Breaking News

ಕುಂದಾನಗರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ ಬಿಜೆಪಿ ನಾಯಕರ ಭಾವಚಿತ್ರ ಪ್ರತಿಕೃತಿ ದಹನ ಮಾಡಿದ ಸತೀಶ ಜಾರಕಿಹೊಳಿ ಬೆಂಬಲಿಗರು

Spread the love

ಕುಂದಾನಗರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ
ಬಿಜೆಪಿ ನಾಯಕರ ಭಾವಚಿತ್ರ ಪ್ರತಿಕೃತಿ ದಹನ ಮಾಡಿದ ಸತೀಶ ಜಾರಕಿಹೊಳಿ ಬೆಂಬಲಿಗರು


ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ ಎಂದು ಬಿಜೆಪಿ ವಿರುದ್ಧ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಂಬಲಿಗರು, ವಿವಿಧ ದಲಿತ ಸಂಘಟನೆಗಳು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದವು.

ಪ್ರತಿಭಟನಾ ರ್ಯಾಲಿಯಲ್ಲಿ ಕೇಸರಿ, ನೀಲಿ, ಕನ್ನಡ ಬಾವುಟ ಬಣ್ಣದ ಶಾಲು ಧರಿಸಿದ್ದ ಸಹಸ್ರಾರು ಸಂಖ್ಯೆಯಲ್ಲಿ ಶಾಸಕ ಸತೀಶ ಅಭಿಮಾನಿಗಳು ಭಾಗಿಯಾಗಿದ್ದರು. ಇದೇ ವೇಳೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಶಾಸಕ ಸತೀಶ್ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಬೃಹತ್ ಪ್ರತಿಭಟನಾ ರ್ಯಾಲಿ ವೀರರಾಣಿ ಚನ್ನಮ್ಮಾಜಿ ವೃತ್ತ ಮಾರ್ಗವಾಗಿ ಡಿಸಿ ಕಚೇರಿವರೆಗೂ ಸಂಚರಿಸಿ ನಂತರ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಗೋಕಾಕ್‍ನಲ್ಲಿ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಸತೀಶ ಅಭಿಮಾನಿ

ಬಿಜೆಪಿ ನಾಯಕರ ಪ್ರತಿಕೃತಿ ದಹನ: ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹಿಂದೂ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದ ಬಿಜೆಪಿ ನಾಯಕರ ವಿರುದ್ಧ ಸತೀಶ ಜಾರಕಿಹೊಳಿ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು,ಬೆಳಗಾವಿಯ ಸಿಪಿಎಡ್ ಮೈದಾನದಿಂದ ಸತೀಶ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳು ಬೃಹತ್ ರ್ಯಾಲಿ ಆರಂಭಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಶಾಸಕ ಸತೀಶ ಜಾರಕಿಹೊಳಿ ಪರ ಭಿತ್ತಿ ಫಲಕಗಳನ್ನು ಹಿಡಿದುಕೊಂಡು ಮನುವಾದಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಇನ್ನಿತರ ಬಿಜೆಪಿ ನಾಯಕರ ಭಾವಚಿತ್ರವನ್ನು ಪ್ರತಿಕೃತಿ ದಹನ ಮಾಡಿದರು. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಇಂದು ಶಕ್ತಿ ಪ್ರದರ್ಶನ ಮಾಡುವ ಮೂಲಕ ಸತೀಶ ಜಾರಕಿಹೊಳಿ ಅಭಿಮಾನಿಗಳು, ಬೆಂಬಲಿಗರು ಬಿಜೆಪಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದರು. ಗಳು ಯತ್ನಾಳ ವಿರುದ್ಧ ಕಿಡಿಕಾರಿದರು.

ಈ ವೇಳೆ ರವೀಂದ್ರ ನಾಯಿಕ್ ಮಾತನಾಡಿ, ಸತೀಶ ಜಾರಕಿಹೊಳಿ ದಲಿತರು, ಶೋಷಿತ ವರ್ಗದಿಂದ ಬಂದವರು. ಶೋಷಿತರು, ಬಡವರ ಪರವಾಗಿ ಧ್ವನಿ ಎತ್ತುತ್ತಿರುವ ಇವರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಆ ಹೇಳಿಕೆಯನ್ನು ತಿರುಚಿ, ಇಡೀ ರಾಜ್ಯ, ದೇಶಾಧ್ಯಂತ ಅಪಪ್ರಚಾರ ಮಾಡಿ ಅವರ ತೇಜೋವಧೆ ಮಾಡುವ ಮನುವಾದಿಗಳ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಮತ್ತು ಅದನ್ನು ಧಿಕ್ಕರಿಸುತ್ತೇವೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಹುಟ್ಟಿದಾಗಿನಿಂದ ಸಾಯೋವರೆಗೂ ಅವರು ಧರ್ಮವನ್ನು ಬಿಟ್ಟು ಹೋಗೋವರೆಗೂ ನಿರಂತರವಾಗಿ ನೋವು, ಅಪಮಾನ ಮಾಡಿದ ಸಿದ್ಧಾಂತವಿದು. ಅವರ ಸಿದ್ಧಾಂತದ ವಿರುದ್ಧ ಯಾರೇ ಮಾತನಾಡಿದರೂ ಷಡ್ಯಂತ್ರ ಮಾಡಿ ಅವರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ದೇಶದಲ್ಲಿ ನಡೆದಿದೆ. ಹಿಂದುಳಿದ ಜನ ನಾವು ಜಾಗೃತರಾಗಿದ್ದೇವೆ. ನಿಮ್ಮ ವಿರುದ್ಧದ ಹೋರಾಟವನ್ನು ನಾವು ಇಲ್ಲಿಗೆ ನಿಲ್ಲಿಸೋದಿಲ್ಲ ಎಂದು ಎಚ್ಚರಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ತಳವಾರ ಮಾತನಾಡಿ, ಅಭಯ್ ಪಾಟೀಲ್ ಅವರ ಎಲ್‍ಸಿಯಲ್ಲಿ ಹಿಂದೂ ಎಂಬ ಶಬ್ದ ಇದ್ದರೆ ನಾವೇ 10 ಲಕ್ಷ ರೂ. ಕೊಡುತ್ತೇವೆ. ಸತೀಶ ಜಾರಕಿಹೊಳಿ ಅವರ ಜನ್ಮದಾಖಲೆಯಲ್ಲಿ ಹಿಂದೂ ವಾಲ್ಮೀಕಿ ಅಂತಾ ಇದೆ. ಸತೀಶ ಜಾರಕಿಹೊಳಿ ಪಕ್ಕಾ ಹಿಂದೂ. ಅಭಯ್ ಪಾಟೀಲ್ ಬೋಗಸ್ ಹಿಂದೂ. ಇಂದು ನಕಲಿ ಹಿಂದೂಗಳು ಬಂದು ಅಸಲಿ ಹಿಂದೂಗಳನ್ನು ನೀವು ಹಿಂದೂಗಳಾ..? ಎಂದು ಕೇಳುತ್ತಿದ್ದಾರೆ. ಹಿಂದೂಗಳ ಅಪ್ಪಗಳು ನಾವ, ಹಿಂದೂ ಮಾಲೀಕರು-ಯಜಮಾನರು ನಾವ, ಹಿಂದೂ ಸೃಷ್ಟಿಕರ್ತರು ನಾವ. ನೀವೆಲ್ಲಾ ಬಾಡಿಗೆ ಜನ ನೀವು, ನಮ್ಮನ್ನು ಕೇಳುವ ಹಕ್ಕು ನಿಮಗಿಲ್ಲ ಎಂದು ಎಚ್ಚರಿಸಿದರು.

ಭೀಮ ಆರ್ಮಿ ಬೆಳಗಾವಿ ಸಂಚಾಲಕ ಸಂತೋಷ ದೊಡಮನಿ ಮಾತನಾಡಿ, ನಿಪ್ಪಾಣಿಯಲ್ಲಿ ಹಂಗೂ ಮಾತಾಡಿಲ್ಲ, ಹಿಂಗೂ ಮಾತಾಡಿಲ್ಲ. ನಮ್ಮ ಸಾಹುಕಾರ್ ಗಟ್ಟಿಯಾಗಿ ಖರೇನ ಮಾತಾಡಿದ್ದಾರೆ. ಅದು ಸತ್ಯವಿದೆ. ನೋಡ್ತಿನಿ, ಬರ್ತಿನಿ, ಮಾಡ್ತಿನಿ, ಅಲ್ಲೆ ಬರ್ತಿನಿ, ಇಲ್ಲೆ ಬರ್ತಿನಿ ಅಂತೀಯಾ..? ಬೆಳಗಾವಿಗೆ ಬಂದು ನೋಡು ಸಾಹುಕಾರ ತಾಕತ್ತು ಎಂದು ಯತ್ನಾಳ ವಿರುದ್ಧ ಹರಿಹಾಯ್ದರು. ಇನ್ನು ಯಾರೇ ಬಂದು ಅಡ್ಡ ನಿಂತರೂ ಸಾಹುಕಾರನಲ್ಲ, ಸಾಹುಕಾರ್ ಒಂದು ಕೂದಲು ಕೀಳಲು ನಿಮಗೆ ಆಗೋದಿಲ್ಲ. ನಾವು ಯಾರಿಗೂ ಅಂಜೋದಿಲ್ಲ. ನಮ್ಮದು ಅಂಜುವ ಕುಲವಲ್ಲ, ನಮ್ಮದು ಡಾ. ಬಿ.ಆರ್‌,ಅಂಬೇಡ್ಕರ್ ಕುಲ ಎಂದು ಎಚ್ಚರಿಕೆ ರವಾನಿಸಿದರು.
ಇದೇ ವೇಳೆ ರೈತ ಮುಖಂಡ ಸಿದಗೌಡ ಮೊದಗಿ ಮಾತನಾಡಿ, ಅಂಗನವಾಡಿ ಮಕ್ಕಳ ತತ್ತಿ ತಿನ್ನುವಾಗ, ನಾಡಿನಾಧ್ಯಂತ ಭೂಮಿ ಖರೀದಿ ಮಾಡಿ ಮಾರುತ್ತಿರುವಾಗ, ನಾಡಿನ ರೈತರು ಬಂದಾಗ ಎಲ್ಲಿ ಹೋಗಿತ್ತು ನಿಮ್ಮ ಚರ್ಚೆ. ಇದನ್ನು ಕೂಡ ಮುಕ್ತವಾಗಿ ಚರ್ಚೆ ಮಾಡಲು ಬನ್ನಿ. ನಿಮ್ಮ ಪಕ್ಷದಲ್ಲಿ ಮಾತ್ರ ಹಿಂದೂಗಳಿಲ್ಲ. ಎಲ್ಲಾ ಪಕ್ಷಗಳಲ್ಲಿಯೂ ಹಿಂದೂಗಳಿದ್ದಾರೆ. ಅವರಲ್ಲಿ ಇದು ಚರ್ಚೆ ಆಗುತ್ತಿಲ್ಲ. ಆದರೆ ನಿಮ್ಮಲ್ಲಿ ಮಾತ್ರ ಯಾಕೆ ಚರ್ಚೆಯಾಗುತ್ತಿದೆ. ನೀವು ಬಂದು ಚರ್ಚೆ ಮಾಡಬೇಕಿತ್ತು. ನಿಮ್ಮದೇ ಡಬಲ್ ಇಂಜೀನ್ ಸರ್ಕಾರ ಆಡಳಿತದಲ್ಲಿದೆ, ಒಂದು ತನಿಖಾ ಸಮಿತಿ ರಚನೆ ಮಾಡಿ, ಎಲ್ಲ ವಿಶ್ವವಿದ್ಯಾಲಯಗಳಿಂದ ತಜ್ಞರು ಬಂದು ಚರ್ಚೆ ಮಾಡಲಿ. ಸಾಮಾಜಿಕ ಹೋರಾಟಕ್ಕೆ ಬೆಲೆ ಬರಬೇಕು. ಈ ಚಳವಳಿ ಇಲ್ಲಿಂದ ಆರಂಭವಾಗಲಿ ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ, ಜಿಲ್ಲಾ ಸಂಚಾಲಕ ಜೀವನ್‌ ಮಾಂಜ್ರೇಕರ್‌, ಕರವೇ ಜಿಲ್ಲಾ ಅಧ್ಯಕ್ಷ ಮಹಾದೇವ ತಳವಾರ, ಉಪಾಧ್ಯಕ್ಷ ಸುರೇಶ, ಚನ್ನಬಸವ ಫೌಂಡೇಶನ್‌ ಅಧ್ಯಕ್ಷ ಎಸ್.‌ಬಿ. ಗೂಡಸ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಹಾಂತೇಶ ತಳವಾರ, ಕೆಪಿಸಿಸಿ ಸದಸ್ಯೆ ಸರಳಾ ಸಾತ್ಪುತ್ರೆ, ಸೈಯದ್‌ ಮನಸೂರ್‌, ಸಮಾಜ ಸೇವಕ ಸುಜೀತ್‌ ಮುಳಗುಂದ ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕನ್ನಡಪರ ಹೋರಾಟ ಸಮಿತಿ, ಬುದ್ದ, ಬಸವ, ಅಂಬೇಡ್ಕರ್‌ ಅನುಯಾಯಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ಸತೀಶ್‌ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿದ್ದರು.


Spread the love

About Yuva Bharatha

Check Also

ಬಜೇಟ ಅಭಿವೃದ್ಧಿ ಪರವಾಗಿಲ್ಲ- ಭೀಮಶಿ ಭರಮಣ್ಣವರ.!

Spread the loveಬಜೇಟ ಅಭಿವೃದ್ಧಿ ಪರವಾಗಿಲ್ಲ- ಭೀಮಶಿ ಭರಮಣ್ಣವರ.! ಗೋಕಾಕ: ಸಿದ್ಧರಾಮಯ್ಯನವರು ಮಂಡಿಸಿರುವ ಬಜೇಟ ಅಭಿವೃದ್ಧಿ ಪರವಾಗಿಲ್ಲ. ರೈತರ, ಬಡವರ …

Leave a Reply

Your email address will not be published. Required fields are marked *

five × four =