ಕೊರೊನಾ : ಬೆಂಗಳೂರು ಹಾಟಸ್ಪಾಟ: ಬೆಳಗಾವಿಯಲ್ಲಿ 7 ಸೇರಿದಂತೆ 1502 ಜನರಿಗೆ ಸೊಂಕು
ಬೆಳಗಾವಿ. ಜು.:2: ರಾಜ್ಯದಲ್ಲಿ ಕೊರೊನಾ ಸೊಂಕಿನ ಅರ್ಭಟ ಮುಂದುವರೆದಿದ್ದು , ರಾಜ್ಯದ ರಾಜಧಾನಿ ಬೆಂಗಳೂರು ಇದೀಗ ಕೊರೊನಾ ಸೊಂಕು ಹಾಟಸ್ಪಾಟ ಆಗಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ 7 ಜನರಿಗೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 1502 ಜನರಿಗೆ ಕೊರೊನಾ ಸೊಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟು 19 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು 271 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 889, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90, ಮೈಸೂರು ಜಿಲ್ಲೆಯಲ್ಲಿ 68, ಬಳ್ಳಾರಿ ಜಿಲ್ಲೆಯಲ್ಲಿ 65, ಧಾರವಾಡ ಜಿಲ್ಲೆಯಲ್ಲಿ 47, ವಿಜಯಪುರ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ 39, ಕಲಬುರಗಿ ಜಿಲ್ಲೆಯಲ್ಲಿ 38,:ಬೀದರ ಜಿಲ್ಲೆಯಲ್ಲಿ 32, ತುಮಕೂರು ಜಿಲ್ಲೆಯಲ್ಲಿ 26, ಶಿವಮೊಗ್ಗ ಜಿಲ್ಲೆಯಲ್ಲಿ 23, ಮಂಡ್ಯ ಜಿಲ್ಲೆಯಲ್ಲಿ 19, ಉತ್ತರ ಕನ್ನಡ ಜಿಲ್ಲೆಯಲ್ಲಿ 17, ಹಾಸನ ಜಿಲ್ಲೆಯಲ್ಲಿ 15, ಉಡುಪಿ ಜಿಲ್ಲೆಯಲ್ಲಿ 14, ಕೋಲಾರ ಜಿಲ್ಲೆಯಲ್ಲಿ 12, ರಾಯಚೂರು ಜಿಲ್ಲೆಯಲ್ಲಿ 11, ಬಾಗಲಕೋಟ ಜಿಲ್ಲೆಯಲ್ಲಿ 10, ದಾವಣಗೆರೆ ಜಿಲ್ಲೆಯಲ್ಲಿ 8, ಯಾದಗಿರಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ 7, ಕೊಡಗು ಜಿಲ್ಲೆಯಲ್ಲಿ 6, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಲಾ 4, ಚಿತ್ರದುರ್ಗ ಜಿಲ್ಲೆಯಲ್ಲಿ 3, ಗದಗ ಜಿಲ್ಲೆಯಲ್ಲಿ 2, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ
Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …