Breaking News

ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ ದಕ್ಷೀಣ ಭಾರತದಲ್ಲೂ ಯಶಸ್ವಿಗೊಳಿಸಿ- ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು.!

Spread the love

ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ ದಕ್ಷೀಣ ಭಾರತದಲ್ಲೂ ಯಶಸ್ವಿಗೊಳಿಸಿ- ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು.!


ಗೋಕಾಕ: ದೇಶಾಧ್ಯಂತ ಉಪ್ಪಾರ ಸಮಾಜ ಬಾಂಧವರನ್ನು ಸಂಘಟಿಸಲು ಪ್ರಾರಂಭಿಸಲಾದ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆಯು ಉತ್ತರ ಭಾರತದಲ್ಲಿ ಯಶಸ್ವಿಯಾಗಿದ್ದು ದಕ್ಷೀಣ ಭಾರತದಲ್ಲೂ ಯಶಸ್ವಿಗೊಳಿಸಲು ಸಮಾಜ ಬಾಂಧವರು ಶ್ರಮಿಸುವಂತೆ ಶ್ರೀ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.
ಅವರು, ರವಿವಾರದಂದು ನಗರದ ಉಪ್ಪಾರಗಲ್ಲಿಯ ಶ್ರೀ ಲೇಪಾಕ್ಷೀ ಕಲ್ಯಾಣ ಮಂಟಪದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆಯ ಉಪ್ಪಾರ ಸಮಾಜದ ವಿಭಾಗೀಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ದೇಶಾಧ್ಯಂತ ೧೦ಕೋಟಿಗೂ ಹೆಚ್ಚು ಉಪ್ಪಾರ ಸಮಾಜ ಬಾಂಧವರಿದ್ದು, ಅವರನ್ನೆಲ್ಲ ಸಂಘಟಿಸಿ ಮೀಸಲಾತಿಗಾಗಿ ದೇಹಲಿಯಲ್ಲಿ ಫೆ.೨೭ ಮತ್ತು ೨೮ರಂದು ಬೃಹತ್ ಸಮಾವೇಶ ನಡೆಸಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗುವದು. ರಾಜ್ಯದಲ್ಲೂ ರಥಯಾತ್ರೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸುವದರೊಂದಿಗೆ ರಾಜ್ಯ ಸರಕಾರ ಮೀಸಲಾತಿ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲು ಒತ್ತಡ ಹೇರಲಾಗುವದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ರಥಯಾತ್ರೆಯ ಮೂಲಕ ಸರಕಾರಗಳ ಕಣ್ಣತೆರೆಸುವಂತೆ ಮಾಡಬೇಕಿದೆ. ಇದಕ್ಕೆ ಎಲ್ಲ ಜಿಲ್ಲಾಧ್ಯಕ್ಷರು, ತಾಲೂಕು ಮಟ್ಟದ ಪದಾಧಿಕಾರಿಗಳು, ಸಮಾಜದ ಮುಖಂಡರು ಶ್ರಮಿಸಿ ಸಮಾಜ ಬಾಂಧವರನ್ನು ಜಾಗೃತಗೊಳಿಸಲು ಕಾರ್ಯಪ್ರವೃತ್ತರಾಗಬೇಕು.
ಈ ಸಭೆಯಲ್ಲಿ ಮುಖಂಡರುಗಳು ನೀಡಿದ ಸಲಹೆಯನ್ನು ರಾಜ್ಯ ಸಮೀತಿಯ ಸಭೆಯಲ್ಲಿ ಅಂತಿಮ ರೂಪು ರೋಷೆಗಳನ್ನು ರೂಪಿಸಲಾಗುವದು. ರಥಯಾತ್ರೆಯನ್ನು ಉತ್ತರ ಕರ್ನಾಟಕದಿಂದಲೇ ಪ್ರಾರಂಭಿಸಲಾಗುವದು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಗಮನಸೆಳೆದು ಮೀಸಲಾತಿಗೆ ಸಹಕಾರಿಯಾಗುವ ರೀತಿಯಲ್ಲಿ ಸಮಾಜ ಬಾಂಧವರನ್ನು ಸೇರಿಸಿ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸುವಂತೆ ಕರೆ ನೀಡಿದ ಅವರು ಗೋಕಾಕ ಹೊರವಲಯದಲ್ಲಿ ಸ್ಥಾಪಿಸಲಾಗುವ ಶಾಕಾ ಗುರುಪೀಠಕ್ಕೆ ಎಲ್ಲರೂ ತನುಮನದಿಂದ ಸಹಕಾರ ನೀಡಬೇಕು. ಇದನ್ನು ಈ ಭಾಗದ ಧಾರ್ಮಿಕ ಶ್ರದ್ಧಾಕೇಂದ್ರವನ್ನಾಗಿ ಮಾಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದರು.


ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಎಸ್ ಎಮ್ ಹತ್ತಿಕಟಗಿ, ಉಪ್ಪಾರ ಸಮಾಜದ ರಾಜ್ಯ ಕಾರ್ಯಧ್ಯಕ್ಷ ಲಕ್ಷö್ಮಣ ಉಪ್ಪಾರ, ಯುವಕ ಸಂಘದ ಗೌರವಾಧ್ಯಕ್ಷ ಭರಮಪ್ಪ ಉಪ್ಪಾರ, ಉಪಾಧ್ಯಕ್ಷ ಹನಮಂತ ಉಪ್ಪಾರ, ಅರ್ಜುನ ನಾಯಿಕವಾಡಿ, ಬೆಳಗಾವಿ ಜಿಲ್ಲಾಧ್ಯಕ್ಷ ಜಿ ಎಸ್ ಉಪ್ಪಾರ, ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳಾದ ರಾಮಪ್ಪ, ಮಲ್ಲು ಶಿವಣ್ಣವರ, ಶರಣಪ್ಪ, ಕವಿತಾ ರಾಜೇಶÀ, ರಮೇಶ, ಜಯಕುಮಾರ, ಸಹದೇವ ಉಪ್ಪಾರ, ಪಾ ಗುಂಡಪ್ಪ, ಭೀಮಶಿ ಪಾಟೀಲ, ಮಲ್ಲಿಕಾರ್ಜುನ ಕಟ್ಟಿಮನಿ, ಲಕ್ಕಪ್ಪ ಗೋಕಾಕ ತಾಲೂಕ ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷರುಗಳಾದ ಅಡಿವೆಪ್ಪ ಕಿತ್ತೂರ, ಕುಶಾಲ ಗುಡೇನ್ನವರ, ವಿಠ್ಠಲ ಮೆಳವಂಕಿ, ವಾಯ್ ಎಲ್ ದುರದುಂಡಿ, ಮುಖಂಡರುಗಳಾದ ಬಸವರಾಜ ಆಯಟ್ಟಿ, ಶಂಕರ ಬಿಲಕುಂದಿ, ಮುತ್ತೆಪ್ಪ ಕುಳ್ಳೂರ, ಮಲ್ಲಿಕಾರ್ಜುನ ಚೌಕಾಶಿ, ಶಿವು ಕುಡ್ಡೆಮ್ಮಿ, ಭೀಮಶಿ ಹಳ್ಳೂರ, ಎಮ್ ಬಿ ಕಲಕುಟ್ರಿ, ಅಡಿವೆಪ್ಪ ಬಿಲಕುಂದಿ, ರಾಜಶೇಖರ ಮೋಪಗಾರ, ಬಸವರಾಜ ಖಾನಪ್ಪನವರ, ಹನಮಂತ ಖಿಚಡಿ, ಪರಸಪ್ಪ ಚುನನ್ನವರ, ಯಲ್ಲಪ್ಪ ಸುಳ್ಳನವರ, ಲಕ್ಷö್ಮಣ ಮಂಗಿ, ಪುಂಡಲೀಕ ಉಪ್ಪಾರ, ಮುತ್ತೆಪ್ಪ ಜಲ್ಲಿ, ಮಾಯಪ್ಪ ತಹಶೀಲದಾರ ಸೇರಿದಂತೆ ವಿವಿಧ ಜಿಲ್ಲೆಗಳ ಸಮಾಜದ ಮುಖಂಡರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

14 − one =