Breaking News

ಸಿದ್ಧಾರೂಢ ಸ್ವಾಮಿಗಳು ತಮ್ಮ ಅದ್ವೆöÊತ ಸಿದ್ಧಾಂತದ ಮೂಲಕ ಭಕ್ತರಿಗೆ ಧರ್ಮಮಾರ್ಗ ಬೋಧಿಸಿದವರು- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.

Spread the love

ಸಿದ್ಧಾರೂಢ ಸ್ವಾಮಿಗಳು ತಮ್ಮ ಅದ್ವೆöÊತ ಸಿದ್ಧಾಂತದ ಮೂಲಕ ಭಕ್ತರಿಗೆ ಧರ್ಮಮಾರ್ಗ ಬೋಧಿಸಿದವರು- ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.

ಗೋಕಾಕ: ಸಿದ್ಧಾರೂಢ ಸ್ವಾಮಿಗಳು ತಮ್ಮ ಅದ್ವೆöÊತ ಸಿದ್ಧಾಂತದ ಮೂಲಕ ಭಕ್ತರಿಗೆ ಧರ್ಮಮಾರ್ಗ ಬೋಧಿಸಿದವರು. ಸಿದ್ಧಾರೂಢರ ಗದ್ದುಗೆ ಇಂದಿಗೂ ಜಾಗೃತ ಕೇಂದ್ರವಾಗಿದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.

ಅವರು, ಶುಕ್ರವಾರದಂದು ಜಗದ್ಗುರು ಶ್ರೀ ಸಿದ್ಧಾರೂಢರ ೧೯೦ನೆಯ ಜಯಂತೋತ್ಸವ ಮತ್ತು ಜಗದ್ಗುರು ಶ್ರೀ ಗುರುನಾಥಾರೂಢರ ೧೧೫ನೇ ಜಯಂತೋತ್ಸವ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತದ ಶತಮಾನೋತ್ಸವ ನಿಮಿತ್ಯ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶ್ರೀಮಠದ ವಿಶ್ವ ವೇದಾಂತ್ ಪರಿಷತ್ತು ಕಾರ್ಯಕ್ರಮದ ಪ್ರಚಾರ ಹಾಗೂ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಜ್ಯೋತಿಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದರು.

ಸಿದ್ಧಾರೂಢ ಸ್ವಾಮಿಗಳು ಬೀದರ್ ಜಿಲ್ಲೆಯ ಚಳಕಾಪುರದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ಮನೆ ಬಿಟ್ಟು ಲೋಕ ಸಂಚಾರ ಕೈಗೊಂಡವರು. ಹೀಗಾಗಿ ಹುಬ್ಬಳ್ಳಿಗೆ ಯಾರೇ ಹೋದರು ಮೊದಲು ಸಿದ್ಧಾರೂಢರ ಮಠಕ್ಕೆ ಭೇಟಿಕೊಟ್ಟು ಗದ್ದುಗೆಯ ದರ್ಶನ ಪಡೆಯುತ್ತಾರೆ. ಮಠದಲ್ಲಿ ಪ್ರತಿನಿತ್ಯ ಒಂದಿಲ್ಲೊAದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಜನರ ಆಧ್ಯಾತ್ಮಿಕ ಸವಾಲುಗಳಿಗೆ ಕಿವಿಯಾಗಿ. ನಂಬಿ ಬಂದವರ ದುಗುಡಗಳನ್ನು ಹೋಗಲಾಡಿಸಿ ಬಾಳು ಬೆಳಗಿದವರು. ಪಂಚಾಕ್ಷರಿ ಮಂತ್ರವನ್ನು ಬಹಿರಂಗವಾಗಿ ಪಠಿಸಲು ಜನರಿಗೆ ಪ್ರೇರಣೆ ನೀಡಿದ್ದು ಸಿದ್ಧಾರೂಢ ಮಹಾಸ್ವಾಮಿಗಳು ಎಂದು ತಿಳಿಸಿದರು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶ್ರೀಮಠದ ಜ್ಯೋತಿಯಾತ್ರೆ ನಗರದ ಬ್ಯಾಳಿಕಾಟ ಹತ್ತಿರ ಇರುವ ಶ್ರೀ ಹನುಮಂತ ದೇವರ ಮಂದಿರದಿAದ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕವಾಗಿ ಶ್ರೀ ಸಿದ್ಧಾರೂಢರ ಪರಮಶಿಷ್ಯರಾದ ಶಾಮಾನಂದ ಆಶ್ರಮಕ್ಕೆ ತಲುಪಿತು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶ್ರೀಮಠದ ವಿಶ್ವ ವೇದಾಂತ್ ಪರಿಷತ್ತು ಕಾರ್ಯಕ್ರಮದ ಪ್ರಚಾರ ಹಾಗೂ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ದಿ.೨೦ರಿಂದ ೨೭ವರಗೆ ನಡೆಯಲಿರುವ ವಿಶ್ವ ವೇದಾಂತ ಪರಿಷತ ಕಾರ್ಯಕ್ರಮದ ದಿ.೨೦ರಂದು ಉದ್ಘಾಟನೆಗೊಳ್ಳುವ ಕಾರ್ಯಕ್ರಮದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ೫ಲಕ್ಷ ರೂಪಾಯಿ ದೇಣಿಗೆ ನೀಡಿದ ಹಿನ್ನಲೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಶಾಸಕರ ಪರವಾಗಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಶಾಮಾನಂದ ಆಶ್ರಮದ ಶ್ರೀ ಅತ್ಯಾನಂದ ಮಹಾಸ್ವಾಮಿಗಳು, ಉಪ್ಪಾರಹಟ್ಟಿ ಸಿದ್ಧಾರೂಢ ಮಠದ ಶ್ರೀ ನಾಗೇಶ್ವರ ಮಹಾಸ್ವಾಮಿಗಳು, ತಳಕಟ್ನಾಳದ ಶ್ರೀ ಆತ್ಮಾನಂದ ಸ್ವಾಮಿಗಳು, ಹುಣಚ್ಯಾಳದ ಪ್ರಭುದೇವ ಸ್ವಾಮಿಗಳು, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಶ್ರೀಮಠದ ಚೇರಮನ ಬಸವರಾಜ ಕಲ್ಯಾಣಶೆಟ್ಟರ, ವಿಶ್ವವೇದಾಂತ ಪರಿಷತ ಅಧ್ಯಕ್ಷ ಶಾಮಾನಂದ ಪೂಜೇರಿ, ಧರ್ಮದರ್ಶಿಗಳಾದ ಉದಯಕುಮಾರ ನಾಯಕ, ಚನ್ನವೀರ ಮುಂಗರವಾಡಿ, ಬಾಳು ಮಗದಿಕೊಂಡಿ, ಗೀತಾ ಕಲಬುರ್ಗಿ, ಶಾಸಕರ ಆಪ್ತಸಹಾಯಕ ಭೀಮಗೌಡ ಪೋಲಿಸಗೌಡರ, ಮುಖಂಡರಾದ ಅಶೋಕ ಪೂಜೇರಿ, ಮಹಾಂತೇಶ ತಾಂವಶಿ, ಭೀಮಶಿ ಭರಮಣ್ಣವರ, ಶಂಕರಗೌಡ ಸಂಗೊAದಿ, ಈರಣ್ಣ ಪಾಳೇದ, ಸಂಜು ಪೂಜೇರಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಬೆಳಂಬೆಳಗ್ಗೆ ಲಾರಿ-ಕಾರು ಮಧ್ಯೆ ಅಪಘಾತ

Spread the love ಬೆಳಗಾವಿ : ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಸಮೀಪ ನಡೆದ ದುರ್ಘಟನೆ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ …

Leave a Reply

Your email address will not be published. Required fields are marked *

twelve − 7 =