Breaking News

ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು.- ರಮೇಶ ಜಾರಕಿಹೊಳಿ.!

Spread the love

ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು.- ರಮೇಶ ಜಾರಕಿಹೊಳಿ.!

ಯುವಭಾರತ ಸುದ್ದಿ

ಗೋಕಾಕ: ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು. ಅವರ ತತ್ವ ಅದರ್ಶಗಳು ಇಂದಿಗೂ ಪ್ರಸ್ತುತ ಇದನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಜೀವನ ನಡೆಸಬೇಕು ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ನಗರ ಗ್ರಾಮೀಣ ಮಂಡಲದವತಿಯಿAದ ಹಮ್ಮಿಕೊಂಡ ಶಿವ ಬಸವ ಜಯಂತಿಯ ಆಚರಣೆ ಕಾರ್ಯಕ್ರಮವನ್ನು ಜಗಜ್ಯೋತಿ ಬಸವೇಶ್ವರ ಹಾಗೂ ಛತ್ರಪರಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಜಗಜ್ಯೋತಿಯಾದ ಹಾಗೂ ತನ್ನ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಉಂಟು ಮಾಡಿದ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಮನುಷ್ಯನೂ ಅಳವಡಿಸಿಕೊಂಡರೆ ಅವರ ಬದುಕು ಹಸನಾಗುತ್ತದೆ. ಶಸ್ತç ಹಾಗೂ ಶಾಸ್ತçದೊಂದಿಗೆ ಧರ್ಮ ಸ್ಥಾಪನೆ ಮಾಡಿದ ಶಿವಾಜಿ ಮಹರಾಜ ಹಾಗೂ ಬಸವಣ್ಣನವರ ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದರು.
ಗೋಕಾಕ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಬಾಳೇಶ ಗಿಡ್ಡನ್ನವರ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ ಮುಖಂಡರಾದ ಲಕ್ಷ್ಮಿಕಾಂತ ಎತ್ತಿನಮನಿ, ಲಕ್ಕಪ್ಪ ತಹಶಿಲ್ದಾರ, ಶಶಿಧರ ದೇಮಶೆಟ್ಟಿ, ಪುಂಡಲೀಕ ವಣ್ಣೂರ, ಚಿದಾನಂದ ದೇಮಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ವಡೆಯರ, ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಬಾಂವಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ರವಿ ಮುಡೆಪ್ಪಗೋಳ, ಶಿವು ಹಿರೇಮಠ, ವೀರೇಂದ್ರ ಎಕ್ಕೇರಿಮಠ, ಪವನ ಮಹಾಲಿಂಪುರ, ಶ್ರೀರಂಗ ನಾಯ್ಕ, ಬಾಳೇಶ ಗಿಡನ್ನವರ ಇನ್ನಿತರರು ಕಾರ್ಯಕರ್ತರು ಪಾಲ್ಗೊಂಡಿದ್ದರು.


Spread the love

About Yuva Bharatha

Check Also

ಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.!

Spread the loveಬಿಜೆಪಿ ಸದಸ್ಯತ್ವ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸಿ-ರಮೇಶ ಜಾರಕಿಹೊಳಿ.! ಗೋಕಾಕ: ವಿಶ್ವದಲ್ಲಿ ಅತಿ …

Leave a Reply

Your email address will not be published. Required fields are marked *

one × 1 =