ಶ್ರೀಸಿದ್ಧಾರೂಢ ಜ್ಯೋತಿಯಾತ್ರೆಯಲ್ಲಿ ಭಕ್ತಾಧಿಕಾಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಾಸಕ ರಮೇಶ ಜಾರಕಿಹೊಳಿ.!
ಗೋಕಾಕ: ಶ್ರೀಸಿದ್ಧಾರೂಢ ಜ್ಯೋತಿಯಾತ್ರೆಯೂ ದಿ.24ರಂದು ನಗರಕ್ಕೆ ಆಗಮಿಸಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಜಗದ್ಗುರು ಶ್ರೀ ಸಿದ್ಧಾರೂಢರ 190ನೆಯ ಜಯಂತೋತ್ಸವ ಮತ್ತು ಜಗದ್ಗುರು ಶ್ರೀ ಗುರುನಾಥಾರೂಢರ 115ನೇ ಜಯಂತೋತ್ಸವ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತದ ಶತಮಾನೋತ್ಸವ ನಿಮಿತ್ಯ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶ್ರೀಮಠದ ವಿಶ್ವ ವೇದಾಂತ್ ಪರಿಷತ್ತು ಕಾರ್ಯಕ್ರಮದ ಪ್ರಚಾರ ಹಾಗೂ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಜ್ಯೋತಿ ದಿ.24 ರಂದು 11 ಘಂಟೆಗೆ ಗೋಕಾಕ್ ನಗರದ ಬ್ಯಾಳಿಕಾಟ ಹತ್ತಿರ ಇರುವ ಶ್ರೀ ಹನುಮಂತ ದೇವರ ಮಂದಿರದಿAದ ಮೆರವಣಿಗೆ ಮೂಲಕವಾಗಿ ಶ್ರೀ ಸಿದ್ಧಾರೂಢರ ಪರಮಶಿಷ್ಯರಾದ ಶಾಮಾನಂದ ಆಶ್ರಮಕ್ಕೆ ತಲುಪಲಿದೆ. ಅಲ್ಲಿಂದ ಮಾಲದಿನ್ನಿ ಉಪ್ಪಾರಟ್ಟಿ ಮಮದಾಪುರ್ ಶಿವಾಪುರ ಅಜ್ಜನಕಟ್ಟಿ ಪಂಚನಾಯಕನಹಟ್ಟಿ ಮಾರ್ಗವಾಗಿ ಬಂದು ಚಿಕ್ಕನಂದಿಯ ಶ್ರೀ ಸಿದ್ಧಾರೂಢ ಮಠದಿಂದ ಮೆರವಣಿಗೆ ಮೂಲಕವಾಗಿ ಗ್ರಾಮದಲ್ಲಿ ಸಂಚರಿಸಿ ಚಿಕ್ಕನಂದಿಯ ಶ್ರೀ ಸಿದ್ಧಾರೂಢ ದರ್ಶನ ಪೀಠದಲ್ಲಿ ವಾಸ್ತವ್ಯವಿರಲಿದ್ದು ಯಾತ್ರೆ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಕಟನೆಯಲ್ಲಿ ಕೋರಿದ್ದಾರೆ.