Breaking News

ಘಟಪ್ರಭಾ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೋಸಾಯಿಟಿಗೆ, 60ಸಾವಿರ ದಂಡ!

Spread the love

ಘಟಪ್ರಭಾ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೋಸಾಯಿಟಿಗೆ, 60ಸಾವಿರ ದಂಡ!

ಗೋಕಾಕ: ಅರ್ಜಿದಾರರಿಗೆ ಸಕಾಲದಲ್ಲಿ ಮಾಹಿತಿ ಒದಗಿಸದೇ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದ ಇಲ್ಲಿಯ ಘಟಪ್ರಭಾದ ಪ್ರತಿಷ್ಠಿತ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೋಸಾಯಿಟಿ ನಿ., ಘಟಪ್ರಭಾ ಇದರ ಮುಖ್ಯವೈದ್ಯಾಧಿಕಾರಿ (ಸಿಇಓ) ಡಾ.ಬಿ ಕೆ ಎಚ್ ಪಾಟೀಲ ಇವರಿಗೆ ಮಾಹಿತಿ ಆಯೋಗದ ಆಯುಕ್ತರು ೬ ಪ್ರತ್ಯೇಕ ಪ್ರಕರಣಗಳಿಗೆ ಪ್ರತ್ಯೇಕವಾಗಿ ದಿನಾಂಕ ೨೪-೦೨-೨೦೨೬ರಂದು 1೦ಸಾವಿರ ರೂಗಳ ದಂಡವನ್ನು ವಿಧಿಸಿದೆ.

ಗೋಕಾಕ: ಡಾ.ಬಿ ಕೆ ಎಚ್ ಪಾಟೀಲ, ಮುಖ್ಯವೈದ್ಯಾಧಿಕಾರಿ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೋಸಾಯಿಟಿ ನಿ., ಘಟಪ್ರಭಾ.

ಸ್ಥಳೀಯ ನ್ಯಾಯವಾದಿಗಳಾದ ಶಿವಾನಂದ ಕಬ್ಬೂರ, ಈರಣ್ಣ ಅಕ್ಕಿವಾಟ, ಅರವಿಂದ ಬಡಕುಂದ್ರಿ, ಮಾರುತಿ ಕರಿಗಾರ ಹಾಗೂ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೋಸಾಯಿಟಿ ನಿ., ಘಟಪ್ರಭಾ ಇದರ ಸದಸ್ಯರಾದ ಸಂಜಯ ತೇರಣಿ ಮತ್ತು ಘಟಪ್ರಭಾ ನಿವಾಸಿ ಬಸವರಾಜ ಬಡಿಗೇರ ಇವರು ಪ್ರತ್ಯೇಕ ವಿವಿಧ ವಿಷಯಗಳ ಮಾಹಿತಿಯನ್ನು ಜೆಜಿಕೊ ಸೋಸೈಟಿಯ ಮುಖ್ಯವೈದ್ಯಾಧಿಕಾರಿ ಡಾ.ಬಿಕೆ ಎಚ್ ಪಾಟೀಲ ಇವರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಒದಗಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ಗೋಕಾಕ: ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೋಸಾಯಿಟಿ ನಿ., ಘಟಪ್ರಭಾ

ಜೆಜಿಕೊ ಸೋಸೈಟಿಯ ಮುಖ್ಯವೈದ್ಯಾಧಿಕಾರಿ ಡಾ.ಬಿಕೆ ಎಚ್ ಪಾಟೀಲ ಅವರು ಅರ್ಜಿದಾರರಿಗೆ ಮಾಹಿತಿ ನೀಡದೆ. ಆಯೋಗದ ಆದೇಶಗಳನ್ನು ಪಾಲನೆ ಮಾಡದೆ ನಿರ್ಲಕ್ಷö್ಯ ತೋರಿದ್ದು, ಆಗೋಗದ ವಿಚಾರಣೆಗೆ ಪದೆ ಪದೆ ಗೈರು ಹಾಜರಿದ್ದು ಅರ್ಜಿದಾರರಿಗೆ ಮಾಹಿತಿ ನೀಡಲು ವಿಳಂಭ ಮಾಡಿರುವದಾಗಿ ಪರಿಗಣಿಸಿ ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠದ ಮಾಹಿತಿ ಆಯುಕ್ತ ನಾರಾಯಣ ಚನ್ನಾಳ ಅವರು ಆರು ಅರ್ಜಿಗಳಿಗೆ ಪ್ರತ್ಯೇಕ ೧೦ಸಾವಿರ ರೂಪಾಯಿಗಳ ಒಟ್ಟು ೬೦ಸಾವಿರ ದಂಡವನ್ನು ವಿಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಯಾವುದೇ ಸಂಸ್ಥೆಗಳಲ್ಲಿ ಈ ತೆರನಾದ ದಂಡ ವಿಧಿಸಿದ ಪ್ರಕರಣಗಳಿಲ್ಲವೆಂದು ನ್ಯಾಯವಾದಿ ಜಿ ಬಿ ಬಡಕುಂದ್ರಿ ತಿಳಿಸಿದ್ದಾರೆ.

 

 

 


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

two × 3 =