Breaking News

ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ.- ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ.!

Spread the love

ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ.- ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ.!


ಗೋಕಾಕ: ರಾಜ್ಯದ ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಪೋಲಿಸ್ ಠಾಣೆಗೆ ಹಾಗೂ ಪೋಲಿಸರಿಗೆ ರಕ್ಷಣೆ ಇಲ್ಲದಂತಾಗಿದ್ದು ಇನ್ನು ಜನರ ಪರಿಸ್ಥಿತಿ ಹೇಳತಿರದು ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ ತಿಳಿಸಿದ್ದಾರೆ.
ಸೋಮವಾರದಂದು ಜಂಟಿಯಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ರಾಜ್ಯದಲ್ಲಿ ಕಾಂಗ್ರೇಸ್ ಸರಕಾರದ ತುಷ್ಟಿಕರ ಹೆಚ್ಚಿದೆ. ಗಲಭೆ ಸಮಯದಲ್ಲಿ ಪೋಲಿಸ್ ಠಾಣೆಗೆ ನುಗ್ಗಿ ಸಿಬ್ಬಂಧಿಗಳಿಗೆ ಹೊಡೆದು ಸರಕಾರ ಆಸ್ತಿಯನ್ನು ನಾಶ ಮಾಡಿದರು ಪೋಲಿಸರು ಮೂಕ ಪ್ರೇಕ್ಷರಂತೆ ನಿಲ್ಲುತ್ತಿರುವದು ಮತ್ತೊಂದು ತುಷ್ಟಿಕರಣದ ಮುಖವಾಗಿದೆ. ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ನಡೆದಾಗ ನಮ್ಮ ಬಿಜೆಪಿ ಸರಕಾರ ಪೋಲಿಸರ ಬೆನ್ನಿಗೆ ನಿಂತು ಗಲಭೆಕೋರರ ವಿರುದ್ಧ ಕಠೀಣ ಕ್ರಮಕೈಗೊಂಡು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದಿನ ಸರಕಾರ ತುಷ್ಟೀಕರಣದ ಹೆಸರಲ್ಲಿ ಗಲಭೆಕೋರರ ಪರ ನಿಂತು ಪೋಲಿಸ್ ಠಾಣೆಗೆ ಮತ್ತು ಪೋಲಿಸರಿಗೆ ರಕ್ಷಣೆ ನೀಡದೆ ಇರುವದು ಖಡನೀಯವಾಗಿದೆ.
ಇಂತಹ ಸಂದರ್ಭದಲ್ಲಿ ಸರಕಾರ ಪೋಲಿಸರ ಪರ ನಿಂತು ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಆದರೆ ಗೃಹ ಸಚಿವರ ಅಸಮರ್ಥತೆಯಿಂದ ಪೋಲಿಸರನ್ನು ಕಾಂಗ್ರೇಸ್ ಕಾರ್ಯಕರ್ತರಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರಕಾರ ಈ ಕೂಡಲೇ ಗಲಭೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಿ ಪೋಲಿಸ್ ಠಾಣೆಯಲ್ಲಿ ನಾಶ ಮಾಡಿರುವ ಆಸ್ತಿಯನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Yuva Bharatha

Check Also

ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.!

Spread the loveವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ಸಮಾನತೆ ಹಾಗೂ ಮಾನವಿಯತೆಯಿಂದ ನೋಡಿ-ಸರ್ವೋತ್ತಮ ಜಾರಕಿಹೊಳಿ.! ಗೋಕಾಕ: ವಿಕಲತೆ ಹೊಂದಿರುವ ಅಂಗವಿಕಲ …

Leave a Reply

Your email address will not be published. Required fields are marked *

fourteen − six =