Breaking News

ಯುವತಿ ನೇಹಾ ಹತ್ಯೆ ರಾಜ್ಯದ ಜನರು ತೆಲೆತಗ್ಗಿಸುವಂತೆ ಮಾಡಿದೆ.- ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಅಧ್ಯಕ್ಷ ಭೀಮಶಿ ಭರಮಣ್ಣವರ.!

Spread the love

ಯುವತಿ ನೇಹಾ ಹತ್ಯೆ ರಾಜ್ಯದ ಜನರು ತೆಲೆತಗ್ಗಿಸುವಂತೆ ಮಾಡಿದೆ.- ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಅಧ್ಯಕ್ಷ ಭೀಮಶಿ ಭರಮಣ್ಣವರ.!


ಗೋಕಾಕ: ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಯುವತಿ ನೇಹಾಳನ್ನು ಬರ್ಬರವಾಗಿ ಹತ್ಯೆಗೈದ ಘಟನೆಯನ್ನು ಗೋಕಾಕ ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಅಧ್ಯಕ್ಷ ಭೀಮಶಿ ಭರಮಣ್ಣವರ ತೀವೃವಾಗಿ ಖಂಡಿಸಿದ್ದಾರೆ.
ಈ ಕುರಿತು ಜಂಟಿಯಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಪ್ರೀತಿ ನಿರಾಕರಿಸಿದ್ದಕ್ಕೆ ಬಿವಿಬಿ ಕಾಲೇಜು ಕ್ಯಾಂಪಸನಲ್ಲಿ ನೇಹಾ ಹಿರೇಮಠಳನ್ನು ಹತ್ಯೆಗೈದಿರುವ ಹಂತಕನನ್ನು ಪೋಲಿಸರು ಬಂಧಿಸಿದರೆ ಸಾಲದು ಅಂತಹ ಹತ್ಯೇಕೋರನನ್ನು ಎನ್‌ಕೌಂಟರ ಮಾಡಿ ಬೀಸಾಕಬೇಕು. ಶಾಲೆ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪಾಲಕರು ಹೆದರುವ ಪರಿಸ್ಥಿತಿ ಬಂದೊದಗಿದೆ. ಈ ಹತ್ಯೆ ರಾಜ್ಯದ ಜನರು ತೆಲೆತಗ್ಗಿಸುವಂತೆ ಮಾಡಿದೆ.
ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಘಟನೆ ಬಗ್ಗೆ ಸರಿಯಾಗಿ ಮಾಹಿತಿ ಪಡೆಯದೆ ತುಷ್ಟಿಕರಣ ನೀಡುತ್ತ ಕಾಲಹರಣ ಮಾಡದೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿ ಪರ ಯಾರು ವಕಾಲತ್ತು ವಹಿಸಬಾರದು. ನೊಂದ ತಂದೆ-ತಾಯಿಯ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

twenty + 17 =