ಕೊಳವಿ ಹುಲಿಕಟ್ಟಿ ಗ್ರಾಮದ ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ೮ ಆರೋಪಿತರ ಬಂಧನ.!
ಗೋಕಾಕ: ತಾಲೂಕಿನ ಕೊಳವಿ ಹುಲಿಕಟ್ಟಿ ಗ್ರಾಮದ ರಸ್ತೆಯಲ್ಲಿ ರಾತ್ರಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ ಘಟನೆಗೆ ಸಂಬAಧಿಸಿದAತೆ ೨೪ಗಂಟೆಗಳಲ್ಲಿ ೮ ಆರೋಪಿತರನ್ನು ಬಂಧಿಸುವಲ್ಲಿ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕಾಶ ಮಾರುತಿ ಹಿರಟ್ಟಿ (೨೬) ಕೊಲೆಯಾದವ ವ್ಯಕ್ತಿ ಯಾಗಿದ್ದು, ಕಳೆದ ಡಿಸೆಂಬರನಲ್ಲಿ ಕೊಳವಿ ಗ್ರಾಮದ ಗುಳಿಬಸವೇಶ್ವರ ಜಾತ್ರೆಯಲ್ಲಿ ಹತ್ಯೆಗೊಳಗಾದ ವ್ಯಕ್ತಿ ಪ್ರಕಾಶ ಮಾರುತಿ ಹೀರಟ್ಟಿ ಹಾಗೂ ವಿಜಯಕುಮಾರ ಮಲ್ಲಪ್ಪ ನಾಯಿಕ ನಡುವೆ ಜಗಳವಾಗಿತ್ತು ಆಗ ಹಿರಿಯರು ಬಗೆ ಹರಿಸಿ ತಾಕಿತ್ತು ಮಾಡಿದ್ದರು. ಆದರೂ ಸಹಿತ ಕೆಳದ ಕೊಳವಿ ಗ್ರಾಮದ ಆರೋಪಿ ವಿಜಯಕುಮಾರ ಮಲ್ಲಪ್ಪ ನಾಯಿಕ ಈತನು ಪ್ರಕಾಶನ ಮೇಲೆ ವಿಪರೀತ ಸಿಟ್ಟಾಗಿ, ಆಗಲೇ ಈತನಿಗೆ ಕೊಲೆ ಮಾಡುವ ನಿರ್ಧಾರ ಮಾಡಿದ್ದನು.
ಕೊಲೆಯಾದ ಪ್ರಕಾಶ ದಿ.೧೪ರಂದು ರಂದು ರಾತ್ರಿ ೧೨:೩೦ ಗಂಟೆಯ ಸುಮಾರಿಗೆ ಹೂಲಿಕಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಜಾತ್ರೆಗೆ ಬಂದಿದ್ದನ್ನು ಆರೋಪಿ ವಿಜಯಕುಮಾರ ಈತನು ನೋಡಿ, ಆತನಿಗೆ ಕೊಲೆ ಮಾಡಲು ತನ್ನ ಸ್ನೇಹಿತರಾದ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಆರೋಪಿತರಾದ ಉಮೇಶ ಬಾಳಪ್ಪ ಕಂಬಾರ, ಮಾರುತಿ ಯಲ್ಲಪ್ಪ ವಡ್ಡರ, ರವಿಚಂದ್ರ ಸುಭಾಸ ಪಾತ್ರೂಟ, ಮನೋಜ ಅಪ್ಪಣ್ಣ ಪಾತ್ರೂಟ, ಅಭಿಲಾಶ ಬಸವರಾಜ ಪಾತ್ರೂಟ ಸೇರಿ ಒಟ್ಟು ೮ ಜನ ಸೇರಿಕೊಂಡು ಹೂಲಿಕಟ್ಟಿ ಗ್ರಾಮದ ಕೆರೆಯ ಸಮೀಪ ಹೋಗಿ ಪ್ರಕಾಶ ಕೊಲೆ ಮಾಡುವ ಸಂಚು ರೂಪಿಸಿ, ವಾಪಸ ಜಾತ್ರೆಗೆ ಬಂದು ತನ್ನ ಒಬ್ಬ ಅಪ್ರಾಪ್ತ ಸ್ನೇಹಿತನಿಗೆ ಪ್ರಕಾಶ ಈತನ ಚಲನವಲನಗಳ ಬಗ್ಗೆ ಗಮನಿಸಿ ಅವನು ಜಾತ್ರೆಯಿಂದ ಕೊಳವಿ ರಸ್ತೆಯ ಕಡೆ ಹೋಗುವಾಗ ಮಾಹಿತಿ ಕೊಡಲು ತಿಳಿಸಿ, ಇನ್ನೂಳಿದ ಆರೋಪಿತರ ಜೊತೆ ಹೋಗಿ ತಲ್ವಾರ, ಜಂಬೆ, ಚಾಕು ತೆಗೆದುಕೊಂಡು ಬಂದು ಹೂಲಿಕಟ್ಟೆಯಿಂದ ಕೊಳವಿ ಕಡೆ ಹೋಗುವ ದಾರಿಯ ಪಕ್ಕ ಪ್ರಕಾಶ ಈತನು ಬರುವುದನ್ನು ಕಾಯುತ್ತಾ ಅವಿತು ಕುಳಿತಿದ್ದನು. ಆಗ ಪ್ರಕಾಶನಿಗೆ ಗಮನಿಸುತ್ತಿದ್ದ ಬಾಲಕನು ಪ್ರಕಾಶ ಈತನು ಒಂದು ಬೈಕ್ ಹಿಂದೆ ಕುಳಿತು ತನ್ನ ಇಬ್ಬರು ಗೆಳೆಯರ ಜೊತೆ ಹೋಗುತ್ತಿರುವ ಬಗ್ಗೆ ಆರೋಪಿ ವಿಜಯಕುಮಾರ ಈತನಿಗೆ ಮಾಹಿತಿ ನೀಡಿದ್ದಾನೆ.
ಆರೋಪಿತರಲ್ಲಿ ಒಬ್ಬನು ರಸ್ತೆಯ ಮೇಲೆ ಹೋಗಿ ಬೈಕ್‌ಗೆ ಕೈ ಮಾಡಿ ಅಡ್ಡಗಟ್ಟಿ ನಿಲ್ಲಿಸಿದಾಗ ಇನ್ನೂಳಿದ ೬ ಜನ ಆರೋಪಿತರು ಬಂದು ಬೈಕ್ ಹಿಂದೆ ಕುಳಿತಿದ್ದ ಪ್ರಕಾಶ ಇವನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಬೈಕ್‌ಗಳ ಮೇಲೆ ಪರಾರಿ ಆಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಬೆಳಗಾವಿ ಎಸ್ಪಿ ಡಾ|| ಭೀಮಾಶಂಕರ ಎಸ್.ಗುಳೇದ, ಅವರು ಸಿಪಿಐ ಸುರೇಶಬಾಬು ಆರ್ ಬಿ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು ತನಿಖಾ ತಂಡವು ಹೆಚ್ಚುವರಿ ಎಸ್ಪಿಗಳಾದ ಶೃತಿ ಎನ್ ಎಸ್, ರಾಮಗೊಂಡ ಬಿ ಬಸರಗಿ ಡಿವೈಎಸ್ಪಿ ಡಿ ಎಚ್ ಮುಲ್ಲಾ, ಸದರಿ ಕೊಲೆ ಪ್ರಕರಣದ ತನಿಖೆ ಕೈಕೊಂಡು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ೦೮ ಜನ ಆರೋಪಿತರಿಗೆ ಬಂಧಿಸಿ, ಅವರಿಂದ ಕೊಲೆ ಮಾಡಲು ಉಪಯೋಗಿಸಿದ ೨ಮೋಟಾರ ಸೈಕಲಗಳನ್ನು, ೫ಮೋಬೈಲಗಳನ್ನು & ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಗಳನ್ನು ಪತ್ತೆ ಹಚ್ಚಲು ಗೋಕಾಕ ಗ್ರಾಮೀಣ ಠಾಣೆ ಪಿಎಸ್‌ಐ ಕಿರಣ ಮೋಹಿತೆ, ಎಎಸ್‌ಐ ಎಸ್ ಕೆ ಪಾಟೀಲ, ಎಫ್ ಕೆ ಗುರನಗೌಡರ, ಟಿ ಎಸ್ ದಳವಾಯಿ, ಮತ್ತು ಸಿಬ್ಬಂದಿ ಜನರಾದ ಬಿ ವಿ ನೇರ್ಲಿ, ಜಗದೀಶ ಗುಡ್ಲಿ, ಕುಮಾರ ಪವಾರ, ವಿ ಎಸ್ ಮಲಾಮರಡಿ, ಎಮ್ ವೈ ಪಡದಲ್ಲಿ, ಆರ್ ವಿ ಅರಮನಿ, ಡಿ ಬಿ ಅಂತರಗಟ್ಟಿ, ಡಿ ಜಿ ಕೊಣ್ಣೂರ, ಎಚ್ ಡಿ ಗೌಡಿ, ಸಂಜು ಮಾನೆಪ್ಪಗೋಳ, ವಿ.ಎಲ್. ನಾಯ್ಕವಾಡಿ, ಎನ್ ಜಿ ದುರದುಂಡಿ, ಪಿ ಬಿ ನೇಸರಗಿ, ಎಮ್ ಎನ್ ಪರಮಶೆಟ್ಟಿ, ಕೆ ಐ ತಿಳಿಗಂಜಿ, ಸಂತೋಷ ವಜ್ರಮಟ್ಟಿ, ಎಸ್ ಎಸ್ ಕಲ್ಲೋಳಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್ ವಿನೋದ ತಕ್ಕನ್ನವರ ಮತ್ತು ಸಚೀನ ಪಾಟೀಲ ಯಶಸ್ವಿಯಾಗಿದ್ದಾರೆ.