“ಪುಟ್ಟ ಹಣತೆ”
ಡಾ||ಶ್ರೀದೇವಿ ಆನಂದ ಪೂಜಾರಿ.
ನಾಡು ನುಡಿಯ ಸೇವೆಯನ್ನು ಹರುಷದಿಂದ ಮಾಡುವಾಸೆ!
ನಾಡ ಗುಡಿಯ ಹಣತೆಯಾಗಿ ಪ್ರೀತಿಯಿಂದ ಬೆಳಗುವಾಸೆ!
!ನಿಷ್ಠೆ, ತಾಳ್ಮೆ, ಪರಿಶ್ರಮವ ಒಗ್ಗೂಡಿಸಿ ತೈಲವೆರೆದು
ಚೈತನ್ಯದ ಬತ್ತಿಗೆ ಕೈಂಕರ್ಯದ ಕಿಡಿಯ ಮುಡಿಸಿ
ದೈವತ್ವದ ಬೆಳಕ ಬೀರಿ ಅಜ್ಞಾನವ ಕಳೆಯುವಾಸೆ
ನಾಡಗುಡಿಯ ಹಣತೆಯಾಗಿ ಸಂತಸದಿ ಬೆಳಗುವಾಸೆ!
!ಬಿರುಗಾಳಿಗೆ ಹೊಯ್ದಾಡಿ ಅತ್ತಿತ್ತ ತೊನೆದಾಡಿ
ಅಸ್ತಿತ್ವವ ಅಳಿಯದೇ ನಸುನಗುತ್ತ ಬೆಳಕು ಸೂಸಿ
ನಾಡದೇವಿ ಪಾದ ಕುಸುಮ ಅಚ್ಚಳಿಯದೇ ತೋರುವಾಸೆ!
ನಾಡ ಗುಡಿಯ ಹಣತೆಯಾಗಿ ಪ್ರೀತಿಯಿಂದ ಬೆಳಗುವಾಸೆ!
!ಪುಟ್ಟ ಹಣತೆ ದಿಟ್ಟಿಸದೇ ಸುಟ್ಟುಕೊಂಡಿರಿ ಜೋಕೆ
ದಳ್ಳುರಿಯಾಗಿ ನಿಮ್ಮನಿಲ್ಲಗೊಳಿಸಬಹುದು ಹಾಕಿ ರಣಕೇಕೆ
ಭುವನೇಶ್ವರಿಯ ಪೂಜೆಯಲ್ಲಿ ಬೆಳಗುತಿರುವ ದೀವಿಗೆ
ಬೆಳಗುವೆ ನಾ ನಿರಂತರ ಬೆಳಕ ಚೆಲ್ಲುವೆ ನಾ ನಿರಂತರ!