Breaking News

ಬಿಜೆಪಿ ಸರಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ-ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ.!

Spread the love

ಬಿಜೆಪಿ ಸರಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ-ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ.!


ಗೋಕಾಕ: ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ಡಬಲ್ ಎಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವದಾಗಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ವಿಶ್ವಾಸ ವ್ಯಕ್ತಪಡಿಸಿದರು.
ಅವರು, ಸೋಮವಾರದಂದು ಸಂಜೆ ನಗರದ ವಿವೇಕಾನಂದ ನಗರ ೩ನೇ ಕ್ರಾಸ್‌ನ ಎಕ್ಕೇರಿಮಠ ಅವರ ಮನೆ ಮೇಲೆ “ಬೂತ್ ವಿಜಯ ಅಭಿಯಾನ”ಕ್ಕೆ ಬಿಜೆಪಿ ಪಕ್ಷದ ಧ್ವಜ ಕಟ್ಟುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಡಬಲ್ ಎಂಜಿನ್ ಸರಕಾರ ಶೋಷಿತರ, ಬಡವರ, ದೀನ ದಲಿತರ, ರೈತರ ಹಿಂದುಳಿದ ವರ್ಗಗಳ ಹಾಗೂ ಯುವಜನತೆಯ ಅಭ್ಯುದ್ಯಯಕ್ಕಾಗಿ ಅನೇಕ ಯೋಜನೆಳನ್ನು ರಾಜ್ಯ ಸರಕಾರ ಜಾರಿಗೊಳಿಸಿದ್ದು, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ನೇತ್ರತ್ವದಲ್ಲಿ ಪಕ್ಷದ ಸಂಘಟನೆ ಬಲಿಷ್ಠಗೊಳಿಸಲಾಗಿದ್ದು ಬರುವ ಚುನಾವಣೆಯಲ್ಲಿ ಪ್ರತಿ ಬೂತಗಳಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜ ಹಾರಲಿದೆ ಎಂದರು.
ಬೂತ್ ನಂ೧೨೧, ೧೨೨, ೧೨೩ ಹಾಗೂ ಮಹಾಲಿಂಗೇಶ್ವರ ನಗರದ ಬೂತ ನಂ೧೬೩, ೧೬೪ ಸೇರಿದಂರೆ ನಗರ ವಿವಿಧ ಬೂತ್‌ಗಳಲ್ಲಿ “ಬೂತ್ ವಿಜಯ ಅಭಿಯಾನ” ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಸ್ಥಾಯಿ ಸಮಿತಿ ಚೇರಮನ ಸಿದ್ಧಪ್ಪ ಹುಚ್ಚರಾಯಪ್ಪಗೋಳ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಎಕ್ಕೇರಿಮಠ, ನಗರಸಭೆ ಸದಸ್ಯರಾದ ಹರೀಶ ಬೂದಿಹಾಳ, ಯೂಸುಫ ಅಂಕಲಗಿ, ದುರ್ಗಪ್ಪ ಶಾಸ್ತಿçಗಲ್ಲರ, ಜ್ಯೋತಿಭಾ ಸುಭಂಜಿ, ಪ್ರಕಾಶ ಮುರಾರಿ, ಶ್ರೀಶೈಲ ಯಕ್ಕುಂಡಿ, ಸಂತೋಷ ಮಂತ್ರನ್ನವರ, ಬಸವರಾಜ ಮಾಳಗಿ, ಹನಮಂತ ಕಾಳಮ್ಮನಗುಡಿ, ಬಾಬು ಮುಳಗುಂದ, ಕಾಶೀಮ ಕಲಿಪ, ಶ್ರೀಶೈಲ ಪೂಜೇರಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.


Spread the love

About Yuva Bharatha

Check Also

ಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.!

Spread the loveಮೋದಿಯವರ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಭಿರದಲ್ಲಿ ಯುವನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಕ್ತದಾನ.! …

Leave a Reply

Your email address will not be published. Required fields are marked *

two × one =