Breaking News

ಗೋಕಾಕ ಜನರ ಆಶಿರ್ವಾದದಿಂದ 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ- ರಮೇಶ ಜಾರಕಿಹೊಳಿ!!

Spread the love

ಗೋಕಾಕ ಜನರ ಆಶಿರ್ವಾದದಿಂದ 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ- ರಮೇಶ ಜಾರಕಿಹೊಳಿ!!

 

 

ಯುವ ಭಾರತ ಸುದ್ದಿ ಗೋಕಾಕ: ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ದಿ.13ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಮಂಗಳವಾರದ0ದು ತಮ್ಮ ಬೃಹತ್ ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ಉಮೇದುವಾರಿಕೆಯನ್ನು ಸಲ್ಲಿಸಿದರು.

ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭಿಮಾನಿಗಳು ಬೃಹತ್ ಹೂಹಾರಹಾಕಿ ಸ್ವಾಗತಿಸಿದರು.

ನಾಮಪತ್ರ ಸಲ್ಲಿಕೆಗೆ ಮುನ್ನ 4೦ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಬೆಂಬಲಿಗರೊ0ದಿಗೆ ನಗರದ ಕೊಳವಿ ಹನಮಂತ ದೇವರ ದೇವಸ್ಥಾನದಿಂದ ಸಂಗೋಳ್ಳ ರಾಯಣ್ಣ ವೃತ್ತ, ಬಸ್ಸು ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಎರಡು ಕ್ವಿಂಟಾಲ್ ಹೂವಿನ ಹಾರವನ್ನು ಕ್ರೇನ್ ಮುಖಾಂತರ ಹಾಕಿ ಅಭಿನಂಧಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸಹೋದರ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಸುಪುತ್ರರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸೇರಿ ಮತ್ತಿತರ ನಾಯಕರು ಸಾಥ್ ನೀಡಿದರು.

ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಕೆಗೆ ಆಗಮಿಸಿರುವ ಜನಸ್ತೋಮ.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೋಕಾಕ ಜನರ ಆಶಿರ್ವಾದದಿಂದ 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಪ್ರತಿಸ್ಫರ್ಧಿ ಅಭ್ಯರ್ಥಿಯನ್ನು ನಾವು ಕಡಿಮೆ ಎಂದು ತಿಳಿಯದೆ ಪ್ರಬಲ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯಲ್ಲಿ ನಾನೋಬ್ಬ ಸಾಮಾನ್ಯ ಕಾರ್ಯಕರ್ತ ನನ್ನಕ್ಕಿಂತ ಪ್ರಬಲ ನಾಯಕರು ಇದ್ದಾರೆ. ಮೇ 13 ರ ಫಲಿತಾಂಶದವರೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಫಲಿತಾಂಶ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿದರು. ನನ್ನ ಮಗ ನನಗೆ ಬೆಂಬಲವಾಗಿ ನಾಮಪತ್ರ ಸಲ್ಲಿಸಿದ್ದಾನೆ ನಂತರ ಹಿಂಪಡಿಯುತ್ತಾನೆ ಅಷ್ಟೇ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು.
ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಮಾತನಾಡಿ, ಕಳೆದ ಬೈ ಎಲೇಕ್ಷನನಲ್ಲಿ ಸಹೋದರ ರಮೇಶ ವಿರುದ್ಧ ನಾನು ಪ್ರತಿಸ್ಫರ್ಧಿಯಾಗಿ ಕಣದಲ್ಲಿದ್ದೆ. ಆಗಲೂ ರಮೇಶ ಜಾರಕಿಹೊಳಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈ ಬಾರಿ ರಮೇಶ ಜಾರಕಿಹೊಳಿ ಅವರೊಂದಿಗೆ ನಾವು ಇದ್ದೇವೆ ಈ ಬಾರಿ ರಮೇಶ ಜಾರಕಿಹೊಳಿ ಅವರ 50 ಸಾವಿರಕ್ಕೂ ಅಧಿಕ ಲೀಡ್ ಪಡೆಯಲಿದ್ದಾರೆ. ನಮಗೆ ಪಂಚಮಸಾಲಿ ಸೇರಿದಂತೆ ಎಲ್ಲ ಸಮಾಜಗಳ ಬೆಂಬಲವಿದೆ. ಗೋಕಾಕ, ಅರಭಾಂವಿ ಅಷ್ಟೇಯಲ್ಲ ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ ಸೇರಿದಂತೆ ಜಿಲ್ಲೆಯ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೋಡಗಲಿದ್ದೇನೆ.                    ನಾನು 18 ಕ್ಷೇತ್ರಕ್ಕೆ ಬಾಸ್. ಸವದಿ ಚಿತ್ತ ಮೊದಲಿನಿಂದಲೂ ಕಾಂಗ್ರೇಸ್ ಪಕ್ಷದತ್ತ ಇದ್ದು ಅವರು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು ಒಳ್ಳೆಯದಾಗಿದೆ. ವಿಧಾನ ಪರಿಷತ ಚುನಾವಣೆ ವೇಳೆ ಕಾಂಗ್ರೇಸ್ ಶಾಸಕರೊಂದಿಗೆ ಸಂಪರ್ಕ ಮಾಡಿ ಬಿಜೆಪಿ ಅಭ್ಯರ್ಥಿ ಸೊಲಿಗೆ ಕಾರಣರಾದರು. ಈ ಬಾರಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲಿದೆ. ರಮೇಶ ಜಾರಕಿಹೊಳಿ ಅವರು ಹೊರಡೆ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕೈಗೊಳ್ಳಲಿ. ನಾವು ನಮ್ಮ ಬೆಂಬಲಿಗರು ಅವರ ಪರ ಪ್ರಚಾರ ಕೈಗೊಳ್ಳುತ್ತೇವೆ. ಸಹೋದರ ರಮೇಶ-ಬಾಲಚಂದ್ರ ಅಷ್ಟೇಯಲ್ಲ ಕೋರೆ, ಕತ್ತಿ, ಜೊಲ್ಲೆ ಸೇರಿ ಬಿಜೆಪಿ ಪಕ್ಷದ 16ಕ್ಕೂ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಕೇಲಸ ಮಾಡುತ್ತಾರೆ. ಎಲ್ಲ ಮತಕ್ಷೇತ್ರಗಳಲ್ಲಿ 15ಸಾವಿರಕ್ಕೂ ಹೆಚ್ಚು ಜನ ನನ್ನ ಬೆಂಬಲಿU್ಪರಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ ನೋಡುತ್ತಿರಿ ಎಂದು ಪರೋಕ್ಷ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಗೋಕಾಕ ಮತಕ್ಷೇತ್ರದಿಂದ ಬಂದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಜನಸಾಗರ ತನ್ನ ನೆಚ್ಚಿನ ನಾಯಕ ರಮೇಶ ಜಾರಕಿಹೊಳಿ ಪರ ಜಯ ಘೋಷಹಾಕಿ ನಗರದೂದ್ದಕ್ಕು ಹೂಮಳೆಗೈದು ಸ್ವಾಗತಿಸಿದ್ದು, ಎಲ್ಲರ ಗಮನ ಸೆಳೆಯಿತು.


Spread the love

About Yuva Bharatha

Check Also

ಗೋಕಾಕ ಮತಕ್ಷೇತ್ರದಲ್ಲಿ ಝಣಝಣ ಕಾಂಚಾಣ ಸದ್ದು, ಕಾಂಗ್ರೇಸ್ ಅಭ್ಯರ್ಥಿಯಿಂದ ಮತದಾರರಿಗೆ ಹಣದ ಆಮಿಷ.!

Spread the loveಗೋಕಾಕನಲ್ಲಿ ಪ್ರತಿ ಮನೆಗೆ 1000, ಅಲ್ಪಸಂಖ್ಯಾತರಿಗೆ 500 ಕಾಂಗ್ರೇಸ್ ಕಾಂಚಾಣ ಸದ್ದು.! ಗೋಕಾಕ: ಲೋಕಸಭಾ ಚುನಾವಣೆ ಇನ್ನು …

Leave a Reply

Your email address will not be published. Required fields are marked *

one + two =