Breaking News

೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶೃಂಗಾರಗೊ0ಡ ಅಂಕಲಗಿ ಪಟ್ಟಣ.!

Spread the love

೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶೃಂಗಾರಗೊ0ಡ ಅಂಕಲಗಿ ಪಟ್ಟಣ.!


ಗೋಕಾಕ: ರವಿವಾರದಂದು ನಡೆಯಲಿರುವ ೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಾನ್ ತಪಸ್ವಿ ಶ್ರೀ ಅಡವಿಸಿದ್ಧೇಶ್ವರ ತಪೋಭೂಮಿ ಅಂಕಲಗಿ ಪಟ್ಟಣ ತಳಿರು ತೊರಣ, ಪ್ಲೇಕ್ಸ್, ಕನ್ನಡ ಭಾವುಟಗಳಿಮದ ರಾರಾಜಿಸುತ್ತಿದೆ.
ಸಮ್ಮೇಳನ ನಡೆಯುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಹಿರೆಮೆ ಗರಿಮೆ ಹೆಚ್ಚಿಸುವ ವಿವಿಧ ಚಿತ್ರಕಲಾ ಕೃತಿಗಳನ್ನು ಬಿಡಿಸಲಾಗುತ್ತಿದೆ. ಅಲ್ಲದೇ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿ ಜ್ಞಾನಪೀಠ ಪ್ರಶಸ್ತಿ ಪಡೆದ ದಿಗ್ಗಜರ ಚಿತ್ರಗಳನ್ನು ಕಲಾವಿದರು ಬಿಡಿಸುವ ಮೂಲಕ ಸಭಾ ಮಂಟಪ ಶ್ರೀಂಗಾರಗೊಳಿಸಿದ್ದಾರೆ. ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮೀತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ ನೇತ್ರತ್ವದಲ್ಲಿ ಅಂಕಲಗಿ ಪಟ್ಟಣ ಕನ್ನಡಮಯವಾಗಿ ಕಣ್ಣಮನಸೆಳೆಯುತ್ತಿದೆ.
ಈ ಸಮ್ಮೇಳನದಲ್ಲಿ ಸಾಹಿತಿಗಳಿಗಾಗಿ ಪುಸ್ತ ಪ್ರದರ್ಶನ, ರೈತರಿಗಾಗಿ ಕೃಷಿ ಸಲಕರಣೆಗಳ ಮಾಹಿತಿ ಮೇಳ ಸೇರಿ ಶ್ರೀ ಅಡವಿಸಿದ್ಧೇಶ್ವರರ ಜಾತ್ರಾ ಮಹೋತ್ಸವದಂತೆ ಕನ್ನಡ ಹಬ್ಬ ಜರುಗಲಿದೆ. ಸುಮಾರು ೫ಸಾವಿರ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಭೀಮಗೌಡ ಪೋಲಿಸಗೌಡರ ತಿಳಿಸಿದ್ದಾರೆ.


ಕಾರ್ಯಕ್ರಮದ ವಿವರ: ರವಿವಾರದಂದು ಮುಂಜಾನೆ ೮ಗಂಟೆಗೆ ರಾಷ್ಟçಧ್ವಜ, ನಾಡಧ್ವಜ ಹಾಗು ಪರಿಷತ ಧ್ವಜ ಧ್ವಜಾರೋಹಣ. ಮುಂಜಾನೆ೮.೩೦ಕ್ಕೆ ಅಂಕಲಗಿ ಗ್ರಾಮದ ಪಾದಗಟ್ಟಿಯಿಂದ ಪ್ರಧಾನ ವೇದಿಕೆ ಬಸವರಾಜ ಕಟ್ಟಿಮನಿ ವೇದಿಕೆಯ ವರೆಗೆ ಭುವನೇಶ್ವರಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ. ೧೦ಗಂಟೆಗೆ ಸಮ್ಮೇಳನದ ಉದ್ಘಾಟನೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಿಂದ ಧ್ವಜಹಸ್ತಾಂತರ, ಪುಸ್ತಕ ಪ್ರದರ್ಶನ ಉದ್ಘಾಟನೆ, ಸಮ್ಮೇಳನಾಧ್ಯಕ್ಷರ ಭಾಷಣ, ಆಶಯ ನುಡಿ. ಮಧ್ಯಾಹ್ನ ೧ಗಂಟೆಗೆ ಸಾಂಸ್ಕೃತಿಕ ಚಿಂತನ ಗೋಷ್ಠಿ, ಮಧ್ಯಾಹ್ನ ೨.೩೦ಕ್ಕೆ ಕವಿಗೋಷ್ಠಿ, ಸಾಯಂಕಾಲ ೪ಗಂಟೆಗೆ ಸಾಧಕರ ಸನ್ಮಾನ, ಸಾಯಂಕಾಲ ೫.೩೦ಗಂಟೆಗೆ ಸನಾರೋಪ ಸಮಾರಂಭ ನಡೆಯಲಿದೆ.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

4 × 3 =