ಯುವ ನಾಯಕ ಅಮರನಾಥ ಜಾರಕಿಹೊಳಿ ಅವರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ.!
ಗೋಕಾಕ: ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಯುವ ನಾಯಕ ಅಮರನಾಥ ಜಾರಕಿಹೊಳಿ ಅವರು ಗೋಕಾಕ ಮತಕ್ಷೇತ್ರದಲ್ಲಿ 12ಕೋಟಿ ರೂಗಳ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ತಾಲೂಕಿನ ಮಕ್ಕಳಗೇರಿಯಿಂದ ಹಿರೇಹಟ್ಟಿ ಮಾರ್ಗವಾಗಿ ಜಮನಾಳ ವರೆಗೆ 6ಕೋಟಿ ರೂ ವೆಚ್ಚದಲ್ಲಿ 14ಕೀ.ಮೀ ರಸ್ತೆ ಅಭಿವೃದ್ಧಿ, ಜತ್ತ ಜಾಂಬೊಟಿ ರಸ್ತೆಯ ಆರ್‌ಟಿಓ ಕಚೇರಿಯಿಂದ ಕ್ರಾಸ್ ವರೆಗೆ 2ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಅಕ್ಕತಂಗೇರಹಾಳ ಕ್ರಾಸ್‌ನಿಂದ ಮದವಾಲ, ಕೈತನಾಳ ಮಾರ್ಗವಾಗಿ ಕೊಳವಿ ಕಾರ್ಖಾನೆಯ ಕ್ರಾಸ್ ವರೆಗೆ 4ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಟಿ ಆರ್ ಕಾಗಲ, ಎಮ್ ಎಲ್ ತೋಲಿನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ ಸೇರಿದಂತೆ ವಿವಿಧ ಗ್ರಾಮ ಪಂಚಾಯತ ಅಧ್ಯಕ್ಷರು, ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.