Breaking News

2023ರ ಚುನಾವಣೆಯಲ್ಲಿ ಬಿಜೆಪಿ 140 ಕ್ಕೂ ಹೆಚ್ಚು ಸೀಟ್‌ಗಳೊಂದಿಗೆ ರಾಜ್ಯದಲ್ಲಿ ಮತ್ತೇ ಬಿಜೆಪಿ ಅದಿಕಾರಕ್ಕೆ ಬರಲಿದೆ-ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ!

Spread the love

2023ರ ಚುನಾವಣೆಯಲ್ಲಿ ಬಿಜೆಪಿ 140 ಕ್ಕೂ ಹೆಚ್ಚು ಸೀಟ್‌ಗಳೊಂದಿಗೆ ರಾಜ್ಯದಲ್ಲಿ ಮತ್ತೇ ಬಿಜೆಪಿ ಅದಿಕಾರಕ್ಕೆ ಬರಲಿದೆ-ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ!

ಯುವ ಭಾರತ ಸುದ್ದಿ ಇಂಡಿ :ಗುಜರಾತ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಹೇಗೆ ವಿಜಯಶಾಲಿ ಆಗಿದೆಯೊ ಹಾಗೆ ರಾಜ್ಯದಲ್ಲಿಯೂ ೨೦೨೩ರ ಚುನಾವಣೆಯಲ್ಲಿ ಬಿಜೆಪಿ ೧೪೦ ಕ್ಕೂ ಹೆಚ್ಚು ಸೀಟ್‌ಗಳೊಂದಿಗೆ ರಾಜ್ಯದಲ್ಲಿ ಮತ್ತೇ ಬಿಜೆಪಿ ಅದಿಕಾರಕ್ಕೆ ಬರಲಿದೆ. ಕಾರ್ಯಕರ್ತರು ಭೂತಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಇಂಡಿಯಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಆಗುವಂತೆ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ)ಹೇಳಿದರು.
ಅವರು ಸೋಮವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇಂಡಿ ಬಿಜೆಪಿ ಮಂಡಲ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿ ಅವರ ಸಮರ್ಥ ನೀತಿಯಿಂದ ದೇಶ ವಿಶ್ವದಲ್ಲಿ ಮುಂಚೂಣಿಯಲ್ಲಿ ಬೆಳಗುತ್ತಿದೆ.ಬಿಜೆಪಿ ಪಕ್ಷ ತತ್ವ,ಸಿದ್ದಾಂತ ತಳಹದಿಯ ಮೇಲೆ ಅಽಕಾರಕ್ಕೆ ಬಂದಿದ್ದು, ತನ್ನದೆ ಆದ ಧ್ಯೇಯೊದ್ದೇಶಗಳನ್ನು ಹೊಂದಿದೆ.ಇAದು ಕಾಶ್ಮೀರದಲ್ಲಿನ ೩೭೦ ವಿಽಯನ್ನು ರದ್ದು ಮಾಡಿ,ಕಾಶ್ಮೀರದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.ಅಯೋಧ್ಯಯಲ್ಲಿನ ರಾಮಮಂದಿರ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದ್ದು,ಧಾರ್ಮಿಕ,ಸಾಂಸ್ಕೃತಿಕ ರಾಷ್ಟಿçÃಯ ವಿಚಾರವಾಗಿ ಬಿಜೆಪಿ ಬೆಳೆದು ಬಂದಿದ್ದು,ವಿಶ್ವದಲ್ಲಿ ದೇಶ ಬಲಿಷ್ಠವಾಗಿ ಬದಲಾಗಲು ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಬಿಜೆಪಿ ಸರ್ಕಾರವೇ ಕಾರಣ ಎಂದು ಹೇಳಿದರು.
೩ರಿಂದ ೪ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೋವಿಡ್ ಲಸಿಕೆ ನೀಡುವುದು ಆಗಲಿಲ್ಲ,ಆದರೆ ೧೩೦ ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಬಿಜೆಪಿ ಸರ್ಕಾರ ಎಲ್ಲರಿಗೂ ಕೋವಿಡ್ ಲಸಿಕೆ ನೀಡಿ ಕೋವಿಡ್ ಹತೋಟಗೆ ತಂದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.ವಿಶ್ವದಲ್ಲಿ ಭಾರತ ವಿಶೀಷ್ಟ ದೇವಾಗಿದೆ.೭೦ ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಗೆ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡಲಿಲ್ಲ,ರೈತರು ಬೆಳೆದ ಬೆಳೆ ಸಾಗಾಣಿಕೆ ಮಾಡಲು ಸರಿಯಾದ ಸರಕು ಸಾಗಾಣಿಕೆ ಮಾಡಿಕೊಡಲಿಲ್ಲ. ಮೋದಿ ಅವರು ಪ್ರಧಾನಿಯಾದ ಮೇಲೆ ವಿಮಾನಯಾನ ಸೇರಿದಂತೆ ರೈತರು ಬೆಳೆದ ಬೆಳೆ ಸುಗಮವಾಗಿ ಸಾಗಾಣಿಕೆ ಮಾಡಲು ಸರಕು ಸಾಗಾಣಿಕೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾನಿಽ ಶಿಷ್ಯವೇತನ ಜಾರಿಗೊಳಿಸಿದ್ದಾರೆ ಎಂದು ಹೇಳಿದ ಅವರು,ಕಾರ್ಯಕರ್ತರು ಕೇಂದ್ರ,ರಾಜ್ಯ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು.ಈ ಬಾರಿ ಇಂಡಿಯಲ್ಲಿ ಬಿಜೆಪಿ ಶಾಸಕ ಆಯ್ಕೆ ಆಗಲು ಶ್ರಮಿಸಬೇಕು ಎಂದು ಹೇಳಿದರು.ಕೇವಲ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ.ಶಾದಿ ಮಹಲ ಒಂದೇ ಕೋಮಿಗೆ ಸೀಮಿತ ಮಾಡಿದ್ದಾರೆ.ದೇಶದಲ್ಲಿ ಇರುವ ಇತರೆ ಜಾತಿ,ಧರ್ಮದಲ್ಲಿ ಬಡವರು ಇಲ್ಲವೇ,ಅವರಿಗೆಕೆ ಈ ಯೋಜನೆ ಮಾಡಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿ,ಅಽಕಾರಕ್ಕಾಗಿ,ಹುದ್ದೆಗಾಗಿ ಬಿಜೆಪಿಯಲ್ಲಿ ಇರುವುದು ತಪ್ಪು ಪಕ್ಷದ ತತ್ವಸಿದ್ದಾಂತ,ದೇಶದ ಏಳಿಗೆ ವಿಚಾರವಾಗಿ ಪಕ್ಷದಲ್ಲಿ ಕೆಲಸ ಮಾಡಬೇಕಾಗಿದೆ.ಟಿಕೇಟ್ ನೀಡಿದರೆ,ಪಕ್ಷದಲ್ಲಿ ಪದಾಽಕಾರಿ ಮಾಡಿದರೆ ಮಾತ್ರ ಪಕ್ಷ ಕಟ್ಟುತ್ತೇನೆ ಎನ್ನುವುದು ತಪ್ಪು,ನಮಗೆ ದೇಶದ ಧರ್ಮ,ಸಂಸ್ಕೃತಿ ಮುಖ್ಯ ಎಂದು ಹೇಳಿದರು.
ಬಿಜೆಪಿ ಒಬಿಸಿ ಮೊರ್ಚಾ ರಾಜ್ಯಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಮಾತನಾಡಿ,ಶ್ರೀ ಶಾಂತೇಶ್ವರ ದೇವರ ಆಣೆ ಮಾಡಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ,ಪಕ್ಷದ ಆಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು ಎಂದು ಹೇಳಿದರು.
ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ,ಜಾತಿ,ಧರ್ಮ ಮರೆತು ೨೦೨೩ ರ ಚುನಾವಣೆಯಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಅನೀಲ ಜಮಾದಾರ,ಎಸ್.ಎ.ಪಾಟೀಲ ಡೊಮನಾಳ,ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜಶೇಖರ ಪೂಜಾರಿ,ಸಿದ್ದಲಿಂಗ ಹಂಜಗಿ,ಶ್ರೀಶೈಲಗೌಡ ಬಿರಾದಾರ,ಮುತ್ತು ದೇಸಾಯಿ,ಹಣಮಂತ್ರಾಯಗೌಡ ಪಾಟೀಲ,ಯಲ್ಲಪ್ಪ ಹದರಿ,ವಿಜಯಲಕ್ಷಿ÷್ಮ ರೂಗಿಮಠ, ರವಿ ವಗ್ಗಿ ಮೊದಲಾದವರು ವೇದಿಕೆ ಮೇಲಿದ್ದರು.
ದೇವೆಂದ್ರ ಕುಂಬಾರ,ಸುನAದಾ ಗಿರಣಿವಡ್ಡರ,ಅನಸೂಯಾ ಮದರಿ,ಶ್ರೀದೇವಿ ಕುಲಕರ್ಣಿ,ಗುರಮ್ಮ ನಾವಿ,ದೀಶಾ ನಾದ,ಕವಿತಾ ಅಳ್ಳೊಳ್ಳಿ,ಮಂಗಲಾ ಮಠ,ಬಸಮ್ಮ ಮರಡಿ,ಅರ್ಚನಾ ಗುಡ್ಡೊಡಗಿ, ಶಾಂತು ಕಂಬಾರ,ರಾಮಸಿAಗ ಕನ್ನೊಳ್ಳಿ,ಸಂಜು ದಶವಂತ,ಅಶೋಕಗೌಡ ಬಿರಾದಾರ,ರಾಜಶೇಖರ ಯರಗಲ್ಲ,ರಮೇಶ ಧರೆನವರ,ಬುದ್ದುಗೌಡ ಪಾಟೀಲ,ಶ್ರೀನಿವಾಸ ಕಂದಗಲ್ಲ,ಧರ್ಮು ಮದರಖಂಡಿ,ಸೋಮು ಕುಂಬಾರ,ಮಹಾದೇವ ಗುಡ್ಡೊಡಗಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

“ಬಿಜೆಪಿ ಮುಖಂಡರಾದ ಅನೀಲ ಜಮಾದಾರ ಹಾಗೂ ಶೀಲವಂತ ಉಮರಾಣಿ ಅವರು ಪಕ್ಷದಲ್ಲಿ ಕಾರ್ಯಕರ್ತರಿಗೆ ತೊಂದರೆ ಇದ್ದಾರೆ,ಕಷ್ಟದಲ್ಲಿ ಇದ್ದಾರೆ ಎಂದು ಭಾಷಣ ಮಾಡುತ್ತಿದ್ದಂತೆ,ಸಭೆಯಲ್ಲಿ ಇದ್ದ ಕಾರ್ಯಕರ್ತರು ಮೊದಲು ಇಂಡಿ ಮಂಡಲದ ಬಿಜೆಪಿ ಮುಖಂಡರು ಒಂದಾಗಬೇಕು. ಪಕ್ಷದ ಮುಖಂಡರು ಬೇರೆ ಬೇರೆ ಇದ್ದರೆ ಕಾರ್ಯಕರ್ತರು ಏನು ಮಾಡಬೇಕು.ಇಲ್ಲಿನ ಪಕ್ಷದ ಮುಖಂಡರ ನಡೆಯಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಸಭೆಯಲ್ಲಿ ಪಕ್ಷದ ಮುಖಂಡರು ಒಂದು ಇಲ್ಲ ಎನ್ನುವ ಸಂದೇಶ ರವಾನಿಸಿದರು”

 


Spread the love

About Yuva Bharatha

Check Also

ಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.!

Spread the loveಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.! ಗೋಕಾಕ: ಬಿಜೆಪಿ …

Leave a Reply

Your email address will not be published. Required fields are marked *

7 + nineteen =