Breaking News

ಸ್ವಚ್ಛತೆ ಒಂದು ದಿನದ ಕೆಲಸವಲ್ಲ ದೈನಂದಿನ ಜೀವನದಲ್ಲಿ ನಾವು ಅದನ್ನು ಅಳವಡಿಸಿಕೊಳ್ಳಬೇಕು.-ಶಾಸಕ ರಮೇಶ ಜಾರಕಿಹೊಳಿ.!

Spread the love

ಸ್ವಚ್ಛತೆ ಒಂದು ದಿನದ ಕೆಲಸವಲ್ಲ ದೈನಂದಿನ ಜೀವನದಲ್ಲಿ ನಾವು ಅದನ್ನು ಅಳವಡಿಸಿಕೊಳ್ಳಬೇಕು.-ಶಾಸಕ ರಮೇಶ ಜಾರಕಿಹೊಳಿ.!


ಗೋಕಾಕ: ನಮ್ಮ ಗ್ರಾಮಗಳ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ ಹೀಗಾಗಿ ನಾವೆಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯಯುತ ಜೀವನ ನಡೆಸೋಣ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ತಮ್ಮ ಗೃಹ ಕಚೇರಿ ಆವರಣದಲ್ಲಿ ಮಾಲದಿನ್ನಿ, ಕೊಳವಿ, ಬೆಣಚಿನಮರ್ಡಿ, ತವಗ, ಲೊಳಸೂರ ಸೇರಿದಂತೆ ಗೋಕಾಕ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಿಗೆ ೧೫ನೇ ಹಣಕಾಸು ಯೋಜನೆಯಡಿ ಒಟ್ಟು ೨೫ ಕಸವಿಲೇವಾರಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆ ಒಂದು ದಿನದ ಕೆಲಸವಲ್ಲ ದೈನಂದಿನ ಜೀವನದಲ್ಲಿ ನಾವು ಅದನ್ನು ಅಳವಡಿಸಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ಕಸಮುಕ್ತವಾಗಲು ಹೆಚ್ಚಿನ ವಿಶೇಷ ಆದ್ಯತೆ ನೀಡಿದ್ದಾರೆ. ನಮ್ಮ ಸುತ್ತಲು ಸ್ವಚ್ಛತೆಯ ವಾತಾವರಣ ಸೃಷ್ಟಿಸಿ, ಗಿಡ ಮರಗಳನ್ನು ಬೆಳೆಸಿ ತ್ಯಾಜ್ಯ ವಿಲೇವಾರಿಯತ್ತ ಗಮನಹರಿಸಬೇಕು ಎಂದು ಎಲ್ಲ ನಗರ, ಪಟ್ಟಣ ಹಾಗೂ ಗ್ರಾಪಂನ ಅಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ತಿಳಿಸಿದರು.
ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕ ಕಾಂತು ಎತ್ತಿನಮನಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮಾಲದಿನ್ನಿ ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಉಪಾಧ್ಯಕ್ಷೆ ಸೀತವ್ವ ಮೆಳವಂಕಿ, ಬೆಣಚಿನಮರ್ಡಿ ಗ್ರಾಪಂ ಅಧ್ಯಕ್ಷೆ ಸುನಂದಾ ವಡ್ಡರ, ಉಪಾಧ್ಯಕ್ಷೆ ಉದ್ದವ್ವ ಖಿಲಾರಿ, ಕೊಳವಿ ಗ್ರಾಪಂ ಅಧ್ಯಕ್ಷೆ ಮಾಲಾ ವಣಕಿ, ಉಪಾಧ್ಯಕ್ಷ ಬಾಳೇಶ ಮುತ್ತೆಪ್ಪಗೋಳ, ತವಗ ಗ್ರಾಪಂ ಅಧ್ಯಕ್ಷ ಮಂಜುನಾಥ ಶಿಂದಿಗಾರ, ಉಪಾಧ್ಯಕ್ಷೆ ಬೀರವ್ವ ಬಡಕುರಿ, ಲೊಳಸೂರ ಗ್ರಾಪಂ ಅಧ್ಯಕ್ಷ ರಶೀದ ಪೀರಜಾದೆ, ಉಪಾಧ್ಯಕ್ಷೆ ಅಕ್ಕಾತಾಯಿ ಬವಚಿ, ತಾಪಂ ಇಓ ಮುರಳಿಧರ ದೇಶಪಾಂಡೆ, ಸೇರಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

eighteen + nineteen =