Breaking News

ಶಾಸಕ ರಮೇಶ ಜಾರಕಿಹೊಳಿ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದಾರೆ- ಅಂಬಿರಾವ ಪಾಟೀಲ.!

Spread the love

ಶಾಸಕ ರಮೇಶ ಜಾರಕಿಹೊಳಿ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದಾರೆ- ಅಂಬಿರಾವ ಪಾಟೀಲ.!


ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅವರೊಂದಿಗೆ ಕೈ ಜೋಡಿಸುವಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮನವಿ ಮಾಡಿದರು.
ಅವರು, ಗೋಕಾಕ ಮತಕ್ಷೇತ್ರದ ಕೊಳವಿ, ಬೆಣಚಿನಮರ್ಡಿ, ಮಕ್ಕಳಗೇರಿ ಹಾಗೂ ಜಮನಾಳ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಶಾಸಕರು ಸರಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದು ಈಗಾಗಲೇ ತೋಟದ ರಸ್ತೆ ಹಾಗೂ ಗ್ರಾಮಗಳ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಆದಷ್ಟು ಬೇಗ ಮುಕ್ತಾಯಗೊಳ್ಳಲಿವೆ ಎಂದು ತಿಳಿಸಿದರು.
ಕೊಳವಿ ಗ್ರಾಮದಲ್ಲಿ ೨ಕೋಟಿ ರೂ ವೆಚ್ಚದ ಬ್ರೀಡ್ಜ್ ಕಂ ಬ್ಯಾರೇಜ, ಮಕ್ಕಳಗೇರಿ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಯಡಿ ೧ಕೋಟಿ ೭೦ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ, ಬೆಣಚಿನಮರ್ಡಿ ಗ್ರಾಮದಲ್ಲಿ ೨ಕೋಟಿ ರೂ ವೆಚ್ಚದಲ್ಲಿ ವೆಚ್ಚದಲ್ಲಿ ಬ್ರೀಡ್ಜ್ ಕಂ ಬ್ಯಾರೇಜ ಹಾಗೂ ಜಮನಾಳ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಯಡಿ ೧ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಮುಖಂಡರುಗಳಾದ ಶಂಕರ ವಣಕಿ, ಅಡಿವೇಶ ಅಂಗಡಿ, ಭರಮಣ್ಣ ಮುತ್ತೆನ್ನವರ, ಶಿವರಾಯಿ ದಂಡಿನ, ಲಕ್ಕಪ್ಪ ಮಾಳಗಿ, ಮುತ್ತೆಪ್ಪ ಬಿರಗಡ್ಡಿ, ಕರೇಪ್ಪ ಬಡಿಗವಾಡ, ಶಿವಾನಂದ ಮಮದಾಪೂರ, ಲಕ್ಕಪ್ಪ ದುರದುಂಡಿ, ಇಕ್ಬಾಲ ಶಿವಾಪುರ, ರಾಮಚಂದ್ರ ದುರದುಂಡಿ, ರಾಮಣ್ಣ ಖಾನಾಪೂರ, ಲಗಮನಗೌಡ ಪಾಟೀ ಸಿದ್ದಪ್ಪ ಗೋದಿ, ಲಕ್ಷö್ಮಣ ಖಿಲಾರಿ, ಪ್ರಕಾಶ ವಡ್ಡರ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!!

Spread the loveನಗರದ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ಪ್ರತಿಭಟನೆ!! ಗೋಕಾಕ: ನಗರದ ಖಾಸಗಿ ಆರೋಗ್ಯ ಆಧಾರ ಆಸ್ಪತ್ರೆಯಲ್ಲಿ ನವಜಾತ ಶಿಶು …

Leave a Reply

Your email address will not be published. Required fields are marked *

six + 3 =