Breaking News

ಗೋಕಾಕ ಜೈಲಿನಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು.!

Spread the love

ಗೋಕಾಕ ಉಪಕರಾಗೃಹದಲ್ಲಿ ವಿಚಾರಣಾಧೀನ ಖೈದಿ ನೇಣಿಗೆ ಶರಣು.!

 

 

ಯುವ ಭಾರತ ಸುದ್ದಿ  ಗೋಕಾಕ:  ನಗರದ ಉಪಕರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನೇಣಿಗೆ ಶರಣಾಗಿರುವ ವಿಚಾರಣಾಧೀನ ಖೈಧಿ ಮೋದಿನಅಲಿ ಗೊಟೆ 24 ಎಂದು ಗುರುತಿಸಲಾಗಿದ್ದು, ಈತ ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ, ಕಳೆದ ಬುಧವಾರದಂದು ಸಂಜೆ ಉಪಕಾರಾಗೃಹದ ಸೇಲ್‌ನ ಹೊರಭಾಗದಲ್ಲಿರುವ ಕಟ್ಟಿಗೆಯ ಜಂತಿಗೆ ಬೇಡಸೀಟನಿಂದ ನೇಣು ಬೀಗಿದುಕೊಂಡಿದ್ದಾನೆ.
ವಿಚಾರಣಾಧೀನ ಖೈದಿ ಮೋದಿನಅಲಿ ಗೊಟೆ ಮೂಲತಃ ಅಥಣಿ ತಾಲೂಕಿನ ತೆಲಸಂಗ ಗ್ರಾಮದವನಾಗಿದ್ದು, ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಉಪ ಕಾರಾಗೃಹಕ್ಕೆ ಮೃತ ವಿಚಾರಣಾಧೀನ ಖೈದಿಯನ್ನು ಕರೆತರಲಾಗಿದೆ. ಈ ಕುರಿತು ಗೋಕಾಕ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Yuva Bharatha

Check Also

ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!

Spread the loveತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!   ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ …

Leave a Reply

Your email address will not be published. Required fields are marked *

1 × two =