Breaking News

“ಅತ್ತಿ ಸಿಂಗಾರಿ ಸೊಸಿ ಬಂಗಾರಿ” ನಾಟಕ ದಿ.15ರ ಸಂಜೆ 6ರಿಂದ ನಗರದಲ್ಲಿ ಪ್ರದರ್ಶನ.!

Spread the love

“ಅತ್ತಿ ಸಿಂಗಾರಿ ಸೊಸಿ ಬಂಗಾರಿ” ನಾಟಕ ದಿ.15ರ ಸಂಜೆ 6ರಿಂದ ನಗರದಲ್ಲಿ ಪ್ರದರ್ಶನ.!


ಗೋಕಾಕ: ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ೨೦೨೧ರಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದ “ಅತ್ತಿ ಸಿಂಗಾರಿ ಸೊಸಿ ಬಂಗಾರಿ” ಎಂಬ ಸುಂದರ ಸಾಮಾಜಿಕ, ಕೌಟುಂಬಿಕ ನಾಟಕ ದಿ.೧೫ರಿಂದ ನಗರದ ಎನ್‌ಎಸ್‌ಎಫ್ ರಸ್ತೆಯಲ್ಲಿ ನಿರ್ಮಿಸಿರುವ ಟೆಂಟನಲ್ಲಿ ನಡೆಯಲಿದೆ ಎಂದು ನಾಟಕ ಕಂಪನಿ ಸಂಚಾಲಕ, ಕಥೆ ರಚನೆಕಾರ ಆನಂದ ಬೆಂಗಳೂರು ಹೇಳಿದರು.

ಅವರು, ನಗರದ ಎನ್‌ಎಸ್‌ಎಫ್ ರಸ್ತೆಯಲ್ಲಿ ನಿರ್ಮಿಸಿರುವ ಟೆಂಟನಲ್ಲಿ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಶ್ಲೀಲ ರಹಿತ ಮತ್ತು ಅನುಭವಿ ಹಿರಿಯ ಕಲಾವಿದರಿಂದ ಮಕ್ಕಳ ಶಿಕ್ಷಣದಲ್ಲಿ ಮನೆಯ ಮಹಿಳೆಯರ ಪಾತ್ರದ ಕುರಿತು ಒಳ್ಳೆಯ ಸಂದೇಶವನ್ನು ಒಳಗೊಂಡಿದೆ. ನಾಟಕದಲ್ಲಿ ಹಾಸ್ಯ ಪಾತ್ರಧಾರಿಗಳಾದ ಗೀತಾ ಬಿಜಾಪುರ, ಶಿವು ಮುಧೋಳ, ಮಹಾಂತೇಶ ಬ್ಯಾಡಗಿ ಅವರಿಂದ ಮನರಂಜನೆ ದೊರಯಲಿದೆ. ಅಳಿವಿನಂಚಿನಲ್ಲಿರುವ ರಂಗಭೂಮಿಯ ನಾಟಕ ಪ್ರದರ್ಶನ ಸುತ್ತಲಿನ ಜನತೆ ನೋಡಿ ಆನಂದಿಸುವ0ತೆ ಮನವಿ ಮಾಡಿದರು.

ದಿ.15ರಂದು ಸಂಜೆ 6ಗಂಟೆಗೆ “ಅತ್ತಿ ಸಿಂಗಾರಿ ಸೊಸಿ ಬಂಗಾರಿ” ಎಂಬ ಸುಂದರ ಸಾಮಾಜಿಕ, ಕೌಟುಂಬಿಕ ನಾಟಕ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಡಿವೈಎಸ್‌ಪಿ ಡಿ ಎಚ್ ಮುಲ್ಲಾ, ಪಿಎಸ್‌ಐ ಕೆ ವಾಲಿಕಾರ, ಕಾಂಗ್ರೇಸ್ ಮುಖಂಡರಾದ ಅಶೋಕ ಪೂಜಾರಿ, ಚಂದ್ರಶೇಖರ ಕೊಣ್ಣೂರ, ಗಣ್ಯ ವರ್ತಕ ಮಹಾಂತೇಶ ತಾಂವಶಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಲಾವಿದರಾದ ಮುನ್ನಾ ಕುಕ್ಕನೂರ, ಅಂಬುಜಮ್ಮ ಬೆಂಗಳೂರು, ಮಹಾಂತೇಶ ಬ್ಯಾಡಗಿ, ಸಿದ್ದಯ್ಯ ನಂದಿಕೊಲಮಠ, ಪಾಪಣ್ಣ ಮುಧೋಳ ಸೇರಿದಂತೆ ಇತರೆ ಕಲಾವಿದರು ಇದ್ದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

5 × five =