ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ‘ನಮ್ಮ ಕ್ಲಿನಿಕ್’ ನೆರವಾಗಲಿದೆ- ರಮೇಶ ಜಾರಕಿಹೊಳಿ.!
ಯುವ ಭಾರತ ಸುದ್ದಿ ಗೋಕಾಕ: ರಾಜ್ಯ ಸರಕಾರ ನಿಮ್ಮ ಆರೋಗ್ಯ ನಮ್ಮ ಬದ್ಧತೆ ಎಂಬ ಧ್ಯೇಯವಾಕ್ಯದೊಂದಿಗೆ ಬಡವರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ‘ನಮ್ಮ ಕ್ಲಿನಿಕ್’ ನೆರವಾಗಲಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ಸತೀಶ ನಗರದಲ್ಲಿ ನಮ್ಮ ಕ್ಲೀನಿಕ್ ಆಸ್ಪತ್ರೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಿ, ಮಾತನಾಡಿ ನಗರದಲ್ಲಿ ಸದ್ಯ ಒಂದು ಕಡೆ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮೂರು ಕ್ಲೀನಿಕ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಯಾವುದೇ ಜ್ವರ, ನೆಗಡಿ, ಕೆಮ್ಮು ಹಾಗೂ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ‘ನಮ್ಮ ಕ್ಲಿನಿಕ್’ ನೆರವಾಗಲಿದೆ. ಬೆಳೆಯುತ್ತಿರುವ ಗೋಕಾಕ ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಕಲ್ಪಿಸಲು ನಮ್ಮ ಕ್ಲೀನಿಕ್ ಅವಶ್ಯಕತೆ ಇದ್ದು, ಸರಕಾರದಿಂದ ಇನ್ನು ಹೆಚ್ಚಿನ ಕ್ಲಿನಿಕ ಮಂಜುರು ಮಾಡಿಸಲಾಗುವದು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ರವೀಂದ್ರ ಅಂಟಿನ ಮಾತನಾಡಿ, ಶಾಸಕ ರಮೇಶ ಜಾರಕಿಹೊಳಿ ಅವರ ಜನಪರ ಕಾಳಜಿಯಿಂದ ಗೋಕಾಕ ನಗರಕ್ಕೆ ನಾಲ್ಕು ‘ನಮ್ಮ ಕ್ಲಿನಿಕ್’ ಮಂಜೂರಾಗಿವೆ. ಶಾಸಕರು ಬಡವರ ಮೇಲಿರುವ ಕಾಳಜಿಯಿಂದ ತಾಲೂಕ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ 1೦೦ಹಾಸಿಗೆಗಳ ಮೇಲ್ದರ್ಜೆಗೆರಲಿದೆ ಎಂದರು.
“ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಇ ಹಾಸ್ಪಿಟಲ್ ಒಪಿಡಿ/ಐಪಿಡಿ ವ್ಯವಸ್ಥಗೆ ಶಾಸಕ ರಮೇಶ ಜಾರಕಿಹೊಳಿ ರವಿವಾರದಂದು ಚಾಲನೆ ನೀಡಿದರು. ಜನರು ಕೇಸ್ ಪೇಪರ ಮಾಡಲು ಸರದಿ ಸಾಲಲ್ಲಿ ನಿಲ್ಲುವ ಪರಿಸ್ಥಿತಿಯನ್ನು ತಪ್ಪಿಸಲು ಕೇಸ್ ಪೇಪರ ಡಿಜಿಟಲಿಕರಣಗೊಳಿಸಲಾಗಿದ್ದು, ಕೇಸ್ ಪೇಪರ ಬದಲಾಗಿ ಮೊಬೈಲ್ ಕ್ಯೂ ಆರ್ ಕೋಡ್ ಸ್ಕಾö್ಯನ ವ್ಯವಸ್ಥೆ ಮಾಡಲಾಗಿದೆ. ಸ್ಕಾö್ಯನ ಮೂಲಕ ರೋಗಿಗಳ ವರದಿ ಸಿದ್ಧವಾಗಲಿದೆ. ಇನ್ನುಳಿದ ರೋಗಿಗಳು ಕೇಸ್ ಪೇಪರ ಪಡೆಯಬಹುದಾಗಿದೆ ಎಂದು ವೈದ್ಯಾಧಿಕಾರಿ ಅಂಟಿನ ತಿಳಿಸಿದ್ದಾರೆ”
ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಮುತ್ತಣ್ಣ ಕೊಪ್ಪದ, ಡಾ. ಶಾಂತಾ ಪಿ, ಡಾ. ಪವನಕುಮಾರ, ಡಾ. ಕಿರಣಕುಮಾರ, ಡಾ.ಸಂದೀಪ, ಡಾ.ಉಮರಾಣಿ, ಡಾ.ಚೌಗಲಾ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಯಪ್ಪಗೋಳ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಜಾವೇದ ಗೋಕಾಕ, ದುರ್ಗಪ್ಪ ಶಾಸ್ತಿçಗೊಲ್ಲರ, ಪ್ರಕಾಶ ಮುರಾರಿ ಸೇರಿದಂತೆ ನಗರಸಭೆ ಸದಸ್ಯರು, ಆಸ್ಪತ್ರೆಯ ಸಿಬ್ಬಂಧಿಗಳು ಇದ್ದರು.