಲ್ಲ,ಮನೆ ಇರುವುದಿಲ್ಲ ಎಂಬ ಕೂಗು ಇತ್ತು.ಅವರ ಯಾವುದೇ ದಾಖಲೆಗಳು ನೋಡದೆ ಕೇವಲ ಆಧಾರಕಾರ್ಡ ಆಧಾರದ ಮೇಲೆ ೧೦ ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ.ಅಲೆಮಾರಿಗಳ ಮೂಲಭೂತ ಅಭಿವೃದ್ದಿಗಾಗಿ ರಾಜ್ಯ ಬಿಜೆಪಿ ಸರ್ಕಾರ ೩೦೦ ಕೋಟಿ ಅನುದಾನ ನೀಡಿದೆ.ವಿಧಾನಸೌಧದಲ್ಲಿ ಐಎಎಸ್,ಐಪಿಎಸ್ ಅಧಿಕಾರಿಗಳಾಗಿ ಇರಬೇಕಾಗಿರುವ ಅಲೇಮಾರಿ ಸಮುದಾಯದ ಮಕ್ಕಳು ಬೀದಿಯಲ್ಲಿ ವೇಷಹಾಕಿಕೊಂಡು ತಿರುಗುವುದನ್ನು ಗಮನಿಸಿ,ಅವರ ಬದುಕು ಕಟ್ಟಿಕೊಳ್ಳಲು ಎಸ್ಸಿ,ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ರಾಜ್ಯದ ೨೩ ಲಕ್ಷ ಎಸ್ಸಿ,ಎಸ್ಟಿ ಸಮುದಾಯಕ್ಕೆ ೭೦ ಯುನಿಟ್ ಉಚಿತ ವಿದ್ಯುತ್ ನೀಡಲಾಗಿದ್ದು, ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ೮೦೦ ಕೋಟಿ ನೀಡಲಾಗಿದೆ.ಅಲೆಮಾರಿ ಎಸ್ಸಿ,ಎಸ್ಟಿ ಅಲೆಮಾರಿ ಸಮುದಾಯಕ್ಕೆ ಮನೆ ನಿರ್ಮಿಸಿಕೊಳ್ಳಲು ಈಗ ಸಿಕ್ಕಿರುವ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ರಾಜ್ಯ ಬಿಜೆಪಿ ಸರ್ಕಾರ ೧.೭೫ ಲಕ್ಷ ರೂ.ಗಳಿಂದ ೪ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ ಅವರು ರಾಜ್ಯದ ಪ್ರತಿಷ್ಠಿತ ಶಾಲೆಗಳಲ್ಲಿ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಗೂ ಪೌರಕಾರ್ಮಿಕರು,ಬಡವರು,ಕೂಲಿಕಾರ್ಮಿಕರ ಮಕ್ಕಳಿಗೆ ಪ್ರವೇಶ ನೀಡಲು ಮೊದಲು ಆದ್ಯತೆ ನೀಡಲು ಆದೇಶ ಹೊರಡಿಸಲಾಗಿದೆ.ಶ್ರೀಮಂತರ ಮಕ್ಕಳಿಗೆ ಮಾತ್ರ ಶಿಕ್ಷಣ ಎನ್ನುವ ಕಾಲವೊಂದಿತ್ತು.ಆದರೆ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ನೀಡಿದ ಸಂವಿಧಾನದ ಆಧಾರದ ಮೇಲೆ ಇಂದು ಎಲ್ಲ ಸಮುದಾಯಕ್ಕೆ ಶಿಕ್ಷಣ ನೀಡಿರುವುದರಿಂದ ಇಂದು ಎಲ್ಲ ಸಮುದಾಯದವರು ಶಿಕ್ಷಣದಿಂದ ಮುಂದೆ ಬಂದಿದ್ದಾರೆ.ಸ್ವಾತಂತ್ಯ ಹೋರಾಟಗಾರರ ಪ್ರಕರಣದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ತಮ್ಮ ಪತ್ನಿ ತೀರಿಕೊಂಡ ಸುದ್ದಿಬಂದರೂ ಸಹ ಅದನ್ನು ಗಮನಿಸದೆ ನ್ಯಾಯಾಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಾದ ಮಂಡಿಸಿದ್ದು ಅವರ ಶ್ರದ್ದೆ,ಕರ್ತವ್ಯವನ್ನು ಮೆಚ್ಚುವಂತದ್ದು,ಅಂಬೇಡ್ಕರ್ ಅವರ ಹಾಗೆ ಪ್ರತಿಯೊಬ್ಬರು ಪ್ರಾಮಾಣಿಕತೆ,ಕರ್ತವ್ಯ ನಿಷ್ಠೆ,ಶ್ರದ್ದೆಯನ್ನು ಕಲಿತು ನಮ್ಮ ಬದುಕು ಸ್ವಾರ್ಥಕತೆ ಕಂಡುಕೊಳ್ಳಬೇಕು ಎಂದು ಹೇಳಿದರು.
ಅಲೆಮಾರಿ ಸಮುದಾಯಗಳ ಮುಖಂಡ ಬಾಸ್ಕರದಾಸ್ ಅವರ ಕನಸು ನನಸಾಗಿಸಲು ಅಲೆಮಾರಿಗಳ ಬದುಕು ಬದಲಾವಣೆಗೆ ರಾಜ್ಯ ಬಿಜೆಪಿ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಸಮುದಾಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣಕುಮಾರ,ಪ್ರೀತು ದಶವಂತ,ಸಂಘದ ಜಿಲ್ಲಾಧ್ಯಕ್ಷ ಸಂಜು ದಶವಂತ ಪ್ರಾಸ್ತಾವಿಕವಾಗಿ ಮಾತನಾಡಿ, ಅಲೆಮಾರಿ ಸಮುದಾಯಗಳ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತ್ರತ್ವದ ರಾಜ್ಯ ಬಿಜೆಪಿ ಸರ್ಕಾರ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಎಲ್ಲ ಸಚಿವರು,ಸಂಸದರಿಗೆ ಅಲೆಮಾರಿ ಸಮುದಾಯಗಳ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಅಭಿನವ ಮುರಘೇಂದ್ರ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ,ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ,ಶೀಲವಂತ ಉಮರಾಣಿ,ದಯಾಸಾಗರ ಪಾಟೀಲ,ವಿವೇಕ ಡಬ್ಬಿ,ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ,ದೇವೆಂದ್ರ ಕುಂಬಾರ, ಗಣಪತಿ ಬಾಣಿಕೋಲ,ವೇಂಕಟೇಶ ಕುಲಕರ್ಣಿ,ರಾಮಸಿಂಗ ಕನ್ನೊಳ್ಳಿ,ಮಲ್ಲಿಕಾರ್ಜುನ ಕಿವಡೆ,ಚಂದ್ರಶೇಖರ ಕವಟಗಿ,ಮಲ್ಲು ವಾಲಿಕಾರ,ಶಾಂತಪ್ಪ ದಶವಂತ ಮೊದಲಾದವರು ವೇದಿಕೆ ಮೇಲಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ,ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ಆಶಾಪೂರ,ಬಿ.ಜೆ.ಇಂಡಿ, ಚಂದ್ರಶೇಖರ ದಶವಂತ,ನಾಗು ದಶವಂತ,ಜಯಲಕ್ಷಿ÷್ಮ ದಶವಂತ,ಪಿಡಿಒ ಸಿ.ಜಿ.ಪಾರೆ,ಸುನಂದಾ ದಶವಂತ,ಕುಮಾರ ದಶವಂತ,ಸರಸ್ವತಿ ದಶವಂತ,ರಾಮಣ್ಣ ದಶವಂತ,ಮಹಾದೇವ ದಶವಂತ,ಸುನೀಲ ದಶವಂತ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × 5 =