Breaking News

ಹಿರಿಯರಿಗೆ ಗೌರವ ನೀಡದ ಸಮಾಜಕ್ಕೆ ಉಳಿಗಾಲವಿಲ್ಲ-ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ.!

Spread the love

ಹಿರಿಯರಿಗೆ ಗೌರವ ನೀಡದ ಸಮಾಜಕ್ಕೆ ಉಳಿಗಾಲವಿಲ್ಲ-ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ.!


ಗೋಕಾಕ: ಹಿರಿಯರಿಗೆ ಗೌರವ ನೀಡದ ಸಮಾಜಕ್ಕೆ ಉಳಿಗಾಲವಿಲ್ಲ, ಸರಕಾರ ವೃದ್ದರಿಗಾಗಿಯೇ ಯೋಜನೆಯನ್ನು ಘೋಷಿಸಿ ಅವರನ್ನು ಗೌರವಿಸುವ ಪವಿತ್ರ ಕಾರ್ಯ ಮಾಡಬೇಕಾಗಿದೆ ಎಂದು ಕರ್ನಾಟಕದ ಖ್ಯಾತ ಕಾದಂಬರಿಕಾರ ಬಳ್ಳಾರಿಯ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಅವರು, ರವಿವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾವಿ ಗೆಳೆಯರ ಬಳಗ, ಚೌರಿ ಹಾಗೂ ಜೇಡರ ಅಭಿಮಾನಿ ಬಳಗ ಅಡಿಹುಡಿ-ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಎಸ್ ಚೌರಿ ಅಭಿನಂದನಾ ಸಮಾರಂಭ ಹಾಗೂ ಮಕ್ಕಳ ಚೌರೀಶ ಅಭಿನಂದನ ಗ್ರಂಥ ಲೋಕಾರ್ಪಣೆ ಮತ್ತು ಆದರ್ಶ ಗುರುಮಾತೆ ಶ್ರೀಮತಿ ಸುಶೀಲಾ ಜೇಡರ ಅವರ ನಿವೃತ್ತಿ ಗೌರವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಹಲವು ವೃದ್ದಾಶ್ರಮದಲ್ಲಿ ಹೆಸರಾಂತ ಲೇಖಕರು ನ್ಯಾಯವಾದಿಗಳು, ಬಹು ಮುಖ್ಯವಾಗಿ ಮಾಜಿ ಲೋಕಾಯುಕ್ತ ಎನ್.ವೆಂಕಟಾಚಲರAತಹ ಮಹಾನ ದಿಗ್ಗಜರು ಇಂದು ವೃದ್ದಾಶ್ರಮದಲ್ಲಿ ಬದುಕುತ್ತಿರುವುದು ನಮ್ಮ ದುರ್ದೈವ. ಸರಕಾರ ಅಂತಹವರನ್ನು ಗುರುತಿಸಿ ಗೌರವದಿಂದ ನೋಡವ ಕಾರ್ಯಮಾಡಬೇಕು. ಭಾರತ ದೇಶದಲ್ಲಿ ಹಿರಿಯರಿಗೆ ಗೌರವ ಸ್ಥಾನ ವಿದೆ. ಅದನ್ನು ಅವರ ಮಕ್ಕಳು ಮಾಡದೆ ಇದ್ದಾಗ ಸರಕಾರ ಅಂತಹವರನ್ನು ಗೌರವಿಸುವ ಕಾರ್ಯ ಮಾಡಬೇಕು. ಕರ್ನಾಟಕ ಪುಣ್ಯ ನೆಲವಾಗಿದ್ದು, ಅಂತಹ ನಾಡಿನಲ್ಲಿ ನಾವು ಮನುಷ್ಯರಾಗಿ ಹುಟ್ಟದ್ದೆ ಪುಣ್ಯ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮಹಾನ ಸಾಹಿತಿಗಳು, ನಾಯಕರು ಹುಟ್ಟಿ ಬೆಳೆದ ನಾಡು ಅಂತಹ ಉತ್ತರ ಕರ್ನಾಟಕ್ಕೆ ಬೆಂಗಳೂರಿನಲ್ಲಿರುವ ಎಲ್ಲಾ ಸಾಹಿತ್ಯಿಕ ಅಕ್ಯಾಡಮಿಗಳನ್ನು ತರಬೇಕು ಎಂದ ಅವರು ಶಿಕ್ಷಕರು ಲವಲವಿಕೆಯಿಂದ ಇರಬೇಕು. ಶಿಷ್ಯನಿಂದ ಪರಾಜಿತ ಆದ ಶಿಕ್ಷಕ ಒಬ್ಬ ಶ್ರೇಷ್ಠ ಶಿಕ್ಷಕನಾಗಲು ಸಾಧ್ಯ ಅಂತಹ ಆರೋಗ್ಯವಂತ ಕ್ರೀಯಾ ಶೀಲ ಶಿಕ್ಷಕರನ್ನು ಸರಕಾರ ನಿವೃತ್ತಿ ಮಾಡಬಾರದು ಎಂದರು.
ಕನ್ನಡದ ಗಂಧ ಗಾಳಿ ಗೊತ್ತಿಲ್ಲದ ಪ್ರದೇಶದಲ್ಲಿ ಕನ್ನಡ ವನ್ನು ಬೆಳೆಸಿದ ವ್ಯಕ್ತಿ ಡಾ.ಚೌರಿ ಅವರು ಕುಡಚಿ ಭಾಗವನ್ನು ಕನ್ನಡಮಯ ಮಾಡಿ ಬಹುದೊಡ್ಡ ಕಾರ್ಯ ಮಾಡಿದ್ದಾರೆ. ಶಿಕ್ಷಕರು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಬಹುದೊಡ್ಡ ಪಾತ್ರವಹಿಸುತ್ತಾರೆ. ನಮ್ಮನ್ನು ನಾವು ತಿಳಿದುಕೊಂಡು ಬಾಳಿ ಬದುಕಬೇಕು. ಸರಕಾರ ಹಿರಿಯ ಶಿಕ್ಷಕ ಮತ್ತು ಅಧಿಕಾರಿಗಳು ಬಳಸಿಕೊಂಡು ಸಮಾಜದ ಉದ್ಧಾರಕ್ಕಾಗಿ ಕಾರ್ಯಪ್ರವೃತ್ತವಾಗಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು ಸಂಬAಧಗಳನ್ನು ಅರಿಯಲು ಸಾಧ್ಯವಿಲ್ಲ ಕನ್ನಡ ಮಾಧ್ಯಮದಲ್ಲಿ ಸಂಬAಧಗಳನ್ನು ಗುರುತಿಸಿ ಗೌರವಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಹಾಗಾಗಿ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ಬಹುದೊಡ್ಡ ಜವಾಬ್ದಾರಿ ಪಾಲಕರ ಮೇಲಿದೆ. ನಿವೃತ್ತಿಯ ನಂತರ ರಕ್ಷಣಾತ್ಮಕವಾಗಿ ಬಾಳಬೇಕು. ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಕನ್ನಡ ಮಧ್ಯಮದಲ್ಲಿಯೇ ಓದಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಕರಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಸೃಷಿಸುವ ಶಕ್ತಿಯಿದೆ. ಸೈನಿಕರು, ರೈತರು ಮತ್ತು ಶಿಕ್ಷಕರನ್ನು ಗೌರವಿಸುವ ಕಾರ್ಯ ಸಮಾಜ ಮಾಡಬೇಕು. ಶಿಕ್ಷಕ ತನ್ನಲಿಯ ಶಕ್ತಿ ಸಾಮರ್ಥ್ಯವನ್ನು ಧಾರೆ ಎರೆದು ಮಕ್ಕಳ ಭವಿಷ್ಯವನ್ನು ನಿರ್ಮಿಸಿ ಅವರನ್ನು ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಂತೇಶ ತಾವಂಶಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಚೌರಿ ದಂಪತಿಗಳನ್ನು ಗೌರವಿಸ, ಸತ್ಕರಿಸಲಾಯಿತು.
ವೇದಿಕೆಯಲ್ಲಿ ನವದೆಹಲಿಯ ಡಿ.ಮಹೇಂದ್ರ, ಐಎಎಸ್ ಅಧಿಕಾರಿ ಗಜಾನನ ಬಾಳಿ, ಬಿ.ವ್ಹಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಗಾರ, ಅಜೀತ ಮನ್ನಿಕೇರಿ, ಪ್ರೋ ಚಂದ್ರಶೇಖರ್ ಅಕ್ಕಿ, ಮಾರುತಿ ಜಡಿನವರ, ಕೆ.ಎಂ ಮಹಾದೇವಪ್ಪ, ಡಾ.ಲಕ್ಷ್ಮಣ ಚೌರಿ, ಶ್ರೀಮತಿ ಸುಶೀಲಾ ಜೇಡರ, ಅಶೋಕ್ ಲಗಮಪ್ಪಗೋಳ, ಸಿಪಿಐ ಹನುಮಂತ ನೆರಳೆ, ಜಯಾನಂದ ಮಾದರ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

11 − 9 =