Breaking News

ಉಮೇಶ ಕತ್ತಿ ಅವರ ನಿಧನದಿಂದ ಇಡೀ ರಾಜ್ಯಕ್ಕೆ ಅಪಾರ ಹಾನಿಯಾಗಿದೆ – ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ!

Spread the love

ಉಮೇಶ ಕತ್ತಿ ಅವರ ನಿಧನದಿಂದ ಇಡೀ ರಾಜ್ಯಕ್ಕೆ ಅಪಾರ ಹಾನಿಯಾಗಿದೆ – ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ!

ಗೋಕಾಕ : ಸದಾ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ನಾಡಿನ ಹಿರಿಯ ರಾಜಕಾರಣಿ, ಸಚಿವ ಉಮೇಶ ಕತ್ತಿ ಅವರ ನಿಧನದಿಂದ ಇಡೀ ರಾಜ್ಯಕ್ಕೆ ಅಪಾರ ಹಾನಿಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದರು.
ಇಲ್ಲಿಯ ತಮ್ಮ ಗೃಹ ಕಛೇರಿ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಬುಧವಾರದಂದು ಅಗಲಿದ ಸಚಿವ ಉಮೇಶ ಕತ್ತಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಸಚಿವ ಉಮೇಶ ಕತ್ತಿ ಅವರು ಯಾವಾಗಲೂ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಬಗ್ಗೆ ಅವರಿಗಿರುವ ಕಾಳಜಿ ಎಂದಿಗೂ ಮರೆಯಲಿಕ್ಕೆ ಆಗದು ಎಂದು ಹೇಳಿದರು.
ತಮ್ಮ ಹಾಗೂ ಕತ್ತಿ ಕುಟುಂಬ ಕಳೆದ ೩೦ ವರ್ಷಗಳಿಂದ ಒಂದೇ ಕುಟುಂಬದವರAತೆ ಇದ್ದೇವೆ. ಕತ್ತಿ ಅವರು ನನಗೆ ಹಿರಿಯ ಸಹೋದರನಂತೆ ಇದ್ದರು. ಉತ್ತರ ಕರ್ನಾಟಕಕ್ಕೆ ದೊಡ್ಡ ಶಕ್ತಿಯಾಗಿದ್ದ ಉಮೇಶ ಕತ್ತಿ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಅವರು ಸದಾ ಹೋರಾಟ ಮಾಡುತ್ತಿದ್ದರು. ನೇರ, ನಿಷ್ಠುರವಾದಿಯಾಗಿದ್ದ ಕತ್ತಿ ಅವರ ಅಕಾಲಿಕ ನಿಧನದಿಂದ ನಮ್ಮ ಜಿಲ್ಲೆ, ರಾಜ್ಯ ಹಾಗೂ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಕತ್ತಿ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ಮಧ್ಯಪಾನ ಸ್ವಯಂ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಜಿಪಂ ಮಾಜಿ ಸದಸ್ಯರಾದ ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮಾಜಿ ಉಪಾಧ್ಯಕ್ಷ ಎಂ.ಎA. ಪಾಟೀಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಧಾರವಾಡ ರಂಗಾಯಣ ಅಧ್ಯಕ್ಷ ರಮೇಶ ಪರವಿನಾಯ್ಕರ, ಈರಣ್ಣ ಜಾಲಿಬೇರಿ, ಸುಭಾಸ ಕುರಬೇಟ, ನಿಂಗಪ್ಪಗೌಡ ನಾಡಗೌಡ, ಚಿದಾನಂದ ದೇಮಶೆಟ್ಟಿ, ಶಕೀಲ ಧಾರವಾಡಕರ, ಮುತ್ತೆಪ್ಪ ಮನ್ನಾಪೂರ, ಲಕ್ಷö್ಮಣ ಮಸಗುಪ್ಪಿ, ಕಲ್ಲಪ್ಪ ರಂಜಣಗಿ, ಗುರುರಾಜ ಪಾಟೀಲ, ಮಹಾದೇವ ನಾಡಗೌಡ, ಸಿದ್ರಾಮ ಕುಳ್ಳೂರ, ಬಿಜೆಪಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ಸಚಿವ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಬಾಲಚಂದ್ರ ಜಾರಕಿಹೊಳಿ ಅವರು ಪುಷ್ಪಾರ್ಪಣೆ ಮಾಡಿದರು. ನಂತರ ಮೃತರ ನಿಧನಕ್ಕೆ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.


Spread the love

About Yuva Bharatha

Check Also

ಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.!

Spread the loveಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.! ಗೋಕಾಕ: ಬಿಜೆಪಿ …

Leave a Reply

Your email address will not be published. Required fields are marked *

seventeen − 17 =