Breaking News

ಕಾರ್ಮಿಕರು ಸರಕಾರದ ಸೌಲಭ್ಯ ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಿ-ಶಾಸಕ ರಮೇಶ ಜಾರಕಿಹೊಳಿ.!

Spread the love

ಕಾರ್ಮಿಕರು ಸರಕಾರದ ಸೌಲಭ್ಯ ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಿ-ಶಾಸಕ ರಮೇಶ ಜಾರಕಿಹೊಳಿ.!

 

ಯುವ ಭಾರತ ಸುದ್ದಿ ಗೋಕಾಕ: ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ನಾನಾ ಸೌಲಭ್ಯ ಜಾರಿಗೊಳಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಅವರು, ಶನಿವಾರದಂದು ನಗರದ ತಮ್ಮ ಗೃಹ ಕಚೇರಿ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡಲಾದ ೫ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ‘ವಿದ್ಯಾರ್ಥಿಗಳ ಅವಶ್ಯಕತಾ ಕೀಟ್’ ವಿತರಿಸಿ ಮಾತನಾಡಿದರು.
ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಸದಸ್ಯತ್ವ ಪಡೆದುಕೊಂಡಲ್ಲಿ ಸರಕಾರದಿಂದ ಸಿಗುವ ನಾನಾ ಸೌಲಭ್ಯ ಪಡೆದುಕೊಳ್ಳಲು ಸಹಕಾರಿ ಆಗಲಿದೆ. ಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.
ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸುರೇಶ ಸನದಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಕಾರ್ಮಿಕ ನಿರೀಕ್ಷಕ ಪಾಂಡುರAಗ ಮಾವರಕರ, ಕಾರ್ಮಿಕ ಇಲಾಖೆಯ ಸಿಬ್ಬಂದಿ ರುದ್ರಮನಿ ಹಿರೇಮಠ, ಈರಪ್ಪ ಮಾಲೋಜಿ, ಅಲ್ತಾಫ ಜಕಾತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

14 + 19 =