Breaking News

2025 ಕ್ಕೆ ಮಹಾಲಕ್ಷ್ಮೀ ದೇವಿಯ ಜಾತ್ರೆಯು ನಿಗದಿಯಾಗಿದೆ-ಶಾಸಕ  ಬಾಲಚಂದ್ರ ಜಾರಕಿಹೊಳಿ!!

Spread the love

2025 ಕ್ಕೆ ಮಹಾಲಕ್ಷ್ಮೀ ದೇವಿಯ ಜಾತ್ರೆಯು ನಿಗದಿಯಾಗಿದೆ-ಶಾಸಕ  ಬಾಲಚಂದ್ರ ಜಾರಕಿಹೊಳಿ!!

ಗೋಕಾಕ: ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮೀ ಎರಡೂ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅರಭಾವಿ ಶಾಸಕ  ಬಾಲಚಂದ್ರ ಜಾರಕಿಹೊಳಿ ಅವರು ಜಾತ್ರಾ ಕಮೀಟಿಗೆ ಸೂಚನೆ ನೀಡಿದರು.
       ಗುರುವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಜಾತ್ರಾ ಕಮೀಟಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು,
ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲ ಕೆಲಸ- ಕಾರ್ಯಗಳನ್ನು ಮಾಡುವಂತೆ ಸೂಚಿಸಿದರು.
       ಬರುವ 2025 ಕ್ಕೆ ಮಹಾಲಕ್ಷ್ಮೀ ದೇವಿಯ ಜಾತ್ರೆಯು ನಿಗದಿಯಾಗಿದೆ. ಅತೀ ಸಡಗರ,ಸಂಭ್ರಮ,
ಅದ್ದೂರಿಯಾಗಿ ಜಾತ್ರೆಯನ್ನು ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆಯಬೇಕಾಗಿದೆ.
ಬರುವ ಅ. 15 ರಿಂದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳನ್ನು ಆರಂಭಿಸಬೇಕು.
ಗೋಕಾಕ್- ನಗರದ ಮಹಾಲಕ್ಷ್ಮೀ  ದೇವಸ್ಥಾನದ ಜೀರ್ಣೋದ್ಧಾರದ ಸಂಬಂಧ ತಮ್ಮ ಗೃಹ ಕಚೇರಿಯಲ್ಲಿ ಕರೆದ ಜಾತ್ರಾ ಕಮೀಟಿಯ ಸದಸ್ಯರನ್ನು ಉದ್ದೇಶಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು.
ದಿ.20 ರಿಂದ ದೇವಸ್ಥಾನದ ಜೀರ್ಣೋದ್ಧಾರದ ವಂತಿಗೆಯನ್ನು ಜಾತ್ರಾ ಕಮೀಟಿಯವರು ಸಂಗ್ರಹ ಮಾಡಬೇಕು. ಮೊದಲು ಹಾಲುಮತದ ಸಮಾಜದ ಐವರಿಂದ  ವಂತಿಗೆಯನ್ನು ಸ್ವೀಕರಿಸುವ ಮೂಲಕ ವಂತಿಗೆಗೆ ಚಾಲನೆ ನೀಡಬೇಕೆಂದು ಅವರು ಹೇಳಿದರು.      ದೇವಸ್ಥಾನದ ಎರಡು ದೊಡ್ಡದಾದ  ಹೊಸ ರಥಗಳನ್ನು ನಿರ್ಮಿಸುವಂತೆಯೂ ಅವರು  ಕಮೀಟಿಯವರಿಗೆ ಸೂಚನೆ ನೀಡಿದರು.
        ಅಂದಾಜು 6.50 ಕೋಟಿ ರೂಪಾಯಿ ವೆಚ್ಚವನ್ನು ಜಾತ್ರೆಗೆ ಹಣವನ್ನು ಸಂಗ್ರಹಿಸಬೇಕಾಗಿದೆ. ಇದನ್ನು ಸಾರ್ವಜನಿಕ ಮೂಲಗಳಿಂದ ವಂತಿಗೆ ಮೂಲಕ ಪಡೆಯಬೇಕಾಗಿದೆ. ಅಲ್ಲದೇ ಎರಡೂ ಮಹಾಲಕ್ಷ್ಮೀ
ದೇವಸ್ಥಾನಗಳನ್ನು ಜಾತ್ರೆಗೂ ಮುನ್ನವೇ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಬೇಕಾಗಿದೆ. 2024 ರ ಡಿಸೆಂಬರ್ ತಿಂಗಳ ಅಂತ್ಯದೊಳಗೆ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಮುಗಿಸಬೇಕಿದೆ.  ಈ ಹಿನ್ನೆಲೆಯಲ್ಲಿ ಕಮೀಟಿ ಸದಸ್ಯರು ಹೆಚ್ಚಿನ ಮುತುವರ್ಜೀ ವಹಿಸಿ ಕೆಲಸವನ್ನು ಮಾಡುವಂತೆ ಅವರು ಸೂಚಿಸಿದರು.
        ಎಲ್ಲ ಹಂತದ ಜನಪ್ರತಿನಿಧಿಗಳು, ಉದ್ದಿಮೆದಾರರು, ವ್ಯಾಪಾರಸ್ಥರು,ಅಂಗಡಿಕಾರರು, ವಿವಿಧ ಸಮುದಾಯದ  ಪ್ರತಿಷ್ಠಿತರನ್ನು ಭೇಟಿ ಮಾಡಿ ದೇಣಿಗೆ ಹಣವನ್ನು ಸಂಗ್ರಹ ಮಾಡಬೇಕು. ಯಾರೂ ಎಷ್ಟೇ ದೇಣಿಗೆ ನೀಡಿದರೂ ಅದನ್ನು ಮುಕ್ತ ಮನಸ್ಸಿನಿಂದ ಪ್ರೀತಿಯಿಂದ ಸ್ವೀಕರಿಸುವಂತೆಯೂ ಅವರು ತಿಳಿಸಿದರು.
       ಈ ಸಂದರ್ಭದಲ್ಲಿ ಜಾತ್ರಾ ಕಮೀಟಿಯ ಉಪಾಧ್ಯಕ್ಷ ಅಶೋಕ ಮುಲ್ಕಿ ಪಾಟೀಲ, ಪ್ರಭು ಚೌವ್ಹಾಣ,ಅಶೋಕ ತುಕ್ಕಾರ, ಅಶೋಕ ಹೆಗ್ಗಣ್ಣವರ, ಅಡಿವೆಪ್ಪ ಕಿತ್ತೂರ, ಬಸವಣ್ಣಿ ಬನ್ನಿ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

About Yuva Bharatha

Check Also

ಬಿಜೆಪಿ ಅಧಿಕೃತ ಅಭ್ಯರ್ಥಿಯಾದ ಜಗದೀಶ ಶೆಟ್ಟರಗೆ ಬೆಳಗಾವಿ ಜಿಲ್ಲಾ ಕುರುಬ ಸಮಾಜ ಬೆಂಬಲ- ಅಧ್ಯಕ್ಷ ಮಡ್ಡೆಪ್ಪ ತೋಳಿನವರ.!

Spread the loveಬಿಜೆಪಿ ಅಧಿಕೃತ ಅಭ್ಯರ್ಥಿಯಾದ ಜಗದೀಶ ಶೆಟ್ಟರಗೆ ಬೆಳಗಾವಿ ಜಿಲ್ಲಾ ಕುರುಬ ಸಮಾಜ ಬೆಂಬಲ- ಅಧ್ಯಕ್ಷ ಮಡ್ಡೆಪ್ಪ ತೋಳಿನವರ.! …

Leave a Reply

Your email address will not be published. Required fields are marked *

5 + 4 =