Breaking News

ಕೊರೊನಾ ಸೋಂಕಿನಿಂದ ಬೆಳಗಾವಿಯಲ್ಲಿ ಓರ್ವ ಮೃತ

Spread the love

ಕೊರೊನಾ ಸೋಂಕಿನಿಂದ ಬೆಳಗಾವಿಯಲ್ಲಿ ಓರ್ವ ಮೃತ
ಬೆಳಗಾವಿ. ಜು.1: ಕೊರೊನಾ ಸೊಂಕು ರಾಜ್ಯದಲ್ಲಿ ತೀವ್ರವಾಗಿ ಹಬ್ಬುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಇಂದು 74 ವರ್ಷದ ವ್ಯಕ್ತಿ ಯೋರ್ವ ಮೃತಪಟ್ಟಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂವರು ಮೃತ ಪಟ್ಟಂತಾಗಿದೆ. ಈ ಮೊದಲು ಹೀರೆಬಾಗೆವಾಡಿ ಗ್ರಾಮದ 84 ವರ್ಷದ ವೃದ್ದೆ ,ಅಥಣಿ ತಾಲೂಕಿನ 32 ವರ್ಷದ ಯುವಕ ಮೃತಪಟ್ಟವರಾಗಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು 7 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ರಾಜ್ಯದಲ್ಲಿ ಒಟ್ಟು 1272 ಜನರಿಗೆ ಕೊರೊನಾ ಸೊಂಕು ತಗುಲಿದ್ದು ರಾಜ್ಯದಲ್ಲಿ 16514 ಸೋಂಕಿತರಾಗಿದ್ದಾರೆ. 145 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ 735, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 84, ಧಾರವಾಡ ಜಿಲ್ಲೆಯಲ್ಲಿ 35, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 29, ಹಾಸನ ಜಿಲ್ಲೆಯಲ್ಲಿ 28, ಉತ್ತರ ಕನ್ನಡ ಜಿಲ್ಲೆಯಲ್ಲಿ 23, ಉಡುಪಿ ಜಿಲ್ಲೆಯಲ್ಲಿ 22, ಚಾಮರಾಜನಗರ ಜಿಲ್ಲೆಯಲ್ಲಿ 21, ಬಾಗಲಕೋಟ ಜಿಲ್ಲೆಯಲ್ಲಿ 20, ತುಮಕೂರು ಜಿಲ್ಲೆಯಲ್ಲಿ 19, ದಾವಣಗೆರೆ ಜಿಲ್ಲೆಯಲ್ಲಿ 16, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 15, ಕಲಬುರಗಿ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ 14, ಕೊಪ್ಪಳ ಜಿಲ್ಲೆಯಲ್ಲಿ 13, ರಾಯಚೂರು ಮತ್ತು ಚಿತ್ರದುರ್ಗ
ಜಿಲ್ಲೆಯಲ್ಲಿ ತಲಾ 12, ಯಾದಗಿರಿ, ಬೀದರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ 8, ಕೊಡಗು ಜಿಲ್ಲೆಯಲ್ಲಿ 7, ಮಂಡ್ಯ ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ 5, ಶಿವಮೊಗ್ಗ ಜಿಲ್ಲೆಯಲ್ಲಿ 3, ಗದಗ ಜಿಲ್ಲೆಯಲ್ಲಿ 2 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

twenty + seventeen =