ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ,17ಕ್ಕೆ- ಅಧ್ಯಕ್ಷೆ ಭಾರತಿ ಮದಭಾವಿ!!

ಯುವ ಭಾರತ ಸುದ್ದಿ ಗೋಕಾಕ: ಗೋಕಾಕ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಬರುವ ಡಿಸೆಂಬರ್ 17 ರಂದು ಜರುಗಲಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಭಾರತಿ ಮದಭಾವಿ ತಿಳಿಸಿದ್ದಾರೆ.
ಭಾನುವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಲ ಮಾಧ್ಯಮಗಳಲ್ಲಿ ಡಿ.17 ಎಂದು ಪ್ರಕಟಗೊಂಡಿದ್ದರಿAದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಮದಭಾವಿ ಡಿ.17 ರಂದು ಸಮ್ಮೇಳನ ಈಗಾಗಲೇ ನಿಗದಿಯಾಗಿದೆ ಎಂದಿದ್ದಾರೆ.
ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಈಶ್ವರ ಚಂದ್ರ ಬೆಟಗೇರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಭಾರತಿ ಮದಭಾವಿ ಹೇಳಿದ್ದಾರೆ.
YuvaBharataha Latest Kannada News