Breaking News

ಸೌಲಭ್ಯದಿಂದ ವಂಚಿತ ಜೈನ ಸಮಾಜ : ಆಕ್ರೋಶಭರಿತ ಪ್ರತಿಭಟನೆ

Spread the love

ಸೌಲಭ್ಯದಿಂದ ವಂಚಿತ ಜೈನ ಸಮಾಜ : ಆಕ್ರೋಶಭರಿತ ಪ್ರತಿಭಟನೆ
ಗುಲ್ಬರ್ಗಾ : ಜು.1: ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಗುಲ್ಬರ್ಗಾ ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಿಗೆ ಮಿಸಲಿಟ್ಟ ಅನುದಾನದಲ್ಲಿ ಜೈನ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಇಲ್ಲಿನ ಅಧಿಕಾರಿಗಳ ನಡವಳಿಕೆ ಬಗ್ಗೆ ಜೈನ ಸಮಾಜದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶದ ಫಲವಾಗಿಯೇ ಮಂಗಳವಾರ ಸಮಾಜ ಬಾಂಧವರು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರದಿಂದ ಅಲ್ಪ ಸಂಖ್ಯಾತರಿಗಾಗಿ ಬಿಡುಗಡೆಯಾಗುವ ಅನುದಾನದಲ್ಲಿ ಕೇವಲ ಒಂದೇ ಸಮಾಜಕ್ಕೆ ಅಧಿಕಾರಿಗಳು ಅನುದಾನ ಮಂಜೂರು ಮಾಡುತ್ತಿದ್ದು, ಜೈನ ಸಮಾಜದವರಿಗೆ ಅನುದಾನ ನೀಡದೇ ನಿರಂತರವಾಗಿ ಅನ್ಯಾಯ ಮಾಡುತ್ತ ಬಂದಿದ್ದಾರೆ.ಅಧಿಕಾರಿಗಳ ಈ ಕ್ರಮವನ್ನು ಖಂಡಿಸಿ ಶ್ರೀ. ಭಾರತವರ್ಷಿಯ ದಿಗಂಬರ ಜೈನ ಮಹಾಸಭಾ ಶಾಖೆ ಗುಲ್ಬರ್ಗಾ ವತಿಂದ ಪ್ರತಿಭಟನೆ ಕೈಗೊಳ್ಳಲಾಯಿತು.
ಕಳೆದ ಎರಡು ತಿಂಗಳಿನಿಂದ ಜೈನ ಸಮಾಜದ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಜೈನ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಿಕೊಳ್ಳಬೇಕೆಂದು ಎಷ್ಟೆ ತಿಳಿಸಿ ಹೇಳಿದರೂ ಸಹ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿರಲಿಲ್ಲ. ಹಾಗಾಗಿ ಜೈನ ಸಮಾಜದ ಸುಮಾರು ನೂರಕ್ಕೂ ಹೆಚ್ಚು ಜನರು ಮಂಗಳವಾರದಂದು ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತ ಪಡಿಸುವುದಲ್ಲದೇ ತಮಗೆ ನ್ಯಾಯ ಒದಗಿಸಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಗುಲ್ಬರ್ಗಾ ಜಿಲ್ಲೆಯಿಂದ ಪ್ರಸಕ್ತ ಸಾಲಿನಲ್ಲಿ 40 ಕೋಟಿ ರೂ. ಅನುದಾನವನ್ನು ಅಲ್ಪ ಸಂಖ್ಯಾತರಿಗೆ ಮಂಜೂರು ಮಾಡಲಾಗಿದೆ. ಆದರೆ ಇದರಲ್ಲಿ ಜೈನ ಸಮಾಜಕ್ಕೆ ಒಂದು ರೂ.ಗಳ ಸಹ ಅನುದಾನ ದೊರೆತಿಲ್ಲ ಎಂದು ಜೈನ ಸಮಾಜದ ಮುಖಂಡರು ಆರೋಪಿಸಿದ್ದಾರೆ. ಇಲ್ಲಿನ ಅಧಿಕಾರಿಗಳು ಅನುದಾನ ಮಂಜೂರು ಮಾಡುವ ಸಂದರ್ಭದಲ್ಲಿ ಸ್ವಜನ ಪಕ್ಷಪಾತ ಮಾಡುವ ಮೂಲಕ ಜೈನ ಸಮಾಜಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದಾರೆ. ಜೈನ ಸಮಾಜಕ್ಕೆ ನ್ಯಾಯ ಸಿಗದಿದ್ದರೆ ಶಾಂತಿಯುತವಾದ ಉಗ್ರ ಹೋರಾಟವನ್ನು ಸಹ ಮಾಡಬೇಕಾಗುತ್ತದೆ ಎಂದು ಜೈನ ಸಮಾಜದ ಮುಖಂಡರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಸದಾ ಶಾಂತಿ ಮಂತ್ರವನ್ನು ಪರಿಪಾಲಿಸುತ್ತ ಬಂದಿರುವ ಜೈನ ಸಮಾಜದ ಇಂದಿನ ಪ್ರತಿಭಟನೆ ಕಂಡು ದಂಗಾದ ಅಧಿಕಾರಿಗಳು ತಮ್ಮ ತಪ್ಪನ್ನು ಅರಿತುಕೊಂಡು ಮುಂಬರುವ ದಿನಗಳಲ್ಲಿ ಜೈನ ಸಮಾಜಕ್ಕೆ ಯಾವುದೆ ರೀತಿಯ ಅನ್ಯಾಯವಾಗದಂತೆ ನಡೆದುಕೊಳ್ಳಲಾಗುವುದು ಎಂದು ಭರವಸೆ ನೀಡುವುದಲ್ಲದೇ ಈ ವರ್ಷ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಮಂಬರುವ ದಿನಗಳಲ್ಲಿ ಜೈನ ಸಮಾಜಕ್ಕೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

7 + nine =