Breaking News

ರಾಜಕಾರಣಿಗಳಿಗೆ ಮಾಧ್ಯಮ ಬಹಳ ಮುಖ್ಯ – ಜಗದೀಶ್ ಶೆಟ್ಟರ್!

Spread the love

ರಾಜಕಾರಣಿಗಳಿಗೆ ಮಾಧ್ಯಮ ಬಹಳ ಮುಖ್ಯ ಪತ್ರಿಕೆಗಳಲ್ಲಿಯ ಸುದ್ದಿಗಳನ್ನು ಓದಿ, ನೋಡಿಯೇ ರಾಜಕೀಯ ಪ್ರಾರಂಭ ಮಾಡಬೇಕು- ಜಗದೀಶ್ ಶೆಟ್ಟರ್!

ಗೋಕಾಕ : ಗ್ರಾಮೀಣ ಜನರ ಕಲೆ, ಕೃಷಿ, ಸಾಂಸ್ಕೃತಿಕ ಚಟುವಟಿಕೆ, ಸಂಸ್ಕೃತಿ ಬಿಂಬಿಸುವಲ್ಲಿ ಬಾನುಲಿ ಕೇಂದ್ರಗಳು ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.

ವಾಯ್ಸ ಆಫ್ ಗೋಕಾಕ 89.6 ನೂತನ ಬಾನೂಲಿ ಕೇಂದ್ರವನ್ನು ಉದ್ಘಾಟಿಸುತ್ತಿರುವುದು.

ಶುಕ್ರವಾರದಂದು ನಗರದ ಗೋಕಾಕ ಶಿಕ್ಷಣ ಸಂಸ್ಥೆಯ 6೦ನೇ ವರ್ಷದ ಸವಿನೆನಪಿನಲ್ಲಿ ಹೊಸದಾಗಿ ಪ್ರಾರಂಭಿಸಿದ ನೂತನ ವಾಯ್ಸ ಆಫ್ ಗೋಕಾಕ 89.6ಸಮುದಾಯ ಬಾನೂಲಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದೇ ಕಷ್ಟ ಸಾಧ್ಯ ಇರುವಾಗ ಇಲ್ಲಿ ರೇಡಿಯೋ ಕೇಂದ್ರ ಮಾಡಿದ್ದು ಶ್ಲಾಘನೀಯ, ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಸಮುದಾಯ ಬಾನೂಲಿ ಕೇಂದ್ರ ಕಾರ್ಯಮಾಡುತ್ತಿವೆ. ಇತ್ತೀಚೆಗೆ ಟಿ.ವಿ ಮಿ ಮೊಬೈಲ್ ಗಳಿಂದ ಜನರು ರೇಡಿಯೋ ಕೇಳುವುದನ್ನು ನಿಲ್ಲಿಸಿ ಬಿಟ್ಟಿದ್ದರು.ಆದರೆ ಆಧುನಿಕ ಯುಗದಲ್ಲಿ ಎಫ್.ಎಂ ಬಾನೂಲಿ ಕೇಂದ್ರ ಹುಟ್ಟಿಕೊಂಡ ರೇಡಿಯೋ ಕೇಳುಗರನ್ನು ಮತ್ತೆ ತಮ್ಮತ್ತ ಆಕರ್ಷಿಸಿದೆ. ಹಿಂದೆ ರೇಡಿಯೋದಲ್ಲಿ ರೇಡಿಯೋ ನಿರೂಪಕ ಅಮಿನ ಸಹಾನಿ ನಡೆಸಿಕೊಡುವ ಬಿನಾಕಾ ಗೀತಮಾಲಾ ಕಾರ್ಯಕ್ರಮ ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು ಆ ಕಾರ್ಯಕ್ರಮವನ್ನು ನಾವು ಸಹ ಕೇಳುತ್ತಿದ್ದೇವು ಎಂದು ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಅವರು ಟಿ ವಿ ಚಾನಲ್ ಬಂದಾಗ ಪತ್ರಿಕೆ ಮುಚ್ಚುತ್ತವೆ ಎಂದೇ ಹೇಳಲಾಗುತ್ತಿತ್ತು ಆದರೆ ಹಾಗೆ ಆಗಲಿಲ್ಲ. ಪತ್ರಿಕೆಗಳ ಪ್ರಸಾರ ಸಂಖ್ಯೆಯಲ್ಲಿ ತಕ್ಕಮಟ್ಟಿಗೆ ಕಡಿಮೆಯಾಯಿತು ವಿನ್ಹ ಓದುಗರ ಸಂಖ್ಯೆ ಕಡಿಮೆ ಆಗಲಿಲ್ಲ ಎಂದು ಹೇಳಿದರು.
ರಾಜಕಾರಣಿಗಳಿಗೆ ಮಾಧ್ಯಮ ಬಹಳ ಮುಖ್ಯ ಪತ್ರಿಕೆಗಳಲ್ಲಿಯ ಸುದ್ದಿಗಳನ್ನು ಓದಿ, ನೋಡಿಯೇ ರಾಜಕೀಯ ಪ್ರಾರಂಭ ಮಾಡಬೇಕು ಇಲ್ಲವೆಂದರೆ ರಾಜಕೀಯ ಮಾಡಲು ಆಗೋಲ್ಲ ಅಷ್ಟೊಂದು ಪ್ರಮಾಣದಲ್ಲಿ ಮಾಧ್ಯಮಗಳ ನಮ್ಮ ಮೇಲೆ ಪರಿಣಾಮ ಬೀರಿವೆ. ಬಾನೂಲಿ ಕೇಂದ್ರ ಯುವಕರಿಗೆ ಯಾವ ರೀತಿ ಸಹಾಯ ಮಾಡಲು ಆಗುತ್ತದೆ ಎಂದು ಯೋಚಿಸಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ರೂಪಿಸಿ ಎಂದ ಅವರು ಎದುರಾಗುವ ಎಲ್ಲಾ ಕಷ್ಟಗಳನ್ನು ದಾಟಿ ವಾಯ್ಸ ಆಫ ಗೋಕಾಕ ಬಾನೂಲಿ ಕೇಂದ್ರ ಬೆಳೆದು ಈ ಭಾಗದ ಜನರ ಆಶೋತ್ತರಗಳಿಗೆ ಶ್ರಮಿಸುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕೋಡಿ ಲೋಕಸಭೆ ಸದಸ್ಯೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಜನರು ಮೊಬೈಲ್ನಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅವರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯ ವಾಯ್ಸ್ ಆಫ್ ಗೋಕಾಕ ೮೬.೯ ಬಾನೂಲಿ ಕೇಂದ್ರ ಮಾಡಲಿ. ಮಹಿಳೆಯರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಎರ್ಪಡಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಯುವ ಜನರಿಗೆ ಪರಿಚಯಿಸುವ ಕಾರ್ಯವಾಗಬೇಕು. ಕಲೆ ಮತ್ತು ಸಂಸ್ಕೃತಿ ಬೆಳೆಸುವ ಕಾರ್ಯವಾಗಬೇಕು.ಸ್ಥಳೀಯ ಗಾಯನ, ಹಾಸ್ಯ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಈ ಬಾನೂಲಿ ಕೇಂದ್ರದಲ್ಲಿ ಆಗಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತರಿಗೆ ನೀಡುವ ಯೋಜನೆಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲಾ ಸ್ಥರಗಳ ಜನರನ್ನು ಸೆಳೆಯುವ ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಇದು ರಾಜ್ಯದಲ್ಲಿ ಅಷ್ಟೇ ಅಲ್ಲಾ ರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವನಾಥ್ ಕಡಕೋಳ ವಹಿಸಿದ್ದರು. ಈ ಸಂದರ್ಭದಲ್ಲಿ ವಿಸ್ವತ್ತ ಮಂಡಳಿ ಅಧ್ಯಕ್ಷ ಯು.ಬಿ.ಆಜರೆ, ಕಾರ್ಯದರ್ಶಿ ಆರ್.ಎಂ.ವಾಲಿ, ನಿವೃತ್ತ ಸೇನಾಧಕಾರಿ ಬ್ರಿಗೇಡಿರ ಬಿ.ಎಂ ಪೂರ್ವಿಮಠ , ನಿರ್ದೇಶಕರುಗಳಾದ ಆಜಯ ಜಾಧವ , ನೀಲಕಂಠ ಪಟ್ಟಣಶೆಟ್ಟಿ, ಪ್ರಕಾಶ್ ಕೋಲಾರ, ಶಶಿಲ ಮುನ್ನವಳ್ಳಿ ಡಾ.ವಿರಭದ್ರಪ್ಪ ಉಪ್ಪಿನ, ಮಹಾಂತೇಶ ತಾವಂಶಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

11 + 8 =