Breaking News

ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ- ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ.!

Spread the love

ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ- ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ.!


ಗೋಕಾಕ: ಭಾರತೀಯ ಸಮಾಜದಲ್ಲಿ ಮಾನವೀಯ ಮೌಲ್ಯವಿರುವ ನಮ್ಮಲ್ಲಿ ವಿಕಲತೆ ಹೊಂದಿರುವ ಅಂಗವಿಕಲ ಮಕ್ಕಳನ್ನು ನಾವೆಲ್ಲರೂ ಸಮಾನತೆಯಿಂದ, ಮಾನವೀಯತೆಯಿಂದ ನೋಡುವದರೊಂದಿಗೆ ಈ ವಿಕಲಚೇತನ ಮಕ್ಕಳಿಗೆ ಇತರ ಮಕ್ಕಳ ಹಾಗೆ ಅವರನ್ನು ಪ್ರೋತ್ಸಾಹಿಸಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಅದಕ್ಕಾಗಿ ನಾವು ನೀವೆಲ್ಲ ಸೇರಿ ಪ್ರಯತ್ನಿಸೋಣ ಈ ಮಕ್ಕಳಿಗೆ ಅನುಕಂಪ ಬೇಡ ಅವಕಾಶ ನೀಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ ಹೇಳಿದರು.
ನಗರದ ಎನ್.ಇ.ಎಸ್. ಪ್ರೌಢಶಾಲೆ ಯಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಇವರ ಸಂಯುಕ್ತ ಆಶ್ರ‍್ರಯದಲ್ಲಿ ಗೋಕಾಕ ವಲಯ ಮಟ್ಟದ ವಿಕಲಚೇತನ ಮಕ್ಕಳ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರವನ್ನ ಅವರು ಉಧ್ಘಾಟಿಸಿ ಮಾತನಾಡಿದರು.
ಗೋಕಾಕ ವಲಯದಲ್ಲಿ ೪೨೧ ವಿಕಲಚೇತನ ಮಕ್ಕಳು ವಿವಿಧ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ವಿಕಲಚೇತನ ಮಕ್ಕಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿದರೆ ಅವರು ಶಾಲೆ ಕಲಿತು ಪ್ರತಿಭಾನ್ವಿತರಾಗುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳೊಂದಿಗೆ ಈ ಮಕ್ಕಳ ಸರ್ವಾಗೀನ ಅಭಿವೃಧ್ದಿಗೆ ಶ್ರಮಿಸುತ್ತಿದೆ. ಸರ್ವ ಶಿಕ್ಷಣ ಅಭಿಯಾಣ ಯೋಜನೆ ಅಡಿಯಲ್ಲಿ ಎಲ್ಲ ಅಂಗವಿಕಲರಿಗೆ ಸೌಲಭ್ಯಗಳನ್ನು ನೀಡುತ್ತಾರೆ. ಪ್ರತಿ ಬುಧವಾರ ಹಾಗೂ ಶುಕ್ರವಾರ ವಿಕಲಚೇತನ ಮಕ್ಕಳಿಗೆ ಸಂಪನ್ಮೂಲ ಕೇಂದ್ರದಲ್ಲಿ ಫಿಜಿಯೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರತಿ ವರ್ಷ ಮಕ್ಕಳಿಗೆ ಸಾರಿಗೆ ಭತ್ತೆ/ ಬೆಂಗಾವಲು ಭತ್ತೆ/ ರೀಡರ್ ಭತ್ತೆ/ಹೆಣ್ಣು ಮಕ್ಕಳ ವಿಷೇಶ ಭತ್ತೆ, ಹಾಗೂ ಉಚಿತವಾಗಿ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತದೆ. ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಮ್.ಬಿ. ಪಾಟೀಲ ಇವರು ಪ್ರಸ್ಥಾವಿಕವಾಗಿ ಮಾತನಾಡಿ, ವಿಕಲಚೇತನ ಮಕ್ಕಳ ಬೌಧಿಕ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿ ತಾಲೂಕಿನಲ್ಲಿ ಸಂಪನ್ಮೂಲ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ಮಕ್ಕಳ ಆರೋಗ್ಯ ತಪಾಸಣೆಗಾಗಿ ರಾಷ್ಟಿçÃಯ ಬಾಲಸ್ವಾಸ್ಥ ಯೋಜನೆಯಡಿಯಲ್ಲಿ ಎಲ್ಲ ತರಹದ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು. ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನು ನೀಡುವುದರ ಜೊತೆಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯವನ್ನು ನೀಡಿರುವುದರಿಂದ ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಮಕ್ಕಳಿಗೆ ಸಿಗುವ ಸರಕಾರದ ಸೌಲಬ್ಯಗಳ ಬಗ್ಗೆ ತಿಳಿಸಿದರು.
ಹುಬ್ಬಳಿ ಮನೋವಿಕಾಸ ಸಂಸ್ಥೆಯ ಡಾ.ಹಿರೇಮಠ ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳ ತಪಾಸಣೆ ಮಾಡಿ ಮಕ್ಕಳಿಗೆ ಬೇಕಾದ ಸಾಧನ ಸಲಕರಣೆಗಳನ್ನು ಗುರುತುಮಾಡಿದರು. ಸರಕಾರಿ ತಾಲೂಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಸಂಪನ್ಮೂಲ ವ್ಯಕ್ತಿಗಳಾದ ಐ ಬಿ ಸಂಪಗಾAವಿ, ಎಚ್ ಎಚ್ ಕೌಜಗೆರಿ, ಸಿ.ಆರ್.ಪಿ/ಬಿ.ಆರ್.ಪಿ ಹಾಗೂ ಇ.ಸಿ.ಓ ಅಧಿಕಾರಿಗಳು ವಿಕಲಚೇತನ ಮಕ್ಕಳ ಪಾಲಕರು ಪೋಷಕರು ಶಾಲಾ ಶಿಕ್ಷಕರು ಶಾಲೆಯ ಎಸ್‌ಡಿಎಮ್‌ಸಿ, ಸದಸ್ಯರು ಪ್ರಧಾನ ಗುರುಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ನಡೆಯಿತು. ವಿ ಎಸ್ ಖನಗಾಂವಿ ಸ್ವಾಗತಿಸಿದರು. ಎ ವಿ ದಳವಾಯಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಿ.ಐ.ಇ.ಆರ್.ಟಿ ಎಸ್ ಬಿ ಕೊಂತಿ ವಂದಿಸಿದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

16 + five =