ನನಗೆ ಮಂತ್ರಿ ಸ್ಥಾನ ಬೇಡ 2ಎ ಮೀಸಲಾತಿ ನೀಡು ಎಂದು ಹೇಳಿದ್ದೆನೆ-ಬಸನಗೌಡ ಪಾಟೀಲ ಯತ್ನಾಳ!!
ಯುವ ಭಾರತ ಸುದ್ದಿ ಗೋಕಾಕ: ಸಿಎಮ್ ಬಸವರಾಜ ಬೊಮ್ಮಾಯಿ ರಮೇಶ ಜಾರಕಿಹೊಳಿ, ಸಿ ಪಿ ಯೋಗಿಶ್ವರ ಹಾಗೂ ನಿಮ್ಮನ್ನು ಮಂತ್ರಿಮಾಡುತ್ತೆನೆ ಎಂದು ಕರೇದು ಹೇಳಿದರು. ನಾನು ನನಗೆ ಮಂತ್ರಿ ಸ್ಥಾನ ಬೇಡ 2ಎ ಮೀಸಲಾತಿ ನೀಡು ಎಂದು ಹೇಳಿದ್ದೆನೆ ಎಂದು ಸಚಿವ ಸಂಪುಟ ವಿಸ್ತರಣೆ ಗುಟ್ಟನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಟ್ಟು ಕೊಟ್ಟರು.

ನಗರದ ನಡೆದ ಪಂಚಮಸಾಲ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿಗೆ ಅನ್ಯಾಯ ಆದಾಗ ನಾನೇ ಧ್ವನಿ ಎತ್ತಿದೀನಿ. ರಮೇಶ್ ಜಾರಕಿಹೊಳಿಗೆ ನಮ್ಮ ಲಿಂಗಾಯತ ಸಮುದಾಯದವನೇ ಅನ್ಯಾಯ ಮಾಡಿದಾಗ ನಾನು ರಮೇಶ ಪರ ನಿಂತೆ ಎಂದರು.
ರಮೇಶ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ನೀಡಿ ನನಗೆ ೬ತಿಂಗಳ ಸಚಿವ ಸ್ಥಾನ ಬೇಡ ಎಂದು ಹೇಳಿದ್ದೆನೆ. ನನಗೆ ಸಚಿವ ಸ್ಥಾನಕ್ಕಿಂತ ನಮ್ಮ ಸಮಾಜದ ಬಡ ಮಕ್ಕಳ ಭವಿಷ್ಯ ಮುಖ್ಯ ಹೀಗಾಗಿ ಯಾರು ಮಂತ್ರಿ ಆಸೆ ತೋರಿದ್ರು ನಾನು ನನ್ನ ಗುರಿ ಬಿಡಲ್ಲ ಎಂದರು
YuvaBharataha Latest Kannada News