Breaking News

ಕಳೆಗಟ್ಟಿದ ಸುವರ್ಣಸೌಧ !

Spread the love

ಕಳೆಗಟ್ಟಿದ ಸುವರ್ಣಸೌಧ !

ಯುವ ಭಾರತ ಸುದ್ದಿ ಬೆಳಗಾವಿ : ಮತ್ತೊಂದು ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗುತ್ತಿದೆ. ಉತ್ತರ ಕರ್ನಾಟಕದ ಶಕ್ತಿಸೌಧ ಎಂದೇ ಗುರುತಿಸಲ್ಪಟ್ಟಿರುವ ಸುವರ್ಣ ಸೌಧದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಚಳಿಗಾಲದ ಅಧಿವೇಶನ ನಡೆಸುವ ಮೂಲಕ ಉತ್ತರ ಕರ್ನಾಟಕ ಜನತೆಯ ಸಮಸ್ಯೆಗೆ ಸ್ಪಂದಿಸಲಿದೆಯಱ ಎನ್ನುವುದು ಕಾದು ನೋಡಬೇಕಿದೆ. ಸೋಮವಾರದಿಂದ ಉಭಯ ತರನಗಳ ವಿಶೇಷ ಅಧಿವೇಶನ 15 ದಿನಗಳ ಕಾಲ ನಡೆಯಲಿದೆ.
ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಇಲ್ಲಿಯ ಸುವರ್ಣ ಸೌಧ ಸಕಲ ಸಜ್ಜಾಗಿದೆ.

ಬೆಂಗಳೂರಿನ ವಿಧಾನಸೌಧದ ಎಲ್ಲಾ ಕಚೇರಿಗಳು ಇದೀಗ ಸುವರ್ಣ ವಿಧಾನಸೌಧದಲ್ಲಿ ತಾತ್ಕಾಲಿಕವಾಗಿ ನೆಲೆಯಾಗಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಬೆಳಗಾವಿಯಲ್ಲಿ ಬೀಡು ಬಿಟ್ಟಿದೆ. ಸಚಿವರು, ಶಾಸಕರು ಇಷ್ಟರಲ್ಲೇ ಬೆಳಗಾವಿಗೆ ಬರಲಿದ್ದಾರೆ. ಕೆಲ ಸಚಿವರು ರವಿವಾರವೇ ಬೆಳಗಾವಿಗೆ ಬರಲಿದ್ದಾರೆ. ಇನ್ನು ಕೆಲ ಸಚಿವರು, ಶಾಸಕರು ಸೋಮವಾರ ಸದನವನ್ನು ಸೇರಿಕೊಳ್ಳಲಿದ್ದಾರೆ. ವಿಧಾನ ಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧ ಇದೀಗ ಕಳೆಗಟ್ಟಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

nine + 2 =