Breaking News

ವಿಶ್ವಗುರು ಬಸವಣ್ಣವರ ವಚನಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಸನತ್ ಜಾರಕಿಹೊಳಿ ಕರೆ

Spread the love

ವಿಶ್ವಗುರು ಬಸವಣ್ಣವರ ವಚನಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಸನತ್ ಜಾರಕಿಹೊಳಿ ಕರೆ

ಯುವಭಾರತ ಸುದ್ದಿ
ಗೋಕಾಕ: ಮಹಾ ಮಾನವತಾವಾದಿ, ಸಮಾನತೆಯ ಹರಿಕಾರ, ಅನುಭವ ಮಂಟಪದ ಸಂಸ್ಥಾಪಕ ವಿಶ್ವಗುರು ಬಸವಣ್ಣವರ ವಚನಗಳನ್ನು ಎಲ್ಲರೂ ಆಚರಣೆಗೆ ತರುವಂತೆ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳದವರು ಹಮ್ಮಿಕೊಂಡ ಬಸವ ಜಯಂತಿ ಉತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಧರ್ಮ ಜಾಗೃತಿ ಮೂಡಿಸಿದರು.ಸಮಾನತೆಯ ಸಮಾಜ ನಿರ್ಮಿಸಲು ಶರಣರೊಂದಿಗೆ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು. ಅವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನಲ್ಲಿಯೇ ಪ್ರಥಮ ಸಂಸತ್ತಾಗಿದೆ. ಶರಣರ ಆದರ್ಶಗಳ ಪಾಲನೆಯೊಂದಿಗೆ ನಾವೆಲ್ಲಾ ಕಲ್ಯಾಣ ರಾಜ್ಯ ನಿರ್ಮಿಸಲು ಶ್ರಮಿಸೋಣ ಎಂದರು.
ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮಡೆಪ್ಪ ತೋಳಿನವರ, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಚನ್ಞಬಸವ ಬಿಜಲಿ, ಬಸವ ಮಂಟಪ ಅಧ್ಯಕ್ಷ ಬಸವಂತಪ್ಪ ಉಳ್ಳೇಗಡಿ, ಪದಾಧಿಕಾರಿಗಳಾದ ಬಸವರಾಜ ಕಲ್ಯಾಣಶೆಟ್ಟಿ, ರಾಜೇಶ್ ಉಳ್ಳೇಗಡಿ, ಶಿವಾನಂದ ಖಡಕಬಾವಿ, ಗುರುಪಾದವ್ವ ಜಕಾತಿ, ಕಮಲಕ್ಕ ಔಧರಿ, ಶುಶೀಲಾ ಹಿರೇಮಠ, ನಿರ್ಮಲಾ ಕರಜಗಿಮಠ, ಶುಶೀಲಾ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು …

Leave a Reply

Your email address will not be published. Required fields are marked *

18 − ten =